ಜಾನ್ಪೂರ್(ಉತ್ತರಪ್ರದೇಶ): ವ್ಯಕ್ತಿಗಳಿಬ್ಬರು ತೃತೀಯ ಲಿಂಗಿಗಳಂತೆ ನಟನೆ ಮಾಡಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಹಾಕಿಕೊಂಡಿದ್ದು, ಹಿಗ್ಗಾಮುಗ್ಗಾ ಥಳಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತೃತೀಯ ಲಿಂಗಿಗಳಂತೆ ವೇಷ ಹಾಕಿಕೊಂಡಿರುವ ಇಬ್ಬರು ಪುರುಷರು, ಗ್ರಾಮದಲ್ಲಿ ಮಗು ಜನಿಸಿದ ವ್ಯಕ್ತಿಯೋರ್ವರ ಮನೆಗೆ ತೆರಳಿ ಹಣ ಕೇಳಿದ್ದಾರೆ. ಜತೆಗೆ ಕೆಲವೊಂದು ಆಚರಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅವರ ನಿಜರೂಪ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ತಲೆ ಕೂದಲು ಬೋಳಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತದನಂತರ ಗ್ರಾಮಸ್ಥರು ಸೇರಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಈಗಾಗಲೇ ಅವರನ್ನ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.