ETV Bharat / bharat

ಆಳೋರ ಕೈಗೊಂಬೆ ಎಸಿಬಿ.. ಭ್ರಷ್ಟಾಚಾರ ನಿಗ್ರಹದ ಅವಕಾಶವಾದಿ ಅಫಿಡವಿಟ್‌ಗಳು!!

ಅವ್ಯವಹಾರ ಹಾಗೂ ಭ್ರಷ್ಟಾಚಾರದ ಕುರಿತು ಎಷ್ಟೇ ಬೊಬ್ಬೆ ಹಾಕಿದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಸಂಸ್ಥೆಗಳು ತಮ್ಮ ರಾಜಕೀಯ ನಾಯಕರ ನಿಲುವುಗಳಿಗೆ ತಲೆ ಅಲ್ಲಾಡಿಸುತ್ತಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇ.ಡಿ), ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇತ್ಯಾದಿ ಸಂಸ್ಥೆಗಳು ಅಧಿಕಾರದಲ್ಲಿರುವ ನಾಯಕರ ನಿಲುವುಗಳಿಗೆ ಪೂರಕವಾಗಿದ್ದುಕೊಂಡು, ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ ಮತ್ತು ಸಾರ್ವಜನಿಕರು ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ.

corruption
ಭ್ರಷ್ಟಾಚಾರ ನಿಗ್ರಹದ ಅಫಿಡವಿಟ್‌
author img

By

Published : Dec 21, 2019, 4:21 PM IST

Updated : Dec 21, 2019, 4:31 PM IST

ಯಾವುದೇ ಕೋನದಿಂದ ನೋಡಿದರೂ ಈಗಿನ ರಾಜಕೀಯ ಸಂಪೂರ್ಣವಾಗಿ ಭ್ರಷ್ಟರಿಂದ ತುಂಬಿ ಹೋಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ರಾಜಕೀಯ ನಾಯಕರು ಈಗ ಚುನಾವಣೆ ಸಮಯದಲ್ಲಾಗಲೀ ಅಥವಾ ನಂತರದಲ್ಲಾಗಲೀ ಮಾಡುವ ಯಾವ ಭರವಸೆಗಳಿಗೂ ತಲೆ ಬುಡ ಇರುವುದಿಲ್ಲ. ಈ ಭರವಸೆಗಳನ್ನು ಈ ನೆಲದ ಸಂವಿಧಾನ ಹಾಗೂ ಕಾನೂನುಗಳಿಗೆ ಅನುಗುಣವಾಗಿ ಈಡೇರಿಸುವ ನಂಬಿಕೆಯೂ ಜನರಲ್ಲಿ ಇರುವುದಿಲ್ಲ. ಇದರಲ್ಲಿ ಅವರು ಯಾವ ತಾರತಮ್ಯ ಮಾಡುವುದಿಲ್ಲ, ಅನ್ಯ ಉದ್ದೇಶವನ್ನು ಹೊಂದಿರುವುದಿಲ್ಲ ಎಂಬ ನಂಬಿಕೆಯೂ ಜನರಲ್ಲಿ ಇರುವುದಿಲ್ಲ.

ಭ್ರಷ್ಟಾಚಾರ ನಿಗ್ರಹ ದಳವಂತೂ ಅವರ ಕೈಯಲ್ಲೇ ಇದೆ. ಮಾತು ಬದಲಿಸುವವರೆಂದರೆ ರಾಜಕೀಯ ನಾಯಕರು ಎಂಬುದು ಸಾಮಾನ್ಯ ಜನರಿಗೂ ತಿಳಿದುಹೋಗಿದೆ. ಇದಕ್ಕೆ ಪೂರಕವಾಗಿ ಈಗ ಭ್ರಷ್ಟಾಚಾರ ನಿಗ್ರಹ ದಳಗಳೂ ತಮ್ಮ ನಿಲುವು ಬದಲಿಸುತ್ತಿವೆ. ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳವು ತಮ್ಮ ರಾಜಕೀಯ ನಾಯಕ ಬದಲಾಗುದ್ದಂತೆ ಕೋರ್ಟ್‌ನಲ್ಲಿ ಹೇಳಿಕೆಯನ್ನೂ ಬದಲಿಸುತ್ತಿದೆ.

