ETV Bharat / bharat

EXCLUSIVE: ಮಾನವ ಹಿತದ ಬಹುದೊಡ್ಡ ಬಿಕ್ಕಟ್ಟಿಗೆ ಭಾರತ ಸಾಕ್ಷಿ ಆಗಿದೆ: ಅರ್ಥಶಾಸ್ತ್ರಜ್ಞ ಜೀನ್ ಡ್ರೋಜ್ - INDIA WITNESSES ITS WORST HUMANITARIAN CRISIS

ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುವುದು, ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಪಡಿಸುವುದು ಹಾಗೂ ಉದ್ಯೋಗ ಖಾತರಿ ಯೋಜನೆಗಳನ್ನು ಜಾರಿಗೊಳಿಸುವುದು ಮುಂತಾದ ಹಲವಾರು ಕ್ರಮಗಳನ್ನು ಬೆಲ್ಜಿಯಂ ಮೂಲದ ಭಾರತೀಯ ಅರ್ಥಶಾಸ್ತ್ರಜ್ಞ ಜೀನ್ ಡ್ರೋಜ್ ಸೂಚಿಸಿದ್ದಾರೆ.

Jean Dreze
ಅರ್ಥಶಾಸ್ತ್ರಜ್ಞ ಜೀನ್ ಡ್ರೋಜ್
author img

By

Published : May 24, 2020, 12:27 PM IST

ಹೈದರಾಬಾದ್: ಜೀನ್ ಡ್ರೋಜ್ ಬೆಲ್ಜಿಯಂ ಮೂಲದ ಭಾರತೀಯ ಅರ್ಥಶಾಸ್ತ್ರಜ್ಞ, ಹಸಿವು, ಕ್ಷಾಮ ಮತ್ತು ಸಾಮಾಜಿಕ ಅಸಮಾನತೆಯಂತಹ ಭಾರತ ಎದುರಿಸುತ್ತಿರುವ ಹಲವಾರು ಅಭಿವೃದ್ಧಿ ವಿಷಯಗಳ ಕುರಿತಂತೆ ಅವರು ಕಳೆದ ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಊರುಗಳಿಗೆ ಮರಳಿ ಹೋಗುತ್ತಿರುವ ಅತಿಥಿ ( ವಲಸೆ ) ಕಾರ್ಮಿಕರಿಗೆ ಆಹಾರ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಆಗಿದೆ ಎಂಬುದು ಡ್ರೋಜ್ ಅವರ ನಂಬಿಕೆ. ಡ್ರೋಜ್ ಪ್ರಸ್ತುತ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್​​ನಲ್ಲಿ ಗೌರವ ಪ್ರಾಧ್ಯಾಪಕರಾಗಿ ಮತ್ತು ರಾಂಚಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುವುದು, ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಪಡಿಸುವುದು ಹಾಗೂ ಉದ್ಯೋಗ ಖಾತರಿ ಯೋಜನೆಗಳನ್ನು ಜಾರಿಗೊಳಿಸುವುದು ಮುಂತಾದ ಹಲವಾರು ಕ್ರಮಗಳನ್ನು ಅವರು ಸೂಚಿಸಿದ್ದಾರೆ. ಈನಾಡು ಸಮೂಹದ ವಿಶೇಷ ವರದಿಗಾರ ಎಂ. ಎಲ್. ನರಸಿಂಹ ರೆಡ್ಡಿ ಅವರಿಗೆ ನೀಡಿದ ಸಂದರ್ಶನದಲ್ಲಿ ಅತಿಥಿ ಕಾರ್ಮಿಕರಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಡ್ರೋಜ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಲಾಕ್‌ಡೌನ್ ನಂತರ, ಭಾರತದಲ್ಲಿ ಆಹಾರ ಬಿಕ್ಕಟ್ಟಿನ ವ್ಯಾಪ್ತಿ ಹೇಗೆ ಇರಲಿದೆ ?

