ETV Bharat / bharat

ಮದ್ಯ ಸೇವನೆಯಿಂದ ಭಾರತದ ಜಿಡಿಪಿಗೆ ಈ ಪರಿ ನಷ್ಟ.. ಹೊಸ ಥಿಯೆರಿ ಹೇಳ್ತಿದೆ ಈ ವರದಿ

ಮದ್ಯ ಸೇವನೆ ಆರೋಗ್ಯಕ್ಕಷ್ಟೇ ಅಲ್ಲ, ದೇಶದ ಆರ್ಥಿಕ ಪರಿಸ್ಥಿತಿಗೂ ಗಂಡಾಂತರ ತಂದೊಡ್ಡಬಹುದು ಎಂದು ವರದಿಯೊಂದು ಹೇಳುತ್ತಿದೆ.

author img

By

Published : Jul 16, 2019, 9:35 AM IST

Updated : Jul 16, 2019, 12:03 PM IST

ಜೀವಿತಾವಧಿ ಆತಂಕದಲ್ಲಿ ಮದ್ಯ ವ್ಯಸನಿಗಳು

ದೆಹಲಿ: ಮದ್ಯ ಸೇವನೆ ಆರೋಗ್ಯಕ್ಕಷ್ಟೇ ಅಲ್ಲ, ದೇಶದ ಆರ್ಥಿಕ ಪರಿಸ್ಥಿತಿಗೂ ಗಂಡಾಂತರ ತಂದೊಡ್ಡಬಹುದು ಎಂದು ವರದಿಯೊಂದು ಹೇಳುತ್ತಿದೆ.

ಭಾರತದಲ್ಲಿ 2011ರಿಂದ 2050 ವರ್ಷಗಳ ನಡುವೆ ಮದ್ಯ ಸೇವನೆಯಿಂದ ಕನಿಷ್ಠ 258 ಮಿಲಿಯನ್ ವರ್ಷಗಳ ಜೀವಿತಾವಧಿ ನಷ್ಟವಾಗಲಿದ್ದು. ಇದರಿಂದ ಪ್ರತಿವರ್ಷ 1.45 ಶೇಕಡ ಜಿಡಿಪಿ ನಷ್ಟವಾಗುತ್ತಿದೆ ಎಂದು ಇಂಟರ್​ ನ್ಯಾಷನಲ್​ ಜರ್ನಲ್ ಆಫ್ ಡ್ರಗ್​ ಪ್ರಕಟಿಸಿದೆ.

ಮೂವರು ಭಾರತೀಯ ವೈದ್ಯರು, ಇಬ್ಬರು ಸಾರ್ವಜನಿಕ ಆರೋಗ್ಯ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.

ind
ಜೀವಿತಾವಧಿ ಆತಂಕದಲ್ಲಿ ಮದ್ಯ ವ್ಯಸನಿಗಳು

ಪಿತ್ತಜನಕಾಂಗ ಕಾಯಿಲೆ, ಕ್ಯಾನ್ಸರ್ ಮತ್ತು ರಸ್ತೆ ಅಪಘಾತಗಳು ಈ ಮೂರು ಅಂಶಗಳನ್ನು ಪರಿಶೀಲಿಸಿ ಈ ಅಧ್ಯಯನವನ್ನು ತಂಡವು ಮುಂದಿಟ್ಟಿದೆ.

ಈ ಸಂಶೋಧನೆಯು ಕೆಲವು ಆತಂಕಕಾರಿ ಅಂಶಗಳನ್ನು ಹೊರಹಾಕಿದೆ. 5.7 ಕೋಟಿ ಭಾರತೀಯ ಮದ್ಯ ವ್ಯಸನಿಗಳಿಗೆ ತುರ್ತು ಸಹಾಯದ ಅಗತ್ಯವಿದೆ ಎಂದು ಹೇಳಲಾಗಿದ್ದು ಈ ವರದಿಯನ್ನು ಸಾಮಾಜಿಕ ಸಮೀಕ್ಷೆ ಸಚಿವಾಲಯಕ್ಕೂ ನೀಡಲಾಗಿದೆ.

ಈ ಅಧ್ಯಯನವು ಮದ್ಯ ನಿಷೇಧವನ್ನು ಪ್ರತಿಪಾದಿಸುವುದಿಲ್ಲ. ಆದರೆ, ಜಾಗೃತಿ, ಮಾರಾಟದ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯತಂತ್ರಗಳ ಅಗತ್ಯವನ್ನು ಕೇಂದ್ರೀಕರಿಸಿದೆ ಎಂದು ಸಂಶೋಧನಾ ತಂಡವು ಹೇಳಿದೆ.

2011ರಲ್ಲಿ ಭಾರತದಲ್ಲಿ ಪಿತ್ತಜನಕಾಂಗದ ಕಾಯಿಲೆಯಿಂದ (ಸಿರೋಸಿಸ್​) 1.67 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಮದ್ಯಪಾನದಿಂದಾಗಿ 2015ರ ವೇಳೆಗೆ 1.88 ಲಕ್ಷ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

Intro:Body:Conclusion:
Last Updated : Jul 16, 2019, 12:03 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.