ತಿರುವನಂತಪುರಂ: ಕೇರಳದ ಕೃಷಿ ಸಚಿವ ವಿ.ಎಸ್ ಸುನಿಲ್ ಕುಮಾರ್ ಸೆಲ್ಫ್ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ.
ಜೂನ್ 15ರಂದು ತ್ರಿಶೂರ್ನ ಕಾರ್ಪೊರೇಷನ್‌ನಲ್ಲಿ ಕೊರೊನಾ ಪರಿಶೀಲನಾ ಸಭೆ ನಡೆಸಲಾಗಿತ್ತು. ಅಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತನಿಗೆ ಕೊರೊನಾ ಇರುವುದಾಗಿ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಪರ್ಸನಲ್ ಅಸಿಸ್ಟೆಂಟ್ ಸೆಲ್ಫ್ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ.
ಕೊರೊನಾ ಪರಿಶೀಲನಾ ಸಭೆಯಲ್ಲಿ 13 ಜನರು ಭಾಗಿಯಾಗಿದ್ದು, ಅವರೆಲ್ಲರನ್ನೂ ಕ್ವಾರೆಂಟೈನ್ಗೆ ಒಳಗಾಗುವಂತೆ ಸೂಚಿಸಲಾಗಿದೆ.