ETV Bharat / bharat

ಮಾಟ ಮಂತ್ರದ ಹೆಸರಲ್ಲಿ ಮೂವರು ಮಹಿಳೆಯರ ತಲೆಬೋಳಿಸಿ ಚಿತ್ರಹಿಂಸೆ - ಮೌಢ್ಯತೆ

ಮಾಟಮಂತ್ರದ ಹೆಸರಲ್ಲಿ ಸಾರ್ವಜನಿಕವಾಗಿ ಮೂವರು ಮಹಿಳೆಯರ ಕೇಶ ಮುಂಡನ ಮಾಡಿಸಿ, ಅವರಿಗೆ ಥಳಿಸಿ ಚಿತ್ರಹಿಂಸೆ ನೀಡಿರುವ ಖಂಡನೀಯ ಘಟನೆ ಬಿಹಾರ್​ನ ಮುಜಾಫರ್​​ಪುರದ​​ಲ್ಲಿ ನಡೆದಿದೆ.

mujapharpur crime news
ಮೂವರು ಮಹಿಳೆಯರ ತಲೆಬೋಳಿಸಿ ಚಿತ್ರಹಿಂಸೆ
author img

By

Published : May 5, 2020, 8:32 PM IST

ಮುಜಾಫರ್​​ಪುರ: ಮೌಢ್ಯತೆ, ಮಾಟಮಂತ್ರದ ಹೆಸರಿನಲ್ಲಿ ಮೂವರು ಮಹಿಳೆಯರ ತಲೆಕೂದಲನ್ನು ಬೋಳಿಸಿರುವ ಅಮಾನವೀಯ ಘಟನೆ ಬಿಹಾರ್​​ನ ಮುಜಾಫರ್​​ಪುರದ​​ಲ್ಲಿ ಬೆಳಕಿಗೆ ಬಂದಿದೆ.

ಮೂವರು ಮಹಿಳೆಯರ ತಲೆಬೋಳಿಸಿ ಚಿತ್ರಹಿಂಸೆ

ಮುಜಾಫರ್​​ಪುರ ಜಿಲ್ಲೆಯ ಹಮ್ಮರಿ ಪೊಲೀಸ್ ಠಾಣೆ ವ್ಯಾಪ್ತಿಯ ಡಕ್ರಮಾ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದ್ದು, ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.

ಹಳ್ಳಿಯ ಕೆಲವರ ಪ್ರಾಬಲ್ಯದಿಂದ ಗ್ರಾಮದ ಮೂವರು ಮಹಿಳೆಯರಿಗೆ ಮಾಟಗಾತಿಯೊಬ್ಬಳು ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸಿದ್ದಾಳೆ. ಅಲ್ಲದೇ ಈ ಮಹಿಳೆಯರನ್ನು ಹೊಡೆದು, ಬಡಿದು ಹಿಂಸೆ ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಷಯ ಬೆಳಕಿಗೆ ಬಂದ ನಂತರ ಮುಜಾಫರ್​​ಪುರ ಜಿಲ್ಲಾಡಳಿತ ಮತ್ತು ಹಮ್ಮರಿ ಪೊಲೀಸ್ ಠಾಣೆ ಎಚ್ಚೆತ್ತುಕೊಂಡು ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ 12 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.