ಸಾರ್ವಜನಿಕ ವಿತರಣಾ ವ್ಯವಸ್ಥೆ ( ಪಿ ಡಿ ಎಸ್ ) ಹಸಿವನ್ನು ದೊಡ್ಡ ಪ್ರಮಾಣದಲ್ಲಿ ತಡೆಯಬಹುದು. ಮೂರು ತಿಂಗಳ ತನಕ ಸಬ್ಸಿಡಿಯುಕ್ತ ಆಹಾರ ಧಾನ್ಯಗಳ ಪ್ರಮಾಣವನ್ನು ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಒಂದು ಉತ್ತಮ ಕ್ರಮವಾಗಿದೆ. ಆದರೆ ಪಿ ಡಿ ಎಸ್ ವ್ಯಾಪ್ತಿಯ ಆಚೆಗೆ 50 ಕೋಟಿ ಜನರು ಇದ್ದಾರೆ. ಇವರೆಲ್ಲರೂ ಬಡವರಲ್ಲ. ಆದರೆ ಇವರಲ್ಲಿ ಹೆಚ್ಚಿನವರು ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಬಡತನ ರೇಖೆಗಿಂತ ಕೆಳಗೆ ಇಳಿಯಬಹುದು. ಜಾರ್ಖಂಡ್‌ನಲ್ಲಿ ಪಡಿತರ ಚೀಟಿ ಸೌಲಭ್ಯ ಇಲ್ಲದ ಸಾವಿರಾರು ಬಡಜನರು ಇದ್ದಾರೆ. ಆಹಾರ ಬಿಕ್ಕಟ್ಟಿನ ವ್ಯಾಪ್ತಿ ಹೇಗಿರಲಿದೆ ಎಂದು ಅಂದಾಜಿಸುವುದು ಕಷ್ಟ. ಆದರೆ ನಾವು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದೇವೆ. ಅದನ್ನು ತಡೆಯಬೇಕಾದರೆ ಈ ಎಲ್ಲಾ ಕುಟುಂಬಗಳನ್ನು ಪಿ ಡಿ ಎಸ್ ವ್ಯಾಪ್ತಿಗೆ ಸೇರಿಸಬೇಕು. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ( ಎಫ್‌ ಸಿ ಐ ) ಬೃಹತ್ ಆಹಾರ ದಾಸ್ತಾನು ಇದೆ. ಈ ಆಹಾರ ಧಾನ್ಯಗಳನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು.

ಅತಿಥಿ ಕಾರ್ಮಿಕರ ಸುರಕ್ಷತೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿವೆಯೇ?

ರಾಜ್ಯ ಸರ್ಕಾರಗಳು ನಡೆಸುವ ಪುನರ್ವಸತಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ಕೇಂದ್ರ ಸರ್ಕಾರ ಸಾಕಷ್ಟು ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದು ರಾಜ್ಯಗಳಿಗೆ ಆಹಾರ ದಾಸ್ತಾನು ಪೂರೈಸಬೇಕು ಮತ್ತು ಪಡಿತರ ರಹಿತ ಕಾರ್ಡ್ ಹೊಂದಿರುವವರಿಗೆ ಆಹಾರ ಧಾನ್ಯಗಳನ್ನು ವಿತರಿಸಬೇಕು. ಆದಾಯ ಕುಸಿಯುತ್ತಾ ಇರುವುದರಿಂದ, ಕೇಂದ್ರ ಸರ್ಕಾರ ರಾಜ್ಯಗಳಿಗೆ ತನ್ನ ಆರ್ಥಿಕ ಸಹಾಯ ಹೆಚ್ಚಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಅಡಿ ಉದ್ಯೋಗಾವಕಾಶಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸಬೇಕು. ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪಿ ಡಿ ಎಸ್, ಪಿಂಚಣಿ ಹಾಗೂ ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ಬಡವರಿಗೆ ಸಹಾಯ ಮಾಡುತ್ತವೆ. ಸಾರ್ವಜನಿಕ ಅಡಿಗೆ ಮನೆಗಳ ಸ್ಥಾಪನೆ ಮತ್ತು ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮುಂತಾದ ಕಲ್ಯಾಣ ಚಟುವಟಿಕೆಗಳು ಸಹಕಾರಿ ಆಗುತ್ತವೆ. ಅಸ್ತಿತ್ವದಲ್ಲಿ ಇರುವ ಕಲ್ಯಾಣ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.

ಆಧುನಿಕ ಭಾರತದ ಇತಿಹಾಸದಲ್ಲಿ ಆಹಾರ ಬಿಕ್ಕಟ್ಟು ಇಷ್ಟು ತೀವ್ರವಾಗಿ ಕಂಡುಬಂದದ್ದು ಇದೆಯೇ?

ಸ್ವಾತಂತ್ರ್ಯ ಪಡೆಯುವ ಮೊದಲು, ಭಾರತ ಬಂಗಾಳ ಕ್ಷಾಮಕ್ಕೆ ಸಾಕ್ಷಿ ಆಯಿತು. ಅದು ನಾವು ಈಗ ನೋಡುತ್ತಿರುವುದಕ್ಕಿಂತ ಕೆಟ್ಟದಾಗಿ ತ್ತು. ಅದರ ನಂತರ, ಬರಗಾಲದ ಪರಿಣಾಮವಾಗಿ ಆಗಾಗ ಆಹಾರದ ಕೊರತೆ ಸಂಭವಿಸಿದೆ. 1966 - 67ರ ಅವಧಿಯಲ್ಲಿ ಬಿಹಾರದಲ್ಲಿ ದೊಡ್ಡಮಟ್ಟದ ಬರ ಕಾಣಿಸಿಕೊಂಡಿತ್ತು. ಸ್ವಾತಂತ್ರ್ಯದ ನಂತರದ ಕಾಲಘಟ್ಟದಲ್ಲಿ, ಈಗಿನ ಆಹಾರ ಬಿಕ್ಕಟ್ಟು ಅತ್ಯಂತ ಕೆಟ್ಟದು.