ಮಹಾರಾಷ್ಟ್ರದಲ್ಲಿ ಜಲ ಸಂಪನ್ಮೂಲ ಯೋಜನೆಗಳನ್ನು ನೀಡುವಲ್ಲಿ ಅಪಾರ ಪ್ರಮಾಣದ, ಅಂದರೆ 70,000 ಕೋಟಿ ರೂ. ಮೌಲ್ಯದ ಹಗರಣದ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಈ ಅಕ್ರಮದಲ್ಲಿ ಅಜಿತ್‌ ಪವಾರ್‌ ಪಾತ್ರ ಯಾವ ಮಟ್ಟಿಗೆ ಇದೆ ಎಂಬುದನ್ನು ಕಂಡುಕೊಳ್ಳುವಂತೆ ಎಸಿಬಿಗೆ ಬಾಂಬೆ ಹೈಕೋರ್ಟ್‌ ಈಗಾಗಲೇ ಆದೇಶ ನೀಡಿತ್ತು. ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಕಳೆದ ವರ್ಷದ ನವೆಂಬರ್‌ನ ಕೊನೆಯ ವಾರದಲ್ಲಿ ಎಸಿಬಿ ತನ್ನ ಅಫಿಡವಿಟ್‌ ಸಲ್ಲಿಸಿತ್ತು. ಈ ಅಫಿಡವಿಟ್‌ನಲ್ಲಿ ‘ಕಾಂಗ್ರೆಸ್‌ ಮತ್ತು ಎನ್‌ಸಿಪಿ ನೇತೃತ್ವದ ಸರ್ಕಾರದಲ್ಲಿ ಅತಿ ಹೆಚ್ಚು ಅವಧಿಗೆ ಕಾರ್ಯನಿರ್ವಹಿಸಿದ ಜಲ ಸಂಪನ್ಮೂಲ ಸಚಿವರೇ ಈ ಹಗರಣಕ್ಕೆ ನೇರ ಹೊಣೆಯಾಗುತ್ತಾರೆ ಎಂಬುದಾಗಿ ಮಹಾರಾಷ್ಟ್ರ ಸರ್ಕಾರದ ಸಾಮಾನ್ಯ ಆಡಳಿತ ನಿಯಮಗಳ 10ನೇ ನಿಬಂಧನೆ ಹೇಳುತ್ತದೆ’ ಎಂದು ಎಸಿಬಿ ಪ್ರಮುಖವಾಗಿ ಉಲ್ಲೇಖಿಸಿತ್ತು.

ನೀರಾವರಿ ಯೋಜನೆಗಳಲ್ಲಿ ಎಲ್ಲ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಾರ್ಯದರ್ಶಿಗಳು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ಕರ್ತವ್ಯ ಎಂಬ ನಿಲುವನ್ನು ಅಜಿತ್‌ ಪವಾರ್‌ ವ್ಯಕ್ತಪಡಿಸುತ್ತಿದ್ದಾರೆ. ಗುತ್ತಿಗೆಗಳು ಹಾಗೂ ಮುಂಗಡ ಪಾವತಿಗೆ ಸಂಬಂಧಿಸಿದ ಎಲ್ಲ ಫೈಲ್‌ಗಳಿಗೂ ಅಜಿತ್‌ ಪವಾರ್‌ ಅವರೇ ಸಹಿ ಮಾಡಿದ್ದಾರೆ ಎಂಬುದಾಗಿ ಕೋರ್ಟ್‌ನಲ್ಲಿ ಎಸಿಬಿ ಈ ಹಿಂದೆ ಹೇಳಿತ್ತು.

ಇದೇ ರೀತಿ, ಅವ್ಯವಹಾರದಲ್ಲಿ ಜವಾಬ್ದಾರರಾಗಿರುವ ಮತ್ತು ಸರ್ಕಾರಕ್ಕೆ ಭಾರಿ ನಷ್ಟ ಉಂಟು ಮಾಡಿರುವ ಎಲ್ಲರೂ ಈಗ ತಮ್ಮ ಹೊಣೆಯನ್ನು ಇತರರ ಮೇಲೆ ಹೊರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಸಿಬಿ ಕೋರ್ಟ್‌ನಲ್ಲಿ ವಾದಿಸಿತ್ತು. ಈ ಮೂಲಕ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲರೂ ನಿಯಮ ಮತ್ತು ನೀತಿಗಳ ಆಸರೆ ಪಡೆದುಕೊಂಡು ಬಚಾವಾಗುತ್ತಿದ್ದಾರೆ ಎಂಬುದು ಎಸಿಬಿ ವಾದವಾಗಿತ್ತು. ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶವೇ ಜಲ ಸಂಪನ್ಮೂಲ ಸಚಿವಾಲಯಕ್ಕೆ ಇತ್ತು. ಈ ಉದ್ದೇಶದಿಂದಲೇ ಸಂಚು ಹೂಡಲಾಗಿತ್ತು ಎಂದು ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಎಸಿಬಿ ಹೇಳಿದೆ. ಆದರೆ, ಒಂದೇ ವರ್ಷದಲ್ಲಿ ತನ್ನ ನಿಲುವನ್ನೇ ಎಸಿಬಿ ಹೇಗೆ ಬದಲಿಸಿದೆ ಎಂದು ನೋಡಿ!

