ETV Bharat / bharat

ಭಾರತದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸ್ಕೆಚ್​... ವೆಬ್​ಸೈಟ್​ ಮೂಲಕ ಅಲ್​-ಖೈದಾ ಆಂದೋಲನ! - ಸಾಮಾಜಿಕ ಜಾಲತಾಣದ ಮೂಲಕ ಉಗ್ರ ಕೃತ್ಯಕ್ಕೆ ಪ್ರಚೋದನೆ

ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಅಲ್-ಖೈದಾ ಉಗ್ರ ಸಂಘಟನೆ, ಭಯೋತ್ಪಾದನೆ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ.

lone wolf attacks in India
ಭಾರತದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸ್ಕೆಚ್
author img

By

Published : Jun 10, 2020, 5:18 PM IST

ನವದೆಹಲಿ: ಅಲ್-ಖೈದಾ ಉಗ್ರ ಸಂಘಟನೆ ತನ್ನ ವೆಬ್‌ಸೈಟ್‌ಗಳ ಮೂಲಕ ಬೃಹತ್ ಆಂದೋಲನ ನಡೆಸುತ್ತಿದ್ದು, ಭಾರತ ಸರ್ಕಾರ, ಭದ್ರತಾ ಸಂಸ್ಥೆಗಳು, ಹಿಂದೂಪರ ನಾಯಕರು ಮತ್ತು ಕೆಲವು ವರ್ಗದ ವ್ಯಕ್ತಿಗಳ ವಿರುದ್ಧ ದುಷ್ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಎಲ್ಲಾ ಭದ್ರತಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹಂಚಿಕೊಂಡಿರುವ ಗುಪ್ತಚರ ಇಲಾಖೆ ಮಾಹಿತಿಯ ಪ್ರಕಾರ, ಅಲ್-ಖೈದಾ ಉಗ್ರ ಸಂಘಟನೆ ಇತ್ತೀಚೆಗೆ ವೆಬ್‌ಸೈಟ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದೆ. ಈ ವಿಡಿಯೋಗಳು ಜಾಗತಿಕ ಮಟ್ಟದಲ್ಲಿ ಜಿಹಾದ್​ ಅನ್ನು ಮುಂದುವರೆಸುವುದು, ಭಯೋತ್ಪಾದನೆ ಕೃತ್ಯಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ವಿವರವಾದ ಕಾರ್ಯತಂತ್ರವನ್ನು ಒದಗಿಸುತ್ತದೆ. ಇದಕ್ಕಾಗಿ ಬಾಂಗ್ಲಾ ಮೂಲದ ನಾಯಕರನ್ನು ಬಳಸಿಕೊಳ್ಳುತ್ತಿದೆ.

ಬಾಂಗ್ಲಾದೇಶ ಮತ್ತು ಭಾರತದಲ್ಲಿ ಸಮಾನ ಮನಸ್ಕ ವ್ಯಕ್ತಿಗಳನ್ನು ತಲುಪಲು ಆನ್‌ಲೈನ್ ಫೋರಂಗಳು, ಸಾಮಾಜಿಕ ಜಾಲತಾಣಗಳಲ್ಲಿ ನಿಯಮಿತವಾಗಿ ವಿಡಿಯೋ ಅಪ್‌ಲೋಡ್ ಮಾಡಲಾಗುತ್ತಿದೆ. ಭಯೋತ್ಪಾದಕ ದಾಳಿ ನಡೆಸಲು ಈ ವಿಡಿಯೋಗಳು ಪ್ರೇರೇಪಿಸುತ್ತಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಈ ಬಗ್ಗೆ ಮಾಹಿತಿ ದೊರೆತ ನಂತರ ವಿವಿಐಪಿಗಳಿಗೆ ನೀಡಿರುವ ಭದ್ರತೆಯಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ. ಯಾವುದೇ ದಾಳಿಯ ಸಂದರ್ಭದಲ್ಲಿ ಭಯ ಪಡಬೇಡಿ, ಪೂರ್ವನಿರ್ಧರಿತ ಆಕಸ್ಮಿಕ ಯೋಜನೆಯ ಪ್ರಕಾರ ಕೆಲಸ ಮಾಡಿ ಎಂದು ಸೂಚಿಸಲಾಗಿದೆ.

2014 ರಲ್ಲಿ ಅಲ್-ಖೈದಾ ಮುಖ್ಯಸ್ಥ ಅಮಾನ್ ಅಲ್-ಜವಾಹರಿ ಭಾರತೀಯ ಉಪಖಂಡದಲ್ಲಿ ಅಲ್-ಖೈದಾ ರಚನೆಯನ್ನು ಘೋಷಿಸಿದ್ದ. ಭಾರತ ಮೂಲದ ಅಸಿಮ್ ಉಮರ್ ಅದರ ನಾಯಕನಾಗಿದ್ದಾನೆ. ಪಾಕಿಸ್ತಾನ, ಭಾರತ, ಅಫ್ಘಾನಿಸ್ತಾನ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಸರ್ಕಾರಗಳ ವಿರುದ್ಧ ಹೋರಾಡುವುದೇ ಈ ಸಂಘಟನೆಯ ಗುರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.