ಕಾರ್ಮಿಕರ ವಲಸೆಯನ್ನು ನಿಭಾಯಿಸುವಲ್ಲಿ ಸರ್ಕಾರದ ಅಸಮರ್ಥತೆಯ ಹಿಂದಿನ ಕಾರಣಗಳು ಯಾವುವು?

ಸಾಮಾನ್ಯವಾಗಿ, ಸರ್ಕಾರಗಳು ವಲಸೆ ಕಾರ್ಮಿಕರ ಬಗ್ಗೆ ಕಠಿಣ ಮನೋಭಾವ ತಳೆದಿರುತ್ತವೆ. ಪ್ರಸ್ತುತ ಸಂದರ್ಭದಲ್ಲಿ, ಟಿವಿ ಮತ್ತು ಇಂಟರ್ನೆಟ್ ಮೂಲಕ ನಾವೆಲ್ಲರೂ ಆ ಮನೋಭಾವವನ್ನು ಕಾಣುವಂತಾಯಿತು. ಕಳೆದ ಕೆಲವು ವಾರಗಳಲ್ಲಿ, ಕೇಂದ್ರ ಮತ್ತು ಆತಿಥೇಯ ರಾಜ್ಯಗಳು ಅತಿಥಿ ಕಾರ್ಮಿಕರ ಕುರಿತು ವ್ಯವಹರಿಸುವಾಗ ಕ್ರೂರವಾಗಿದ್ದವು. ಸರ್ಕಾರದಿಂದ ಯಾವುದೇ ಉದ್ಯೋಗ ಭದ್ರತೆ, ಆಹಾರ ಅಥವಾ ಸಹಾಯ ಇಲ್ಲದೆಯೂ ಈ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಾವಿರಾರು ಕಿಲೋಮೀಟರ್ ನಡಿಗೆಯನ್ನು ಆರಿಸಿಕೊಂಡರು. ಇದು ಬಡವರ ಕುರಿತಾದ ನಮ್ಮ ಧೋರಣೆಗೆ ಕನ್ನಡಿ ಹಿಡಿಯುತ್ತದೆ. ಈ ಬಿಕ್ಕಟ್ಟಿನಲ್ಲಿ ಅವರಿಗೆ ಸಹಾಯ ಮಾಡುವ ಬದಲು, ನಾವು ಅವರನ್ನು ಆಳ ಪ್ರಪಾತಕ್ಕೆ ತಳ್ಳಿದ್ದೇವೆ.

ಭಾರತ ತೀವ್ರ ಪೌಷ್ಠಿಕಾಂಶ ಬಿಕ್ಕಟ್ಟನ್ನು ಎದುರಿಸಲಿದೆಯೇ?

ಖಂಡಿತವಾಗಿಯೂ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚು. ಕಲ್ಯಾಣ ಯೋಜನೆಗಳು ಮತ್ತು ಪಿ ಡಿ ಎಸ್ ಹೊರತಾಗಿಯೂ ಹೆಚ್ಚಿನ ಜನರಿಗೆ ಹಸಿವಿನಿಂದ ರಕ್ಷಣೆ ಇಲ್ಲ. ಹೊಟ್ಟೆ ತುಂಬಿರುವುದು ಪೌಷ್ಠಿಕಾಂಶ ದೊರೆತಿದೆ ಎಂಬುದಕ್ಕೆ ಏಕೈಕ ಮಾನದಂಡ ಆಗುವುದಿಲ್ಲ. ಸರಿಯಾದ ಆಹಾರ ಪದ್ಧತಿ, ಶುದ್ಧ ಆಹಾರ ಮತ್ತು ನೀರನ್ನು ಉತ್ತಮ ಪೌಷ್ಠಿಕಾಂಶ ಒಳಗೊಂಡಿದೆ. ಭಾರತದ ಬಡವರ ಕೈಗೆ ಇವು ಎಟಕುವುದಿಲ್ಲ. ಪ್ರಸ್ತುತ ಲಾಕ್ಡೌನ್ ಕಾರ್ಮಿಕರ ಸಂಕಷ್ಟಗಳನ್ನು ಹೆಚ್ಚಿಸಿದೆ. ಸರ್ಕಾರದ ಹಣಕಾಸಿನ ನೆರವು ಇಲ್ಲದೆ, ಅವರು ಹೀನಾಯ ಸ್ಥಿತಿ ತಲುಪಬಹುದು.

