ಕೊಹಿಮಾ : ನಾಗಾಲ್ಯಾಂಡ್-ಮಣಿಪುರ ಗಡಿಭಾಗವಾದ ಕೊಹಿಮಾದ ಜೌಕು ಕಣಿವೆಯಲ್ಲಿ ಕಾಳ್ಗಿಚ್ಚು ಇನ್ನೂ ನಿಂತಿಲ್ಲ. ಬೆಂಕಿಯನ್ನು ನಂದಿಸಲು ಬಾಂಬಿ ಬಕೆಟ್ ಹೊತ್ತ ನಾಲ್ಕು ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಸೇನೆ ನಿಯೋಜಿಸಿದೆ.
ನಾಲ್ಕು Mi-17 ಹೆಲಿಕಾಪ್ಟರ್ಗಳನ್ನು ದಿಮಾಪುರ್ ಮತ್ತು ರಂಗಾಪಹಾರ್ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ನಿನ್ನೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 60 ಸಿಬ್ಬಂದಿ, ನಾಗಾಲ್ಯಾಂಡ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಕೂಡ ಅಗ್ನಿ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಕುಲ್ಲುವಿನಲ್ಲಿ ಭಾರೀ ಹಿಮಪಾತ ; 300 ಪ್ರವಾಸಿಗರ ರಕ್ಷಣೆ
ಮರಗಳು ಬೆಂಕಿಗಾಹುತಿಯಾಗುತ್ತಿದ್ದು, ಬೆಂಕಿ ನಂದಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರ ಸಿಎಂ ಬಿರೇನ್ ಸಿಂಗ್ ಅವರಿಗೆ ಭರವಸೆ ನೀಡಿದ್ದಾರೆ.