ETV Bharat / bharat

ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ: ವಿಕಾಸ್ ದುಬೆ ಪತ್ನಿ - ವಿಕಾಸ್​ ದುಬೆ

ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್​ ದುಬೆ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿದ್ದು, ದುಬೆ ಪತ್ನಿ ರಿಚಾ ದುಬೆ ನನ್ನ ಗಂಡನ ಸಾವಿಗೆ ನ್ಯಾಯ ಸಿಗಲಿದೆ, ನನಗೆ ಕಾನೂನು ಸುವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

Vikas Dubey's wife
ವಿಕಾಸ್​ ದುಬೆ ಪತ್ನಿ ಪ್ರತಿಕ್ರಿಯೆ
author img

By

Published : Jul 25, 2020, 5:39 PM IST

ಲಕ್ನೋ (ಉತ್ತರ ಪ್ರದೇಶ): ತನ್ನ ಪತಿ ವಿಕಾಸ್​ ದುಬೆಯನ್ನು ಎನ್​ಕೌಂಟರ್​ ಮೂಲಕ ಪೊಲೀಸರು ಹತ್ಯೆಗೈದಿದ್ದು, ಇದು ಉದ್ದೇಶಪೂರ್ವಕವಾಗಿ ಮಾಡಿದ ಎನ್​ಕೌಂಟರ್​ ಆಗಿದೆ. ಈ ವಿಚಾರದಲ್ಲಿ ನನಗೆ ನ್ಯಾಯ ಸಿಗಲಿದೆ, ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ ಎಂದು ದುಬೆ ಪತ್ನಿ ರಿಚಾ ದುಬೆ ಹೇಳಿದ್ದಾರೆ.

ವಿಕಾಸ್​ ದುಬೆ ಪತ್ನಿ ಪ್ರತಿಕ್ರಿಯೆ

ಉತ್ತರ ಪ್ರದೇಶದ ಸ್ವಗೃಹದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ರಿಚಾ ದುಬೆ, ತಮ್ಮ ಪತಿಗೆ ಅಪರಾಧ ಕೃತ್ಯದಲ್ಲಿ ತೊಡಗದಂತೆ ಹಲವಾರು ಬಾರಿ ಬುದ್ದಿವಾದ ಹೇಳಿದ್ದೆ, ಸಾಕಷ್ಟು ಬಾರಿ ಅವರ ಮನವೊಲಿಸಿ ಸಾಮಾನ್ಯ ಜನರಂತೆ ಮಾಡಲು ಪ್ರಯತ್ನಿಸಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ವಿಕಾಸ್​ ಓರ್ವ ವಿಭಿನ್ನ ಮನಸ್ಥಿತಿಯ ವ್ಯಕ್ತಿಯಾಗಿದ್ದರಿಂದ ಕೊನೆಗೂ ಅದು ಸಾಧ್ಯವಾಗಲೇ ಇಲ್ಲ ಎಂದು ರಿಚಾ ಹೇಳಿದ್ದಾರೆ.

ಜುಲೈ 2 ಮತ್ತು 3ರ ಮಧ್ಯರಾತ್ರಿ ಕಾನ್ಪುರದ ಬಿಕ್ರು ಗ್ರಾಮದಲ್ಲಿ ಪೊಲೀಸರನ್ನು ಗುಂಡು ಹಾರಿಸಿ ಕೊಲೆಗೈಯಲಾಗಿದ್ದು, ಅವರ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ ಹಾಗೂ ನನ್ನ ಪತಿ ಅಗಲಿಕೆ ನನಗೆ ಬೇಸರ ತಂದಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತಲಿದ್ದು, ಕಾನೂನು ವ್ಯವಸ್ಥೆಯ ಮೇಲೆ ಅತ್ಯಂತ ನಂಬಿಕೆ ಇರುವುದರಿಂದ ನನಗೆ ನ್ಯಾಯ ದೊರೆಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.