ETV Bharat / state

ಗಾಂಧಿ ಬಜಾರ್ ಮುಖ್ಯ ರಸ್ತೆ ಆಧುನೀಕರಣ ಪ್ರಶ್ನಿಸಿದ್ದ ಅರ್ಜಿ ವಜಾ - HIGH COURT

ಗಾಂಧಿ ಬಜಾರ್ ಮಾರುಕಟ್ಟೆ ಬೀದಿ ಮರು ವಿನ್ಯಾಸ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Jan 3, 2025, 10:46 PM IST

ಬೆಂಗಳೂರು: ಸುಗಮ ಸಂಚಾರ, ಬೀದಿ ವ್ಯಾಪಾರಿಗಳು ಮತ್ತು ಪಾದಚಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವ ಸದುದ್ದೇಶದಿಂದ ಗಾಂಧಿಬಜಾರ್ ಮುಖ್ಯರಸ್ತೆಯನ್ನು ಆಧುನೀಕರಣಕ್ಕಾಗಿ ಜಾರಿ ಮಾಡುತ್ತಿರುವ ನಗರದ ಗಾಂಧಿ ಬಜಾರ್ ಮಾರುಕಟ್ಟೆ ಬೀದಿ ಮರು ವಿನ್ಯಾಸ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಹೆರಿಟೇಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್‌ಫೇರ್ ಫೋರಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಗಾಂಧಿ ಬಜಾರ್ ಜನಸಂದಣಿ ಪ್ರದೇಶವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಬೀದಿ ವ್ಯಾಪಾರಿಗಳು ರಸ್ತೆಯಲ್ಲಿ ಕೂತು ವ್ಯಾಪಾರ ಮಾಡುತ್ತಿರುತ್ತಾರೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಹನ ಮತ್ತು ಜನ ದಟ್ಟಣೆ ಹೆಚ್ಚಿರುತ್ತದೆ. ಇದರಿಂದ ವಿವಿಧ ಜಕ್ಷನ್‌ಗಳಲ್ಲಿ ಪಾದಚಾರಿಗಳು ಸುರಕ್ಷತೆಯಿಂದ ರಸ್ತೆ ದಾಟಲು, ಬೀದಿ ವ್ಯಾಪಾರಿಗೆ ಸೂಕ್ತ ಸ್ಥಳಾವಕಾಶ ಒದಗಿಸಲು, ವಾಹನಗಳ ಸುಗಮ ಸಂಚಾರ ಹಾಗೂ ನಿಲುಗಡೆಗೆ, ತಂಗುದಾಣದೊಂದಿಗೆ ಬಸ್ ನಿಲ್ದಾಣ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಗಾಂಧಿ ಬಜಾರ್ ಮಾರುಕಟ್ಟೆ ಬೀದಿ ಮರು ವಿನ್ಯಾಸ ಯೋಜನೆ ಜಾರಿ ಮಾಡಲಾಗುತ್ತಿದೆ. ಇಡೀ ಗಾಂಧಿ ಬಜಾರ್ ರಸ್ತೆಯ ಉತ್ತಮ ನಿರ್ವಹಣೆ ಪ್ರಸ್ತಾವನೆಯನ್ನು ಈ ಯೋಜನೆ ಒಳಗೊಂಡಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಯೋಜನೆ ಜಾರಿ ಕಾರ್ಯ 2022ರ ಡಿಸೆಂಬರ್‌ನಲ್ಲಿ ಆರಂಭವಾಗಿದೆ. ಈಗಾಗಲೇ ಶೇ.95ರಷ್ಟು ಯೋಜನೆ ಪೂರ್ಣಗೊಂಡಿದೆ. 2025ರ ಜನವರಿಯಲ್ಲಿ ಬಾಕಿ ಉಳಿದಿರುವ ಶೇ. 5ರಷ್ಟು ಕಾಮಗಾರಿ ಪೂರ್ಣವಾಗಲಿದೆ. ಯೋಜನೆಗೆ 24.88 ಕೋಟಿ ವ್ಯಯಿಸಲಾಗಿದೆ. ಈ ಹಂತದಲ್ಲಿ ಯೋಜನೆಗೆ ಯಾವುದೇ ಮಾರ್ಪಾಡು ಮಾಡಿದರೆ ತೊಂದರೆ ಉಂಟಾಗಲಿದೆ. ಸಾರ್ವಜನಿಕರ ಹಿತಾಸಕ್ತಿ ಹಾಗೂ ಅನುಕೂಲಕ್ಕಾಗಿ ಯೋಜನೆ ಮಾಡುತ್ತಿರುವುದರಿಂದ ಯೋಜನೆ ಜಾರಿ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿ ಪುರಸ್ಕರಿಸಲಾಗದು ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಗಾಂಧಿ ಬಜಾರ್ ಮುಖ್ಯರಸ್ತೆ 90 ಅಡಿ ಅಗಲಿವಿದೆ. ರಸ್ತೆಯ ಎರಡುಬದಿ 8 ರಿಂದ 9 ಅಡಿ ಪಾದಚಾರಿ ಮಾರ್ಗವಿದೆ. ವಾಹನ ನಿಲುಗಡೆ ಅಗತ್ಯವಾದಷ್ಟು ಸ್ಥಳಾವಕಾಶವಿದೆ. ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ, ಈ ಯೊಜನೆಯಿಂದ 90 ಅಡಿ ಅಗಲದ ರಸ್ತೆಯು 23 ಅಡಿಗೆ ಇಳಿಯಲಿದೆ.

ಪಾದಚಾರಿ ಮಾರ್ಗ ದೊಡ್ಡದಾಗಿ, ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಇನ್ನೂ ರಸ್ತೆಯ ವೈಟ್ ಟಾಪಿಂಗ್ ಮತ್ತು ಆಧುನೀಕರಣ ಸಹ ವೈಜ್ಞಾನಿಕವಾಗಿಲ್ಲ. ಆಧುನೀಕರಣ ಹೆಸರಿನಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ತಪ್ಪಾದ ಯೋಜನೆ ಜಾರಿ ಮಾಡಲಾಗುತ್ತಿದೆ. ಆದ್ದರಿಂದ ಈ ಯೋಜನೆಯನ್ನು ಅವೈಜ್ಞಾನಿಕವೆಂದು ಘೋಷಿಸಬೇಕು ಹಾಗೂ ಯೋಜನೆ ಜಾರಿ ಮಾಡದಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಪೀಠ ತಿರಸ್ಕರಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ: ಹಿರಿಯ ನಾಗರಿಕ ಕಾಯಿದೆಯಡಿ ಆಸ್ತಿ ವರ್ಗಾವಣೆ ಹಕ್ಕು ರದ್ದು ಕೋರಿ ಮಕ್ಕಳು ಅರ್ಜಿ ಸಲ್ಲಿಸಲಾಗದು: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.