ETV Bharat / bharat

''ಮಳೆಗಾಲದ ಸಂಸತ್​​​ ಅಧಿವೇಶನ ನಿಗದಿಯಂತೆ ನಡೆಯುತ್ತದೆ'' - ಸ್ಪೀಕರ್ ಓಂ ಬಿರ್ಲಾ

ಕೋವಿಡ್​ 19 ಬಿಕ್ಕಟ್ಟಿನ ನಡುವೆಯೂ ಮುಂಬರುವ ಮಳೆಗಾಲದ ಸಂಸತ್​ ಅಧಿವೇಶನ ಎಂದಿನಂತೆ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್​ ಸ್ಪಷ್ಟಪಡಿಸಿದ್ದಾರೆ.

Speaker Om Birla
ಸ್ಪೀಕರ್ ಓಂ ಬಿರ್ಲಾ
author img

By

Published : May 10, 2020, 11:47 PM IST

ನವದೆಹಲಿ: ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಯಾವುದೇ ಅಡೆತಡೆಯಿಲ್ಲದೇ ವೇಳಾಪಟ್ಟಿಯಂತೆ ನಡೆಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

"ಸಂಸತ್ತಿನ ಮಳೆಗಾಲದ ಅಧಿವೇಶನ ನಿಗದಿಯಂತೆ ನಡೆಯಲಿದೆ. ಇಲ್ಲಿಯವರೆಗೆ, ಅಧಿವೇಶನವನ್ನು ಮುಂದೂಡುವ ಯಾವುದೇ ಚಿಂತನೆಯಿಲ್ಲ. ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ'' ಎಂದು ಓಂ ಬಿರ್ಲಾ ತಿಳಿಸಿದ್ದಾರೆ.

ಕೊರೊನಾ ವೈರಸ್ ವೇಗವಾಗಿ ವ್ಯಾಪಿಸುತ್ತಿದ್ದರೂ ಸಂಸತ್​ ಅಧಿವೇಶನಕ್ಕೆ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಭರವಸೆ ವ್ಯಕ್ತಪಡಿಸಿದ್ದಾರೆ. ಮಳೆಗಾಲದ ಅಧಿವೇಶನ ಸಾಮಾನ್ಯವಾಗಿ ಜೂನ್​ ಕೊನೆಯ ವಾರ ಅಥವಾ ಜುಲೈನ ಮೊದಲ ವಾರ ಆರಂಭವಾಗುತ್ತದೆ. ಕೋವಿಡ್-19 ಬಿಕ್ಕಟ್ಟಿನಿಂದ ವೇಳಾಪಟ್ಟಿಯಲ್ಲಿ ಏರುಪೇರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.