ETV Bharat / international

ಭಾರತವೂ ಈಗ ಜಾಗತಿಕ ಸೂಪರ್ ಪವರ್ ರಾಷ್ಟ್ರ: ವ್ಲಾಡಿಮಿರ್​ ಪುಟಿನ್ ಶ್ಲಾಘನೆ - PUTIN STATEMENT ON INDIA

ಭಾರತವು ಜಾಗತಿಕ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಗೆ ಸೇರಲು ಅರ್ಹವಾಗಿದೆ ಎಂದು ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (ಸಂಗ್ರಹ ಚಿತ್ರ) (IANS)
author img

By PTI

Published : Nov 8, 2024, 5:07 PM IST

ಮಾಸ್ಕೋ, ರಷ್ಯಾ: ವಿಶ್ವದ ಬೇರೆ ಯಾವುದೇ ದೇಶಕ್ಕಿಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿರುವ ಭಾರತವು ಜಾಗತಿಕ ಮಹಾಶಕ್ತಿಗಳ (global superpowers) ಪಟ್ಟಿಗೆ ಸೇರಲು ಅರ್ಹವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಸೋಚಿಯಲ್ಲಿ ಗುರುವಾರ ನಡೆದ ವಾಲ್ಡೈ ಡಿಸ್ಕಷನ್ ಕ್ಲಬ್ ನ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪುಟಿನ್, ರಷ್ಯಾ ಭಾರತದೊಂದಿಗೆ ಎಲ್ಲಾ ದಿಕ್ಕುಗಳಲ್ಲಿ ಸಂಬಂಧಗಳನ್ನು ಬೆಸೆಯುತ್ತಿದೆ ಮತ್ತು ಎರಡೂ ದೇಶಗಳು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೆಚ್ಚಿನ ವಿಶ್ವಾಸ ಹೊಂದಿವೆ ಎಂದು ಹೇಳಿದರು.

"ಒಂದೂವರೆ ಶತಕೋಟಿ ಜನಸಂಖ್ಯೆಯ ವಿಶ್ವದ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆಯ, ಪ್ರಾಚೀನ ಸಂಸ್ಕೃತಿ ಮತ್ತು ಹೆಚ್ಚಿನ ಬೆಳವಣಿಗೆಗೆ ಉತ್ತಮ ನಿರೀಕ್ಷೆಗಳನ್ನು ಹೊಂದಿರುವ ಭಾರತವನ್ನು ನಿಸ್ಸಂದೇಹವಾಗಿ ಸೂಪರ್ ಪವರ್ ಗಳ ಪಟ್ಟಿಗೆ ಸೇರಿಸಬೇಕು" ಎಂದು ಅವರು ಹೇಳಿದರು.

ಭಾರತವನ್ನು ಶ್ರೇಷ್ಠ ದೇಶ ಎಂದು ಕರೆದ ರಷ್ಯಾಧಿಪತಿ: ಭಾರತವನ್ನು ಶ್ರೇಷ್ಠ ದೇಶ ಎಂದು ಕರೆದ ಪುಟಿನ್, "ನಾವು ಭಾರತದೊಂದಿಗೆ ಎಲ್ಲಾ ಆಯಾಮಗಳಲ್ಲಿ ಸಂಬಂಧವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಭಾರತವು ಒಂದು ಮಹಾನ್ ದೇಶ, ಒಂದೂವರೆ ಬಿಲಿಯನ್ ಜನರನ್ನು ಹೊಂದಿರುವ ದೇಶ ಈಗ ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದಾಗಿದೆ. ಪ್ರತಿವರ್ಷ 10 ಮಿಲಿಯನ್ ಜನ ಈ ಜನಸಂಖ್ಯೆಗೆ ಸೇರ್ಪಡೆಯಾಗುತ್ತಿದ್ದಾರೆ. ಭಾರತವು ಆರ್ಥಿಕ ಬೆಳವಣಿಗೆಯಲ್ಲಿ ವಿಶ್ವವನ್ನು ಮುನ್ನಡೆಸುತ್ತಿದೆ" ಎಂದು ಹೇಳಿದರು.

