ETV Bharat / state

ಕಾಡಾನೆ ಹಾವಳಿ ವಿಚಾರ: ಮತ್ತೆ ಸ್ಪೀಕರ್ ಖಾದರ್ - ಶಾಸಕ ಹರೀಶ್ ಪೂಂಜಾ ನಡುವೆ ಮಾತಿನ ಸಮರ - MLA HARISH POONJA

ಕಾಡಾನೆ ದಾಳಿ ವಿಚಾರವಾಗಿ ಸ್ಪೀಕರ್ ಯು. ಟಿ ಖಾದರ್ ಹಾಗೂ ಶಾಸಕ ಹರೀಶ್ ಪೂಂಜಾ ಅವರ ನಡುವಿನ ಮಾತಿನ ಚಕಮಕಿ ಸದನದ ಹೊರಗೂ ಮುಂದುವರೆದಿದೆ.

mla-harish-poonja and u-t-khader
ಶಾಸಕ ಹರೀಶ್ ಪೂಂಜಾ ಹಾಗೂ ಸ್ಪೀಕರ್ ಯು ಟಿ ಖಾದರ್ (ETV Bharat)
author img

By ETV Bharat Karnataka Team

Published : Jan 3, 2025, 10:45 PM IST

ಮಂಗಳೂರು (ದಕ್ಷಿಣ ಕನ್ನಡ) : ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು. ಟಿ ಖಾದರ್ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡುವೆ ಕಾಡಾನೆಗಳನ್ನು ಸಾಯಿಸುವ ವಿಚಾರದಲ್ಲಿ ಚರ್ಚೆಗಳಾಗಿತ್ತು. ಸದನದಲ್ಲಿ ಕಾಡಾನೆಗಳನ್ನು ಗುಂಡಿಟ್ಟು ಕೊಲ್ಲಲು ಅವಕಾಶ ನೀಡಬೇಕು ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದರು. ಅದಕ್ಕೆ ಸ್ಪೀಕರ್ ಯು. ಟಿ ಖಾದರ್ ಅವರು ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬ ಪಾಠ ಮಾಡಿದ್ದರು. ಇದೇ ವಿಚಾರವಾಗಿ ಇದೀಗ ಸದನದ ಹೊರಗೂ ಚರ್ಚೆ ಮುಂದುವರೆದಿದೆ.

ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಪ್ರಾಣಿಗಳ ಮೇಲೆ ಕಾಳಜಿಯಿರುವ ಸ್ಪೀಕರ್ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಆಗ್ರಹಿಸಲಿ ಎಂದು ಹೇಳಿದ್ದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸ್ಪೀಕರ್ ಯು. ಟಿ ಖಾದರ್ ಅವರು, ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದಾಗ ಅದೆಷ್ಟು ಅನುಷ್ಠಾನಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮರು ಪ್ರಶ್ನಿಸಿದ್ದಾರೆ.

ಶಾಸಕ ಹರೀಶ್ ಪೂಂಜಾ ಹಾಗೂ ಸ್ಪೀಕರ್ ಯು ಟಿ ಖಾದರ್ ಮಾತನಾಡಿದರು (ETV Bharat)

ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿದ್ದು ಹೀಗೆ : ಕಾಂಗ್ರೆಸ್ ಸರ್ಕಾರ ಗೋಹತ್ಯೆ ವಿಚಾರದಲ್ಲಿ ದ್ವಂದ್ವ ನಿಲುವು ತಳೆದಿದೆ. ಆನೆಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆಯಿಂದಾಗಿ ಆನೆಗಳನ್ನ ಕೊಲ್ಲಲು ಅವಕಾಶ ಕೊಡಬೇಕೆಂದು ಸದನದಲ್ಲಿ ಮಾತನಾಡಿದ್ದೆ. ಆದರೆ ಸ್ಪೀಕರ್ ಯು. ಟಿ ಖಾದರ್ ಮನುಷ್ಯರಿಗೆ ಮಾತ್ರವಲ್ಲ, ಆನೆಗಳಿಗೂ ಬದುಕುವ ಹಕ್ಕಿದೆ ಎಂದಿದ್ದರು. ಹಾಗಾದರೆ ಗೋವುಗಳಿಗೆ ಬದುಕುವ ಹಕ್ಕು ಇದೆಯಲ್ವಾ? ದಯವಿಟ್ಟು ಅವರು ಗೋಹತ್ಯೆ ನಿಲ್ಲಿಸಬೇಕೆಂದು ಹೇಳಿಕೆ ಕೊಡಲಿ. ಬಿಜೆಪಿಯಿದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೆವು. ಕಾಂಗ್ರೆಸ್ ಸರ್ಕಾರ ಅದನ್ನು ವಾಪಾಸು ಪಡೆದಿದೆ. ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದಲ್ಲಿ ಖಾದರ್ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ ಎಂದು ಆಗ್ರಹಿಸಿದರು.

