ETV Bharat / entertainment

ಹ್ಯಾಪಿ ಬರ್ತ್​​ಡೇ ಗೊಲ್ಲು: ತಮ್ಮನೊಂದಿಗಿನ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​; ಯಶ್​ ಸಾಥ್ - RADHIKA PANDIT YASH

ಸಹೋದರನ ಜನ್ಮದಿನದ ಹಿನ್ನೆಲೆ ನಟಿ ರಾಧಿಕಾ ಪಂಡಿತ್​ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Radhika Pandit family
ರಾಧಿಕಾ ಪಂಡಿತ್ ಕುಟುಂಬ (Photo source: ETV Bharat)
author img

By ETV Bharat Entertainment Team

Published : Nov 8, 2024, 5:13 PM IST

ರಾಧಿಕಾ ಪಂಡಿತ್​​​​, ಒಂದು ಸಮಯ ಕನ್ನಡ ಚಿತ್ರರಂಗವನ್ನಾಳಿದ ಖ್ಯಾತ ನಟಿ. ಸದ್ಯ ಸಿನಿರಂಗದಿಂದ ದೂರವುಳಿದಿದ್ದರೂ, ಕ್ರೇಜ್​​ ಕಿಂಚಿತ್ತೂ ಕಡಿಮೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಚಂದನವನದ ಚೆಂದುಳ್ಳಿ ಚೆಲುವೆ ಆಗಾಗ್ಗೆ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇದೀಗ ತಮ್ಮನ ಜೊತೆಗಿನ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ.

ಹೌದು, ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದ ರಾಧಿಕಾ ಪಂಡಿತ್​ ಅವರ ಸಹೋದರ ಗೌರಂಗ್​ ಪಂಡಿತ್​ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕುಟುಂಬಸ್ಥರು ಸೇರಿ ಸ್ನೇಹಿತರು ಗೌರಂಗ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾಧಿಕಾ ಅವರೂ ಕೂಡಾ ತಮ್ಮನಿಗೆ ಬಹಳ ವಿಶೇಷವಾಗಿ ಶುಭ ಕೋರಿದ್ದಾರೆ. ಹಂಚಿಕೊಂಡಿರುವ ಫೋಟೋಗಳು ಆಕರ್ಷಕವಾಗಿವೆ. ರಾಕಿಂಗ್​ ಸ್ಟಾರ್​​ ಯಶ್​ ಕೂಡಾ ಈ ಫೋಟೋದಲ್ಲಿದ್ದಾರೆ.

Radhika Pandit family
ರಾಧಿಕಾ ಪಂಡಿತ್ ಕುಟುಂಬ (Photo source: ETV Bharat)

''ಡಿಯರ್​ ಗೌರಂಗ್, ನಿಮ್ಮಂತ ಸಹೋದರನನ್ನು ಪಡೆಯಲು ನಿಜವಾಗಿಯೂ ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ಹ್ಯಾಪಿ ಬರ್ತ್​ಡೇ ಮೈ ಗೊಲ್ಲು. ಲವ್​ ಯೂ ಲಾಟ್ಸ್​'' ಎಂದು ಬರೆದುಕೊಂಡಿದ್ದಾರೆ. ಶೇರ್ ಮಾಡಿರುವ ಫೋಟೋಗಳು ಬಹಳ ಸುಂದರವಾಗಿವೆ. ನಟಿ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ರಾಧಿಕಾ ಪಂಡಿತ್​​, ಗೌರಂಗ್​ ಜೊತೆ ಯಶ್​ ಕೂಡಾ ಇದ್ದಾರೆ. ಫೋಟೋ ಪ್ರೈವೆಟ್​​ ಜೆಟ್​ ಬಳಿ ಕ್ಲಿಕ್ಕಿಸಿದಂತೆ ಇದೆ. ಮೂವರೂ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಅವರು ಯಶ್​ ಕೈ ಹಿಡಿದಿದ್ದು, ಮೇಡ್​ ಫಾರ್​ ಈಚ್ ಅದರ್​​​​ ಅಂತಿದ್ದಾರೆ ಅಭಿಮಾನಿಗಳು. ವಯಸ್ಸು 40 ಆದ್ರೂ ಯುವತಿಯರೂ ನಾಚುವಂತಹ ಸೌಂದರ್ಯ ರಾಧಿಕಾ ಅವರದ್ದು.