"ನಮ್ಮ ಸಂಬಂಧಗಳು ಎಲ್ಲಿ ಮತ್ತು ಯಾವ ವೇಗದಲ್ಲಿ ಅಭಿವೃದ್ಧಿ ಹೊಂದುತ್ತವೆ ಎಂಬ ನಮ್ಮ ದೃಷ್ಟಿಕೋನವು ಇಂದಿನ ವಾಸ್ತವಗಳನ್ನು ಆಧರಿಸಿದೆ. ನಮ್ಮ ಸಹಕಾರದ ಪ್ರಮಾಣವು ಪ್ರತಿವರ್ಷ ಅನೇಕ ಪಟ್ಟು ಹೆಚ್ಚುತ್ತಿದೆ" ಎಂದು ಪುಟಿನ್ ರಷ್ಯಾದ ಸುದ್ದಿ ಸಂಸ್ಥೆ ಟಾಸ್​ಗೆ ತಿಳಿಸಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ಸಂಬಂಧ ಇನ್ನಷ್ಟು ಗಟ್ಟಿ: "ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಂಪರ್ಕಗಳು ಅಭಿವೃದ್ಧಿ ಹೊಂದುತ್ತಿವೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಎಷ್ಟೊಂದು ಅಗಾಧ ಪ್ರಮಾಣದ ರಷ್ಯಾದ ಮಿಲಿಟರಿ ಉಪಕರಣಗಳು ಬಳಕೆಯಲ್ಲಿವೆ ಎಂಬುದನ್ನು ನೋಡಿ. ನಮ್ಮ ಸಂಬಂಧದಲ್ಲಿ ನಂಬಿಕೆಯು ದೃಢವಾಗಿದೆ. ನಾವು ನಮ್ಮ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಮಾರಾಟ ಮಾಡುವುದು ಮಾತ್ರವಲ್ಲದೆ ಅವುಗಳನ್ನು ಜಂಟಿಯಾಗಿ ವಿನ್ಯಾಸಗೊಳಿಸುತ್ತೇವೆ" ಎಂದು ಅವರು ತಿಳಿಸಿದರು.

ಪುಟಿನ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಯೋಜನೆಯನ್ನು ಉದಾಹರಣೆಯಾಗಿ ಹೆಸರಿಸಿದರು. "ವಾಸ್ತವವಾಗಿ, ನಾವು ಆ ಕ್ಷಿಪಣಿಯನ್ನು ಗಾಳಿ, ಸಮುದ್ರ ಮತ್ತು ಭೂಮಿ ಹೀಗೆ ಮೂರೂ ಪರಿಸರಗಳಲ್ಲಿ ಬಳಸಲು ಸಾಧ್ಯವಾಗುವಂತೆ ತಯಾರಿಸಿದ್ದೇವೆ. ಭಾರತದ ಭದ್ರತೆಗಾಗಿ ನಡೆಯುತ್ತಿರುವ ಈ ಯೋಜನೆಗಳು ಮುಂದುವರಿಯಲಿವೆ" ಎಂದು ಅವರು ಹೇಳಿದರು.

"ಇದು ವ್ಯಾಪಕವಾಗಿ ತಿಳಿದಿದೆ ಮತ್ತು ಅದರೊಂದಿಗೆ ಯಾರಿಗೂ ಸಮಸ್ಯೆಗಳಿಲ್ಲ, ಆದರೆ ಈ ಯೋಜನೆಗಳು ಉನ್ನತ ಮಟ್ಟದ ಪರಸ್ಪರ ನಂಬಿಕೆ ಮತ್ತು ಸಹಕಾರವನ್ನು ಪ್ರದರ್ಶಿಸುತ್ತವೆ. ಆದ್ದರಿಂದ ನಾವು ಇದನ್ನು ಮುಂದಿನ ದಿನಗಳಲ್ಲಿ ಮಾಡುತ್ತಲೇ ಇರುತ್ತೇವೆ ಮತ್ತು ಹೆಚ್ಚು ದೂರದ ಭವಿಷ್ಯದಲ್ಲಿ ಇದನ್ನು ಮುಂದುವರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.

ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಕೆಲ ಉದ್ವಿಗ್ನತೆಗಳಿರುವುದು ನಿಜ ಎಂದು ಒಪ್ಪಿಕೊಂಡ ಪುಟಿನ್, ತಮ್ಮ ರಾಷ್ಟ್ರಗಳ ಭವಿಷ್ಯದ ಬಗ್ಗೆ ಚಿಂತಿಸುವ ಬುದ್ಧಿವಂತ ಮತ್ತು ಸಮರ್ಥ ಜನ ರಾಜಿ ಸಂಧಾನಕ್ಕೆ ಮುಂದಾಗುತ್ತಾರೆ ಮತ್ತು ಅಂತಿಮವಾಗಿ ಸಂಧಾನ ಮೂಡಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ : 'ಧೈರ್ಯಶಾಲಿ' ಟ್ರಂಪ್​ರೊಂದಿಗೆ ಮಾತುಕತೆಗೆ ಸಿದ್ಧ: ರಷ್ಯಾ ಅಧ್ಯಕ್ಷ ಪುಟಿನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.