ಧರ್ಮಶಾಲಾ: ವಿಶ್ವಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿದೆ. ಇದರ ಪರಿಣಾಮ ರಫ್ತು ಸ್ಥಗಿತಗೊಂಡಿದ್ದರಿಂದ ಭಾರತೀಯ ಚಹಾದ ಬೆಲೆಯಲ್ಲಿ ತೀವ್ರ ಇಳಿಕೆಯಾಗಿದೆ. ಕಡಿಮೆ ಬೆಲೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ಎದುರಿಸುತ್ತಿರುವ ಚಹಾ ತೋಟಗಾರರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವಿಶ್ವಾದ್ಯಂತ ರುಚಿಗೆ ಹೆಸರುವಾಸಿಯಾದ ಕಾಂಗ್ರಾ ಚಹಾ ಕೂಡ ಈ ತೊಂದರೆಯನ್ನು ಎದುರಿಸುತ್ತಿದೆ.
ಲಾಕ್ಡೌನ್ ವಿಸ್ತರಣೆ ಮಾಡಿರುವ ಹಿನ್ನೆಲೆ ಧರ್ಮಶಾಲಾದ ಕಾರ್ಖಾನೆಯಲ್ಲಿ ತಯಾರಿಸಿದ ಚಹಾವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿಲ್ಲ. ಒಂದು ವೇಳೆ, ಸರ್ಕಾರ ರಪ್ತಿಗೆ ಅನುಮತಿ ನೀಡಿದರೆ ಈ ಎಲ್ಲ ಸಮಸ್ಯೆಗಳು ಬಗೆಹರಿಯಬಹುದೆನೋ. ಲಾಕ್ಡೌನ್ ಪರಿಣಾಮದಿಂದ ಕಾರ್ಮಿಕರು ಕೂಡ ಬರಲಾಗುತ್ತಿಲ್ಲ. ಈ ಕಾರಣದಿಂದ ಚಹಾದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಚಹಾ ಸಂಸ್ಕರಣೆಗೆ ಹೇಗೆ ಅವಕಾಶ ನೀಡಲಾಗಿದೆಯೋ ಹಾಗೆಯೇ ಕೋಲ್ಕತ್ತಾಗೆ ರವಾನೆ ಮಾಡಲು ಸರ್ಕಾರ ಅನುಮತಿ ನೀಡಬೇಕು ಎಂದು ಕಾಂಗ್ರಾ ಟೀ ಕಾರ್ಖಾನೆ ವ್ಯವಸ್ಥಾಪಕ ಅಮಾನ್‌ಪಾಲ್ ಸಿಂಗ್ ಹೇಳುತ್ತಾರೆ.
ಚಹಾದ ಉತ್ಪಾದನಾ ಮಟ್ಟ ತುಂಬಾ ಚೆನ್ನಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಾಗೆ ಉತ್ಪಾದನೆ ಆಗಿದೆ. ಈ ಚಹಾವನ್ನು ಕೋಲ್ಕತ್ತಾಗೆ ತಲುಪಿಸುತ್ತೇವಾ ಎನ್ನುವುದೇ ಅನುಮಾನ ಎಂದಿದ್ದಾರೆ. ಉತ್ಪಾದನೆ ಆಗಿರುವ ಚಹಾವನ್ನು ನಾವು ಕೊಲ್ಕತ್ತಾಗೆ ಕಳುಹಿಸಲು ಸಾಧ್ಯ. ಯುರೋಪ್ ರಾಷ್ಟ್ರಗಳು ಕೂಡ ಕೊರೊನಾದಿಂದ ಬಳಲುತ್ತಿರುವುದರಿಂದ ರಪ್ತು ಮಾಡಲು ಸಾಧ್ಯವಾಗುವುದಿಲ್ಲ. ನಮಗೆ ಒಳ್ಳೆಯ ಬೆಲೆ ಏನಾದರೂ ಸಿಕ್ಕರೆ ಅದು ಕೋಲ್ಕತ್ತಾದಲ್ಲಿ ಮಾತ್ರ. ಮುಂದಿನ ವರ್ಷ ಬೇರೆ ರಾಷ್ಟ್ರಗಳಿಗೆ ರಪ್ತು ಮಾಡಿ ಲಾಭಗಳಿಕೆ ಮಾಡಬಹುದು ಎಂದಿದ್ದಾರೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಚಹಾ ತಯಾರಿಸಲು ಅನುಮತಿ ದೊರೆತಿದ್ದರೂ ಸಹ ನಾವು ಅರ್ಧದಷ್ಟು ಶ್ರಮವನ್ನು ಮಾತ್ರ ಬಳಸಬಹುದಾಗಿದೆ. ಇದರಿಂದಾಗಿ ಉತ್ಪಾದನೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಕಾರ್ಖಾನೆಯಲ್ಲಿ ಕಡಿಮೆ ಸ್ಥಳವಿರುವುದರಿಂದ ಹೆಚ್ಚು ಚಹಾ ತಯಾರಿಸಲು ಸಾಧ್ಯವಿಲ್ಲ. ಕೋಲ್ಕತ್ತಾದಲ್ಲಿ ಹರಾಜು ನಡೆಯುವ ಮೂಲಕ ಚಹಾ ಮಾರಾಟವಾಗುತ್ತದೆ. ಇದಕ್ಕಾಗಿ ಸಾರಿಗೆ ಆಡಳಿತದಿಂದ ಅನುಮತಿ ಪಡೆಯಬೇಕು ಎಂದು ಚಹಾ ಉತ್ಪಾದಕರ ನೋವನ್ನು ಸಿಂಗ್ ಬಿಚ್ಚಿಟ್ಟಿದ್ದಾರೆ.