ಇದನ್ನೂ ಓದಿ: ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್​ನ​​ 3 ಸಿನಿಮಾ ಘೋಷಣೆ: ಬಿಡುಗಡೆಗೂ ಮುಹೂರ್ತ ಫಿಕ್ಸ್​, 'ಸಲಾರ್​ 2' ಮೊದಲ ಚಿತ್ರ

ಎರಡನೇ ಫೋಟೋದಲ್ಲಿ ತಮ್ಮನನ್ನು ಹಿಡಿದು, ನಗುಮೊಗದಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋವನ್ನು ಬೀಚ್​​ ಬಳಿ ಕ್ಲಿಕ್ಕಿಸಿದಂತಿದ್ದು, ಇಬ್ಬರೂ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮೂರನೇ ಫೋಟೋದಲ್ಲಿ ಸಹೋದರನನ್ನು ರಾಧಿಕಾ ಬಿಗಿದಪ್ಪಿದ್ದಾರೆ. ಇದು ಶೂಟಿಂಗ್​ ಸಂದರ್ಭ ತೆಗೆದಂತಿದೆ. ಮದುವೆಗೆ ಹೊರಡುತ್ತಿರುವಂತೆ ಕಂಡಿದೆ. ಮತ್ತೊಂದು ಮಗ ಯಥರ್ವ್ ಜೊತೆ ಗೌರಂಗ್​ ಇರುವ ಫೋಟೋವಾದ್ರೆ, ಕೊನೆಯದ್ದು ಸ್ವತಃ ಗೌರಂಗ್​ ಅವರ ಸಿಂಗಲ್​ ಸ್ಟೈಲಿಷ್​ ಫೋಟೋ ಆಗಿದೆ. ಈ ಫೋಟೋಗಳು ಬಹಳ ಸುಂದರವಾಗಿದ್ದು ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ: 'ನನಗೆ ನಾನೇ ಶ್ರೇಷ್ಠ': ಬಿಗ್​ ಬಾಸ್​ನಲ್ಲಿ ಭವ್ಯಾ ಹೇಳಿಕೆ: ಮಂಜು, ಗೌತಮಿ ಬಗ್ಗೆ ಅಸಮಾಧಾನ

ಅಕ್ಟೋಬರ್​ 30ರಂದು ಯಶ್​ ರಾಧಿಕಾ ಕಿರಿ ಪುತ್ರ ಯಥರ್ವ್ ತನ್ನ ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅಂದು ಕೂಡಾ ನಟಿ ಕುಟುಂಬದ ಸುಂದರ ಕ್ಷಣಗಳನ್ನೊಳಗೊಂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಫೋಟೋಗಳು ಬಹಳ ಮುದ್ದಾಗಿ, ಸುಂದರವಾಗಿತ್ತು. ವಿಡಿಯೋ ವ್ಯಾಪಕವಾಗಿ ವೈರಲ್​ ಆಗಿ, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. 2019ರ ಅಕ್ಟೋಬರ್​ 30ರಂದು ರಾಧಿಕಾ, ಯಥರ್ವ್​​​ಗೆ​ ಜನ್ಮ ನೀಡಿದ್ದು, ಮೊದಲ ಪುತ್ರಿ ಐರಾ.​ ತಮ್ಮ ಕುಟುಂಬಸ್ಥರು, ಸ್ನೇಹಿತರೊಂದಿಗೆ ಬರ್ತ್​ಡೇ ಸೆಲೆಬ್ರೇಶನ್​​ ನಡೆದಿತ್ತು. ಯಶ್​ ಅವರ ಮಸ್ತ್​​ ಡ್ಯಾನ್ಸ್​ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.