ಶ್ರೀನಗರ, ಜಮ್ಮು- ಕಾಶ್ಮೀರ: ಸಾಮಾಜಿಕ ಮಾಧ್ಯಮಗಳು ಮತ್ತು ತಂತ್ರಜ್ಞಾನಗಳು ಉದ್ಯಮದ ಅವಕಾಶವನ್ನು ಹೆಚ್ಚಿಸಿದೆ. ಅದರಲ್ಲೂ ಮಹಿಳೆಯರು ತಮ್ಮ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ಬಳಕೆ ಮಾಡಿಕೊಂಡು ಸುಲಭವಾಗಿ ಗ್ರಾಹಕರನ್ನು ತಲುಪುವಂತಾಗಿದೆ. ಇಂದು, ಕೇವಲ ಯುವಕರು ಮಾತ್ರವಲ್ಲದೇ, ಯುವತಿಯರು ಕೂಡ ಮನೆಯಿಂದಲೇ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಅಥವಾ ಡಿಜಿಟಲ್ ಉದ್ಯಮವೂ ಹೆಚ್ಚು ಗಮನವನ್ನು ಸೆಳೆಯಿತು. ವಿಶೇಷವಾಗಿ ಆರ್ಥಿಕ ಬಿಕ್ಕಟ್ಟಿನ ನಡುವೆ ಮನೆಯ ಹಣಕಾಸು ನಿರ್ವಹಣೆಯಲ್ಲಿ ಮಹಿಳೆಯರ ಬೆಂಬಲ ಅತ್ಯಗತ್ಯವಾಗಿದೆ.
ನೈಸರ್ಗಿಕ ಉತ್ಪನ್ನಗಳ ಉದ್ಯಮದಲ್ಲಿ ಯಶಸ್ಸು: ಈ ಕುರಿತು ಮಾತನಾಡಿರುವ ಶ್ರೀನಗರ್ ಭಗತ್ನ 40 ವರ್ಷದ ಸನ ಅಫ್ತಬ್, ಉದ್ಯಮದ ಆರಂಭದ ಗಾತ್ರಕ್ಕಿಂತ ಅದನ್ನು ಪ್ರಾರಂಭಿಸಲು ಧೈರ್ಯಬೇಕು ಎಂದಿದ್ದಾರೆ. 'ಸಾಮಾಜಿಕ ಜಾಲತಾಣದ ಮೂಲಕ ಕೆಲವು ವರ್ಷಗಳ ಹಿಂದೆ ನೈಸರ್ಗಿಕ ಸೋಪ್, ಸೌಂದರ್ಯ ವರ್ಧಕಗಳ ಉತ್ಪನ್ನಗಳನ್ನು ಆನ್ಲೈನ್ ಡೆಲಿವರಿ ಆರಂಭಿಸಿದೆ. ಆರಂಭದಲ್ಲಿ ಹೋಮ್ಮೇಡ್ ಸೋಪ್ ತಯಾರಿಸಿದ್ದು, ಬಳಿಕ ಅಡುಗೆ ಮನೆಯ ಉತ್ಪನ್ನಗಳಿಂದ ಕೂಡಿದ ಮೌಂಟೇನ್ ಸೋಪ್ ಆರಂಭಿಸಿದೆ. ತನ್ನ ಈ ವಸ್ತುಗಳನ್ನು ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಮೂಲಕ ಪ್ರಚಾರ ನಡೆಸಿದೆ. ತಕ್ಷಣಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದವು. ಬೇಡಿಕೆ ಹೆಚ್ಚಿದಂತೆ ಸನಾ ತನ್ನ ಉತ್ಪನ್ನಗಳ ವಿಸ್ತರಣೆಯನ್ನು ಹೆಚ್ಚಿಸಿ, ಆರ್ಗ್ಯಾನಿಕ್ ಸೋಪ್ ಜೊತೆಗೆ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಪ್ರಾರಂಭಿಸಿದೆ ಎನ್ನುತ್ತಾರೆ'.
