ತಿರುವನಂತಪುರಂ (ಕೇರಳ): ನಿವೃತ್ತ ಡಿಜಿಪಿ ಹಮ್ಮಿಕೊಂಡಿದ್ದ ಪತ್ರಿಗೋಷ್ಠಿಯಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರ ಮೇಲೆ ಅಲ್ಲಿದ್ದವರು ಹಲ್ಲೆ ಮಾಡಿ ಹೊರ ನಡೆಯಲು ಘಟನೆ ತಿರುವನಂತಪುರಂನಲ್ಲಿ ನಡೆದಿದೆ.
16 ಜನವರಿ 2020ರ ಶ್ರೀ ನಾರಾಯಣ ಧರ್ಮ ಪರಿಪಲಾನ ಯೋಗ ಪ್ರಕರಣ ಪ್ರಕರಣದ ಬಗ್ಗೆ ಮಾಜಿ ಡಿಜಿಪಿ ಟಿಪಿ ಸೆನ್ ಕುಮಾರ್ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ವೇಳೆ ಪತ್ರಕರ್ತ ಕಡವಿಲ್ ರಶೀದ್ ಎಂಬುವರು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ನೀಡಿದ್ದ "ಸೆನ್ ಕುಮಾರ್ ಅವರನ್ನು ಡಿಜಿಪಿಯಾಗಿ ನೇಮಕ ಮಾಡಿದ್ದು ದೊಡ್ಡ ತಪ್ಪು" ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಪ್ರಶ್ನೆ ಕೇಳಿದ್ದಾರೆ.
ಈ ವೇಳೆ ಅಲ್ಲಿದ್ದವರು ಪತ್ರಕರ್ತ ರಶೀದ್ ಮೇಲೆ ಹಲ್ಲೆ ನಡೆಸಿ ಹೊರ ನಡೆಯುವಂತೆ ತಿಳಿಸಿದ್ದಾರೆ.