ಮುಂದಿನ ದಿನಗಳಲ್ಲಿ, ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕೇ ? ಈ ಕುರಿತಂತೆ ಯಾವುದೇ ಪ್ರಯತ್ನಗಳು ನಡೆಯುತ್ತಿವೆಯೇ ?

ಬಡ ರಾಜ್ಯಗಳಿಗೆ, ವಿಶೇಷವಾಗಿ ಈಶಾನ್ಯ ಭಾರತದ ರಾಜ್ಯಗಳಿಗೆ ಹೆಚ್ಚಿನ ಸಹಾಯದ ಅಗತ್ಯ ಇದೆ. ಅವುಗಳಿಗೆ ತೀವ್ರ ಹಾನಿ ಆಗಿದೆ. ಅಗ್ಗದ ದರಕ್ಕೆ ದೊರೆಯುವ ಈಶಾನ್ಯ ರಾಜ್ಯಗಳ ಕಾರ್ಮಿಕರಿಂದ ಕಂಪನಿಗಳು ಲಾಭ ಪಡೆದಿವೆ. ಆದರೆ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಮಿಕರನ್ನು ಕೈಬಿಟ್ಟವು. ಕೇಂದ್ರದ ಬೆಂಬಲ ಇಲ್ಲದೆ, ಈ ರಾಜ್ಯಗಳು ತಮ್ಮ ಕಾರ್ಮಿಕರಿಗೆ ಸಹಾಯ ಮಾಡಲು ಸಾಧ್ಯ ಇಲ್ಲ. ವಾಸ್ತವವಾಗಿ, ಅತಿಥಿ ಕಾರ್ಮಿಕರಿಗೆ ಸಹಾಯ ಮಾಡುವಲ್ಲಿ ಕೇಂದ್ರ ಹೆಚ್ಚಿನ ಹೊಣೆ ಹೊರಬೇಕಿದೆ.

ತಮ್ಮ ಗ್ರಾಮಗಳಿಗೆ ಮರಳಿದ ಕಾರ್ಮಿಕರು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಹಿಂತಿರುಗುವ ಸಾಧ್ಯತೆ ಇಲ್ಲದ ಕಾರಣ ರಾಜ್ಯ ಸರ್ಕಾರಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ. ಈ ಕುರಿತಂತೆ ನಿಮ್ಮ ಸಲಹೆ ಏನು ?

ಅತಿಥಿ ಕೆಲಸಗಾರರು ಒಂದಲ್ಲಾ ಒಂದು ದಿನ ಹಿಂತಿರುಗುತ್ತಾರೆ. ಕೆಲವು ಅವಧಿಗೆ, ಅವರು ತಮ್ಮ ಊರಿನ ಹತ್ತಿರದಲ್ಲಿ ಕೆಲಸ ಪಡೆಯಬಹುದು. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಕಾರ್ಮಿಕರು ಹೆಚ್ಚು ಮರಳಿರುವ ಕಾರಣದಿಂದಾಗಿ, ಅಲ್ಲಿ ಕಾರ್ಮಿಕರ ವೇತನ ಕಡಿಮೆ ಆಗಬಹುದು. ಉದ್ಯಮದ ಮಾಲೀಕರು ಈ ಪರಿಸ್ಥಿತಿಯ ಅನಗತ್ಯ ಲಾಭ ಪಡೆಯಬಹುದು. ಕೆಲವು ರಾಜ್ಯಗಳು ಕಾರ್ಮಿಕರ ಪರವಾದ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ಮಾಡುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಉದ್ಯೋಗ ಅವಕಾಶಗಳ ಕೊರತೆ ಮತ್ತು ಆಹಾರ ಬಿಕ್ಕಟ್ಟು ಕಾರ್ಮಿಕರನ್ನು ಭೀಕರ ಪರಿಸ್ಥಿತಿಗಳಿಗೆ ತಳ್ಳಿದ್ದು ಇದು ಬದಲಾದ ಕಾರ್ಮಿಕ ಕಾನೂನುಗಳ ವಿರುದ್ಧ ಧ್ವನಿ ಎತ್ತುವುದನ್ನು ತಡೆಯುತ್ತಿದೆ.

For All Latest Updates

TAGGED:

Jean Dreze
ETV Bharat Logo

Copyright © 2025 Ushodaya Enterprises Pvt. Ltd., All Rights Reserved.