ಮೃತ್ಯುಂಜಯ ನದಿಗೆ ದನದ ಮಾಂಸ ಎಸೆಯುವ ಮೂಲಕ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುವ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ. ಈ ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿಎಚ್​ಪಿ - ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟಿವೆ.

ಈ ರೀತಿಯ ಘಟನೆ ನಡೆದಾಗ ಪ್ರತಿಭಟನೆ ನಡೆಸುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ. ಏಕೆಂದರೆ ಗೋಗಳ ಕಳ್ಳ ಸಾಗಾಣೆ ನಡೆದಾಗ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಗೋರಕ್ಷಕರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ದ. ಕ ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋವುಗಳ ಕಳ್ಳ ಸಾಗಾಣೆ, ಗೋಹತ್ಯೆ ನಡೆಯುತ್ತಿದೆ. ಮೃತ್ಯುಂಜಯ ನದಿಗೆ ಗೋಮಾಂಸ ಎಸೆದ ಆರೋಪಿಗಳನ್ನು ವಾರದೊಳಗೆ ಬಂಧಿಸುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿತ್ತು. ಆದರೆ ಈವರೆಗೆ ಆರೋಪಿಗಳ ಸುಳಿವು ದೊರಕದ ಕಾರಣ ವಿಎಚ್​ಪಿ - ಬಜರಂಗದಳ ಕಕ್ಕಿಂಜೆ ಚಲೋ ಹೋರಾಟ ಕೈಗೆತ್ತಿಕೊಂಡಿದೆ. ಅದಕ್ಕೆ ಇಡೀ ಸಮಾಜ ಹಾಗೂ ನಾವೆಲ್ಲರೂ ಬೆಂಬಲ ಸೂಚಿಸುತ್ತೇವೆ ಎಂದು ಹರೀಶ್ ಪೂಂಜಾ ಹೇಳಿದರು.

ಸ್ಪೀಕರ್ ಯು ಟಿ ಖಾದರ್ ಹೇಳಿದ್ದು ಹೀಗೆ : ಶಾಸಕ ಹರೀಶ್ ಪೂಂಜಾರಂತಹ ಅತೀ ಬುದ್ಧಿವಂತರಿಗೆ ಗೋವುಗಳಿಗೂ ಬದುಕುವ ಹಕ್ಕಿದೆ ಎಂದು ಗೊತ್ತಿಲ್ವೇ? ದೇಶದ ಅತೀ ಸಣ್ಣ ಮಕ್ಕಳಿಗೂ ಗೊತ್ತಿರುವ ವಿಚಾರ ಅವರಿಗೆ ಗೊತ್ತಿಲ್ಲದಿರುವುದು ಅತ್ಯಂತ ಖೇದಕರ. ಯಾರಿಗೆಲ್ಲಾ ಬದುಕುವ ಹಕ್ಕಿದೆ ಎಂದು ಬರವಣಿಗೆಯಲ್ಲಿ ಬರೆದು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

ಗೋಹತ್ಯಾ ನಿಷೇಧ ಕಾನೂನನ್ನು ದೇಶದಲ್ಲಿ ಜಾರಿಗೊಳಿಸಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು. ಅವರು ಬೇರೆ ಬೇರೆ ರಾಜ್ಯಕ್ಕೊಂದು ಕಾನೂನು ಜಾರಿಗೊಳಿಸಿಲ್ಲ. ದೇಶದಲ್ಲಿಯೇ ಇದು ಜಾರಿಯಾಗಿದೆ ಎಂದರು.

ನಾನು ರಾಜಕೀಯ ಮಾತನಾಡಲು ಹೋಗುವುದಿಲ್ಲ. ಬಿಜೆಪಿ ಸರ್ಕಾರ ಇರುವಾಗ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಾದಾಗ ಈ ಕಾನೂನು ಅನುಷ್ಠಾನವಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಈ ಬಗ್ಗೆ ಉತ್ತರಿಸಲಿ ಎಂದು ಖಾದರ್ ಹೇಳಿದರು. ಒಟ್ಟಿನಲ್ಲಿ ಸದನದಲ್ಲಿ ನಡೆದಿದ್ದ ಚರ್ಚೆ ಇದೀಗ ಶಾಸಕ ಮತ್ತು ಸ್ಪೀಕರ್ ನಡುವೆ ಸದನದ ಹೊರಗೂ ಮುಂದುವರೆಯುವಂತಾಗಿದೆ.

ಇದನ್ನೂ ಓದಿ : ಬೆಳಗಾವಿಯಲ್ಲಿ ಗೋವುಗಳ ಅಕ್ರಮ‌ ಸಾಗಾಟ ಆರೋಪ: ಲಾರಿ ತಡೆದು ಚಾಲಕ, ಕ್ಲೀನರ್ ಮೇಲೆ ಯುವಕರಿಂದ ಹಲ್ಲೆ - Illegal cow transport - ILLEGAL COW TRANSPORT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.