ಎನ್ಐಟಿಯಲ್ಲಿ ಎಂಬಿಎ ಪದವೀಧರೆಯಾಗಿರುವ ಸನಾ ಅಫ್ತಾಬ್ನ ಪೆರ್ಡೆಕ್ಸ್ ಉದ್ಯಮದಲ್ಲಿ ಆರಂಭದಲ್ಲಿ ಸೀಮಿತ ಗ್ರಾಹಕರನ್ನು ಹೊಂದಿದ್ದರು. ಇಂದು ಇವರು ಕೇವಲ ಜಮ್ಮು ಮತ್ತು ಕಾಶ್ಮೀರದಿಂದ ಮಾತ್ರವಲ್ಲ, ದೇಶದ ಇತರ ಭಾಗಗಳಿಂದಲೂ ಬೇಡಿಕೆ ಹೊಂದಿದ್ದಾರೆ. ಪ್ರತಿಯೊಬ್ಬರಿಗೂ ಆರಂಭ ಎಂಬುದಕ್ಕೆ ಗಮನ ನೀಡಿದೆ. ಡಿಜಿಟಲ್ ಮಾರ್ಕೆಟ್ ನನ್ನ ಉದ್ಯಮಕ್ಕೆ ಸಾಕಷ್ಟು ಲಾಭ ನೀಡಿತು. ಆದಾಗ್ಯೂ ಇದು ಸುಲಭವಾಗಿರಲಿಲ್ಲ. ನಿಮಗೆ ಜ್ಞಾನವಿದ್ಧರೆ, ಅದರ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದಾಗಿದೆ. ಸಣ್ಣ ನಗರದ ಮಹಿಳೆಯರಿಗೆ ಈ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಅನೇಕ ಅವಕಾಶ ನೀಡಿದೆ. ಭವಿಷ್ಯದಲ್ಲಿ ಕೂಡ ಅನೇಕ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಾರೆ ಎಂಬ ಭರವಸೆ ಇದೆ.
ಕಲಿಕೆ ನಿಂತರೂ ಬದುಕಿಗೆ ನೆರವಾದ ತಂತ್ರಜ್ಞಾನ: ಇನ್ನು ಶ್ರೀನಗರದ ಬತಮಲೊದ 30 ವರ್ಷದ ಶೇಕ್ ಆಸೀಫ್ ಹಣಕಾಸು ಮುಗ್ಗಟ್ಟಿನಿಂದ 8ನೇ ತರಗತಿ ಇರುವಾಗಲೇ ಕಲಿಕೆಯಿಂದ ದೂರ ಉಳಿದರು. ಆದಾಗ್ಯೂ, ನಂತರದ ದಿನದಲ್ಲಿ ಇನ್ಫೋಟೆಕ್ನಿಂದ ಪ್ರಯೋಜನ ಪಡೆದವರು. ವೆಬ್ ಡಿಸೈನಿಂಗ್ ಮತ್ತು ಡೆವಲ್ಮೆಂಟ್ನಲ್ಲಿ ತಜ್ಞರಾದರು. ಇಂದು ಆಸೀಫ್ ಆನ್ಲೈನ್ ಕಂಪ್ಯೂಟರ್ ತರಬೇತಿ ನೀಡುತ್ತಿದ್ದಾರೆ. ತಮ್ಮಂತೆ ಕಲಿಕೆ ಅಪೂರ್ಣಗೊಂಡವರಿಗೆ ಕಲಿಸಿ ಇತರರಿಗೆ ಮಾದರಿಯಾಗಿದ್ದಾರೆ.
'2019ರ ನಂತರ ಅನೇಕ ಜನರು ಆನ್ಲೈನ್ ಉದ್ಯಮ ಆರಂಭಿಸುವಂತೆ ಸಲಹೆ ನೀಡಿದರು. ಇದಕ್ಕೆ ಮುಂಚೆ ಆಫ್ಲೈನ್ ಉದ್ಯಮ, ಹೆಚ್ಚು ನೈಜ ಮತ್ತು ಲಾಭದಾಯಕವಾಗಿತ್ತು. ಇವರ ಪ್ರಕಾರ, ಕಾಶ್ಮೀರದಲ್ಲಿ ವಿದ್ಯಾವಂತ ಯುವಕರು ಹೆಚ್ಚು ಆನ್ಲೈನ್ ಉದ್ಯಮದ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಕಡಿಮೆ ಬಂಡವಾಳ. ಆನ್ಲೈನ್ ಮೂಲಕವೇ ಆರ್ಡರ್ ಕೋರಿಯರ್ ಮೂಲಕ ಉತ್ಪನ್ನ ಸಾಗಣೆ ಮಾಡುತ್ತಿದ್ದಾರೆ'.
