ETV Bharat / bharat

ಬಾಡಿಗೆ ಮನ್ನಾ ಮಾಡಿ ಹೃದಯ ವೈಶಾಲ್ಯತೆ ಮೆರೆದ ಮಂಗಳಮುಖಿಯರ ಸಮುದಾಯ - ಪಾಲಿ

12 ಮನೆ ಹಾಗೂ 11 ಅಂಗಡಿಗಳ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಪಾಲಿಯ ಮಂಗಳಮುಖಿ ಸಮುದಾಯ ಹೃದಯ ವೈಶಾಲ್ಯತೆ ಮೆರೆದಿದೆ. ಬೇರೆಯವರಿಂದ ಬೇಡಿ ಪಡೆಯುವ ನಾವು ಈ ಸಂಕಷ್ಟದ ಸಮಯದಲ್ಲಿ ನಮ್ಮ ಬಳಿ ಇರುವುದನ್ನು ಬೇರೆಯವರಿಗೆ ಹಂಚುತ್ತಿದ್ದೇವೆ ಎಂದು ಸಮುದಾಯದ ಮುಖ್ಯಸ್ಥ ಆಶಾ ಕುಂವರ್ ಹೇಳಿದ್ದಾರೆ.

'Big-hearted Transgender
'Big-hearted Transgender
author img

By

Published : Apr 13, 2020, 6:41 PM IST

ಪಾಲಿ (ರಾಜಸ್ಥಾನ): ಲಾಕ್​ಡೌನ್​ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವ ಜನತೆಗೆ ತಮ್ಮ ಕೈಲಾದ ಸಹಾಯ ಮಾಡಲು ಇಲ್ಲಿನ ಮಂಗಳಮುಖಿ ಸಮುದಾಯ ಮುಂದಾಗಿದೆ. ಸಮುದಾಯದ ಒಡೆತನದಲ್ಲಿರುವ 12 ಮನೆ ಹಾಗೂ 11 ಅಂಗಡಿಗಳ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಬಾಡಿಗೆದಾರರಿಗೆ ನೆಮ್ಮದಿ ಮೂಡಿಸಿದ್ದಾರೆ. ಪಾಲಿ ಪ್ರದೇಶದ ಮಂಗಳಮುಖಿ ಸಮುದಾಯದ ಮುಖ್ಯಸ್ಥ ಆಶಾ ಕುಂವರ್ ಈ ನಿರ್ಧಾರ ಪ್ರಕಟಿಸಿದ್ದಾರೆ.

ದೇಶದಲ್ಲಿ ಎಲ್ಲೆಲ್ಲೂ ಕೊರೊನಾ ಮಹಾಮಾರಿಯ ಸಂಕಷ್ಟ ಆವರಿಸಿದೆ. ಪಾಲಿ ಜಿಲ್ಲೆಯಲ್ಲಿಯೂ ಇದರ ಪರಿಣಾಮ ಅಧಿಕವಾಗಿದೆ. ಲಾಕ್​ಡೌನ್​ ಇರುವುದರಿಂದ ಕೂಲಿ ಕಾರ್ಮಿಕರು ಬಹಳ ತೊಂದರೆಗೀಡಾಗಿದ್ದಾರೆ. ಬೇರೆಯವರಿಂದ ಬೇಡಿ ಪಡೆಯುವ ನಾವು ಈ ಸಂಕಷ್ಟದ ಸಮಯದಲ್ಲಿ ನಮ್ಮ ಬಳಿ ಇರುವುದನ್ನು ಬೇರೆಯವರಿಗೆ ಹಂಚುತ್ತಿದ್ದೇವೆ ಎಂದು ಆಶಾ ಕುಂವರ್ ಹೇಳಿದ್ದಾರೆ.

ಕಳೆದ 15 ದಿನಗಳಿಂದ ಶಿಬಿರಗಳನ್ನು ಸ್ಥಾಪಿಸಿ ಬಡವರಿಗೆ ಊಟ ಹಂಚುವ ಕೆಲಸವನ್ನು ಆಶಾ ಕುಂವರ್ ಮಾಡುತ್ತಿದ್ದಾರೆ. ಮಂಗಳಮುಖಿ ಸಮುದಾಯದ ಹೃದಯ ವೈಶಾಲ್ಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.