ETV Bharat / bharat

ಉತ್ತರಪ್ರದೇಶದಲ್ಲಿ ಹೆದ್ದಾರಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ - ಹೆದ್ದಾರಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ ಸುದ್ದಿ

ಭಾನುವಾರ ಸಂಜೆ ಮಿರಾನ್‌ಪುರ ಪಟ್ಟಣದ ಖತೀಮಾ-ಪಾಣಿಪತ್ ಹೆದ್ದಾರಿಯಲ್ಲಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆರತಿ ಎಂಬ ಕಾರ್ಮಿಕ ಮಹಿಳೆಗೆ ಹೆರಿಗೆ ನೋವು ಕಾಣಿಸಿತ್ತು.

ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
author img

By

Published : Jun 15, 2020, 8:59 PM IST

ಮುಜಫರ್​ನಗರ : ಉತ್ತರಪ್ರದೇಶದ ಮುಜಫರ್​ನಗರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕ ಮಹಿಳೆಯೊಬ್ಬರಿಗೆ ದಾರಿ ಮಧ್ಯೆ ಹೆರಿಗೆಯಾಗಿದೆ. ತನ್ನ ಗಂಡನೊಂದಿಗೆ ಹಿಮಾಚಲಪ್ರದೇಶದಿಂದ ತನ್ನ ತವರೂರಿಗೆ ತೆರಳುತ್ತಿದ್ದಾಗ ಗಂಡು ಮಗುವಿಗೆ ಈ ಮಹಾತಾಯಿ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಸಂಜೆ ಮಿರಾನ್‌ಪುರ ಪಟ್ಟಣದ ಖತೀಮಾ-ಪಾಣಿಪತ್ ಹೆದ್ದಾರಿಯಲ್ಲಿ ಗರ್ಭಿಣಿ ತನ್ನ ಗಂಡನೊಂದಿಗೆ ಬಡಾನ್ ಜಿಲ್ಲೆಗೆ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆರತಿ ಎಂಬ ಕಾರ್ಮಿಕ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ಆರತಿ ಮಗುವಿಗೆ ಜನ್ಮ ನೀಡಿದ ಬಳಿಕ ಜನಸತ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ ಎಂದು ಆಸ್ಪತ್ರೆಯ ಇನ್‌ಚಾರ್ಜ್ ಅಶೋಕ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.