ETV Bharat / bharat

ಮಲಪ್ಪುರಂ: ಮೂರು ಹುಲಿಗಳನ್ನು ಗುಂಡಿಕ್ಕಿ ಕೊಂದು ಹೂತು ಹಾಕಿದ ಬೇಟೆಗಾರರು

ಎಸ್ಟೇಟ್ ಮ್ಯಾನೇಜ್ಮೆಂಟ್ ಸಹಾಯದಿಂದ ಕಳ್ಳ ಬೇಟೆಗಾರರು ಮೂರು ಹುಲಿಗಳನ್ನು ಕೊಂದು ಹೂತುಹಾಕಿರುವ ಆರೋಪ ಕೇಳಿಬಂದಿದೆ. ಎರಡೂವರೆ ವರ್ಷಗಳ ಹಿಂದೆ ಹುಲಿಗಳನ್ನು ಕೊಂದಿದ್ದಾರೆ. ನಾಲ್ಕು ಹುಲಿಗಳ ಮೇಲೆ ಗುಂಡು ಹಾರಿಸಿದರೂ ಅದರಲ್ಲಿ ಮೂರು ಹುಲಿಗಳು ಸಾವನ್ನಪ್ಪಿವೆ. ಕೇರಳದ ಮಲಪ್ಪುರಂನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

Allegation about tigers were shot and killed at malappuram
ಮಲಪ್ಪುರಂ: ಮೂರು ಹುಲಿಗಳನ್ನು ಗುಂಡಿಕ್ಕಿ ಕೊಂದು ಹೂತು ಹಾಕಿದ ಬೇಟೆಗಾರರು
author img

By

Published : Aug 18, 2020, 12:06 PM IST

ಮಲಪ್ಪುರಂ(ಕೇರಳ): ಬೇಟೆಗಾರರು ಮೂರು ಹುಲಿಗಳನ್ನು ಗುಂಡಿಕ್ಕಿ ಕೊಂದು ನೀಲಂಬುರ ಪುಲ್ಲಂಗೋಡ್ ರಬ್ಬರ್ ಎಸ್ಟೇಟ್​ನಲ್ಲಿ ಹೂತಿದ್ದಾರೆ ಎಂದು ಎಸ್ಟೇಟ್ ಉದ್ಯೋಗಿ ಸಫೀರ್ ಆರೋಪಿಸಿದ್ದಾರೆ.

ಎಸ್ಟೇಟ್ ಮ್ಯಾನೇಜ್ಮೆಂಟ್ ಸಹಾಯದಿಂದ ಕಳ್ಳ ಬೇಟೆಗಾರರು ಮೂರು ಹುಲಿಗಳನ್ನು ಕೊಂದು ಬಳಿಕ ಹೂತು ಹಾಕಿದ್ದಾರೆ ಎಂದು ಸಫೀರ್​ ದೂರಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಹುಲಿಗಳನ್ನು ಕೊಂದಿದ್ದಾರೆ. ನಾಲ್ಕು ಹುಲಿಗಳ ಮೇಲೆ ಗುಂಡು ಹಾರಿಸಿದ್ದರು. ಆ ಪೈಕಿ ಮೂರು ಹುಲಿಗಳು ಸಾವನ್ನಪ್ಪಿವೆ ಎಂದು ಎಸ್ಟೇಟ್​ ಉದ್ಯೋಗಿ ಹೇಳಿದ್ದಾರೆ.

ಇಬ್ಬರು ಸ್ಥಳೀಯರ ಸಹಾಯದಿಂದ ಬೇಟೆಗಾರರು ಮೃತಪಟ್ಟ ಮೂರು ಹುಲಿಗಳನ್ನು ಎಸ್ಟೇಟ್‌ನಲ್ಲಿಯೇ ಹೂತು ಹಾಕಿದರು. ಇವರು ನಿಯಮಿತವಾಗಿ ಆಹಾರಕ್ಕಾಗಿ ಎಸ್ಟೇಟ್ ನಲ್ಲಿ ಬೇಟೆಯಾಡುತ್ತಾರೆ. ಇದರ ನಡುವೆ ಹುಲಿಗಳು ದಾಳಿ ಮಾಡಬಹುದೆಂಬ ಭಯದಿಂದ ಗುಂಡಿಕ್ಕಿ ಸಾಯಿಸಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಹುಲಿಯ ಹಲ್ಲುಗಳನ್ನು ಕಾಳಿಕಾವು ಅರಣ್ಯ ಅಧಿಕಾರಿಗೆ ಕಳುಹಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿದಾಗ ಸಫೀರ್​ ಅವರನ್ನು ಎಸ್ಟೇಟ್ ನಿಂದ ಅಮಾನತುಗೊಳಿಸಲಾಗಿದೆ. ಹತ್ಯೆಗೀಡಾದ ಹುಲಿಯ ಉಗುರುಗಳನ್ನು ಸಾಕ್ಷ್ಯಕ್ಕಾಗಿ ಇಡಲಾಗುತ್ತಿದೆ ಎಂದು ಸಫೀರ್ ಹೇಳಿದ್ದಾರೆ.

ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ಎಸ್ಟೇಟ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.