ಐತಿಹಾಸಿಕವಾಗಿ ಮಹಿಳೆಯರು ಉದ್ಯಮ ಜಗತ್ತಿನಲ್ಲಿ ಲಿಂಗ ತಾರತಮ್ಯ ಅನುಭವಿಸುತ್ತಾರೆ. ಆದಾಗ್ಯೂ, ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ತಾಣಗಳು ಅನೇಕ ವಲಯದಲ್ಲಿ ಪುರುಷರ ಅಧಿಪತ್ಯವನ್ನು ಮುರಿಯಲು ಸಹಾಯ ಮಾಡಿದೆ. ಇದರಿಂದ ಕೂಡ ಮಹಿಳೆಯರು ಸಾಕಷ್ಟು ಹಣಗಳಿಸುತ್ತಿದ್ದಾರೆ.
ಬೇಕಿಂಗ್ನಲ್ಲಿ ಯಶಸ್ಸು: ಸನಾ ಇಮ್ತಿಯಾಸ್ ಹೋಮ್ ಬೇಕರ್ ಆಗಿದ್ದು, ವಿಶಿಷ್ಟ ರೀತಿಯ, ವಿನ್ಯಾಸ ಮತ್ತು ರಚನೆಯ ಕೇಕ್ ತಯಾರು ಮಾಡುತ್ತಿದ್ದಾರೆ. ದಿನಕ್ಕೆ ನಾಲ್ಕರಿಂದ ಐದು ಆರ್ಡರ್ ಪಡೆಯುತ್ತಿದ್ದಾರೆ. 2017ರಿಂದ ತಮ್ಮ ಮನೆಯಲ್ಲಿನ ಒಂದು ಕೋಟೆಯಲ್ಲಿ ಹೋಮ್ ಬೇಕಿಂಗ್ ಉದ್ಯಮ ಆರಂಭಿಸಿದ್ದಾರೆ. ಇದೀಗ ಇವರು ಮಾತ್ರವಲ್ಲದೇ, ನಾಲ್ಕು ಜನ ಮಹಿಳೆಯರಿಗೆ ಕೆಲಸ ನೀಡಿದ್ದಾರೆ. 'ಸ್ವೀಟ್ ಟೆಮ್ಟೇಷನ್' ಎಂಬ ಹೆಸರಿನಲ್ಲಿ ಸನಾ ಸಾಮಾಜಿಕ ಜಾಲತಾಣದಲ್ಲಿ ಕೇಕ್ ವಿನ್ಯಾಸ ಶೇರ್ ಮಾಡುತ್ತಾರೆ. ಈ ಮೂಲಕ ಮದುವೆ, ಹುಟ್ಟುಹಬ್ಬ ಸೇರಿದಂತೆ ಇತರ ಸಂದರ್ಭದಲ್ಲಿ ಆರ್ಡರ್ ಪಡೆಯುತ್ತಾರೆ.
'ಬಾಲ್ಯದಿಂದಲೇ ಸನಾಗೆ ಈ ಬೇಕಿಂಗ್ ಆಸಕ್ತಿ ಇತ್ತಂತೆ, ಇದು ಬಳಿಕ ಉದ್ಯಮದ ಪ್ಯಾಷನ್ ಆಗಿ ರೂಪುಗೊಂಡು ಅದರಲ್ಲಿಯೇ ಕೋರ್ಟ್ ಮಾಡಿದರು. ನನ್ನ ಆನ್ಲೈನ್ ಉದ್ಯಮವೂ ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದೆ. ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನನ್ನ ಉದ್ಯಮವನ್ನು ಹೆಚ್ಚಿಸುವ ಜೊತೆಗೆ ಹೊಸ ಗ್ರಾಹಕರನ್ನು ನೀಡುವಲ್ಲಿ ಸಹಾಯ ಮಾಡಿತ್ತು. ಡಿಜಿಟಲ್ ಮಾರ್ಕೆಟಿಂಗ್ ದೊಡ್ಡ ಮಟ್ಟದ ಗ್ರಾಹಕರನ್ನು ಕ್ಷಣಮಾತ್ರದಲ್ಲಿ ತಲುಪುವಂತೆ ಮಾಡಿತು. ನನ್ನ ಗ್ರಾಹಕರಿಗೆ ಮನೆಯಲ್ಲಿಯೇ ಕುಳಿತು ಶಾಪಿಂಗ್ ಮಾಡುವ ಸೌಲಭ್ಯವನ್ನು ನೀಡಿತು' ಎನ್ನುತ್ತಾರೆ ಅವರು.
ಇದನ್ನೂ ಓದಿ: ಆನ್ಲೈನ್ ಮೆಡಿಸಿನ್ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಅಮೆಜಾನ್: ಬೆಂಗಳೂರಿನಲ್ಲಿ ಸೇವೆ ಪ್ರಾರಂಭ