ETV Bharat / bharat

ಹೆಲ್ಮೆಟ್​ ಇಲ್ಲದೇ ಕಾರು​ ಚಲಾಯಿಸಿದ ಎಂದು 500 ರೂ ದಂಡ ವಿಧಿಸಿದ ಪೊಲೀಸಪ್ಪ!

ಉತ್ತರ ಪ್ರದೇಶದ ಬರೈಲಿಯಲ್ಲಿ ಟ್ರಾಫಿಕ್​ ಪೊಲೀಸ್​ ಒಬ್ಬರು ಮಾಡಿದ ಯಡವಟ್ಟಿನಿಂದ ಕಾರು ಚಲಾವಣೆ ಮಾಡಿದ ಚಾಲಕನಿಗೆ ಹೆಲ್ಮೆಟ್​ ಧರಿಸಿಲ್ಲವೆಂದು 500 ರೂ. ದಂಡ ವಿಧಿಸಿ ಇ-ಚಲನ್​ ನೀಡಿದ್ದಾರೆ. ಅಷ್ಟಕ್ಕೂ ಕಾರು ಚಾಲಕನ​​ ಬಳಿ ಎಲ್ಲ ದಾಖಲೆಗಳೂ ಇತ್ತು. ಆದರೆ ಟ್ರಾಫಿಕ್​ ಪೊಲೀಸರ ಪ್ರಮಾದದಿಂದಾಗಿ ಚಲನ್​ ತಪ್ಪಾಗಿ ಇವರಿಗೆ ಬಂದಿದೆ.

500 ರೂ ದಂಡ ವಿಧಿಸಿದ ಪೊಲೀಸಪ್ಪ
author img

By

Published : Sep 5, 2019, 11:35 PM IST

ಬರೈಲಿ (ಉತ್ತರ ಪ್ರದೇಶ): ಇಲ್ಲಿನ ಟ್ರಾಫಿಕ್​ ಪೊಲೀಸ್​ ಒಬ್ಬರು ಮಾಡಿದ ಯಡವಟ್ಟಿನಿಂದ ಕಾರು ಚಲಾವಣೆ ಮಾಡಿದ ಚಾಲಕನಿಗೆ ಸುಖಾ ಸುಮ್ಮನೆ 500 ರೂ. ದಂಡ ವಿಧಿಸಿ ಇ-ಚಲನ್​ ನೀಡಿದ್ದಾರೆ.

ಬಿಸ್​ನೆಸ್​ ಮ್ಯಾನ್ ಅನಿಶ್​ ನೂರುಲ್ಲಾ, ಇ- ಚಲನ್​ ಪಡೆದ ವ್ಯಕ್ತಿ. ಇವರಿಗೆ ತಮಗೆ ತಿಳಿಯದಂತೆ 500 ರೂ. ದಂಡ ಹಾಕಲಾದ ಚಲನ್​ ಬಂದಿದೆ. ಹೆಲ್ಮೆಟ್​ ಇಲ್ಲದ ಪ್ರಯಾಣಕ್ಕೆ ವಿಧಿಸಿದ ಚಲನ್​ ನೋಡಿ ಅನಿಶ್ ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಅನಿಸ್​​​ ನೂರುಲ್ಲಾ​​ ಬಳಿ ಎಲ್ಲಾ ದಾಖಲೆಗಳೂ ಇತ್ತು. ಆದರೆ ಟ್ರಾಫಿಕ್​ ಪೊಲೀಸರ ಪ್ರಮಾದದಿಂದಾಗಿ ಚಲನ್​ ತಪ್ಪಾಗಿ ಇವರಿಗೆ ಬಂದಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಲ್ಲಿನ ಎಸ್​ಪಿ ಸುಭಾಷ್​ ಚಂದ್ರ ಗ್ಯಾಂಗ್ವರ್​, ಟ್ರಾಫಿಕ್​ ಪೊಲೀಸರ ತಪ್ಪಿನಿಂದ ಈ ಯಡವಟ್ಟು ನಡೆದಿದೆ. ಈ ಥರದ ತಪ್ಪುಗಳು ನಡೆದಿರುವ ಬಗ್ಗೆ ಈ ಹಿಂದೆಯೂ ವರದಿಯಾಗಿವೆ. ಕಂಪ್ಯೂಟರೀಕೃತ ಚಲನ್​ ಮುದ್ರಿಸುವಾಗ, ಟಚ್​ ಸ್ಕ್ರೀನ್​ನಲ್ಲಿರುವ ಆಯ್ಕೆಯ ಮೇಲೆ ಟಚ್​ ಮಾಡುವ ವೇಳೆ ಈ ತಪ್ಪು ನಡೆದಿದೆ. ಅನಿಶ್​ ನೂರುಲ್ಲಾ ಬಳಿಯಿಂದ ಯಾವುದೇ ದಂಡ ಪಡೆದಿಲ್ಲ ಎಂದು ಎಸ್​ಪಿ ಸ್ಪಷ್ಟಪಡಿಸಿದ್ದಾರೆ.

Intro:Body:

chalan

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.