ಕೋರ್ಟ್‌ನಲ್ಲಿ ಎಸಿಬಿ ಪ್ರತಿನಿಧಿಸಿದ ಎಸ್‌ಪಿ 16 ಪುಟಗಳ ಅಫಿಡವಿಟ್‌ನ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ, ಅದರ ಧ್ವನಿಯಲ್ಲಿ ಬದಲಾವಣೆಯಾಗಿದೆ. ವಿದರ್ಭ ಇರಿಗೇಶನ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ಗೆ ಜಲ ಸಂಪನ್ಮೂಲ ಸಚಿವರು ಮುಖ್ಯಸ್ಥರಾಗಿದ್ದಾರೆ. ಆದರೂ, ಎಕ್ಸಿಕ್ಯೂಟಿವ್‌ ಕಮಿಟಿ ಮಾಡಿದ ತಪ್ಪುಗಳಿಗೆ ಅವರನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಅವ್ಯವಹಾರಗಳ ಮೇಲೆ ಕಣ್ಣಿಡುವುದು ಇವರ ಜವಾಬ್ದಾರಿ ಅಲ್ಲವೇ ಅಲ್ಲ ಎಂದು ಅಫಿಡವಿಟ್‌ನಲ್ಲಿ ಎಸ್‌ಪಿ ಬರೆದಿದ್ದಾರೆ. ಇದೇ ಎಸಿಬಿ ಈ ಹಿಂದೆ ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆದಿದೆ. ಇದಕ್ಕೆ ಅಜಿತ್‌ ಪವಾರ್‌ ಕೂಡ ಒಳಗೊಂಡಿದ್ದಾರೆ ಎಂದು ಹೇಳಿತ್ತು.

ಆದರೆ, ಈಗ ತನ್ನ ನಿಲುವನ್ನೇ ಬದಲಿಸಿದೆ. ಅಜಿತ್ ಪವಾರ್ ಬದಲಿಗೆ ನೀರಾವರಿ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಪೊರೇಶನ್‌ ಎಕ್ಸಿಕ್ಯೂಟಿವ್ ಡೈರೆಕ್ಟರ್ ಈ ಅವ್ಯವಹಾರಕ್ಕೆ ಕಾರಣ ಎನ್ನುತ್ತಿದೆ. ತನ್ನ ವಾದಕ್ಕೆ ಪೂರಕವಾಗಿ ತನ್ನ ವಾದವನ್ನೂ ಎಸಿಬಿ ಮಂಡಿಸಿದೆ. ಇದರಲ್ಲಿ ಹೆಚ್ಚಿನ ಬೆಲೆಗೆ ಗುತ್ತಿಗೆಗಳನ್ನು ನೀಡುವಂತೆ ಜಲ ಸಂಪನ್ಮೂಲ ಕಾರ್ಯದರ್ಶಿಗೆ ಅಜಿತ್‌ ಪವಾರ್‌ ಸೂಚಿಸಿದ್ದಾರೆ ಎಂಬುದಕ್ಕೆ ಯಾವ ದಾಖಲೆಯೂ ಇಲ್ಲ ಎಂದು ಹೇಳಿದೆ. ಎಸಿಬಿ ಸದ್ಯ 2654 ಟೆಂಡರ್‌ಗಳ ತನಿಖೆ ನಡೆಸುತ್ತಿದೆ.

ವಿದರ್ಭ ಇರಿಗೇಶನ್ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಅಡಿಯಲ್ಲಿ 45 ಪ್ರಾಜೆಕ್ಟ್‌ಗಳಿಗೆ ಈ ಟೆಂಡರ್‌ಗಳನ್ನು ಕರೆಯಲಾಗಿತ್ತು. ಈ ಪೈಕಿ 32 ನೀರಾವರಿ ಪ್ರಾಜೆಕ್ಟ್‌ಗಳಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ವಿಪರೀತ ವೆಚ್ಚ ಮಾಡಲಾಗಿದೆ. ಈ ಅವ್ಯವಹಾರದ ಮೊತ್ತ 17,700 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2018 ನವೆಂಬರ್‌ನಿಂದ ಈವರಗೆ ತನಿಖೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ ಎಂಬುದನ್ನು ನಂಬಲೂ ಕಷ್ಟವಾಗುತ್ತಿದೆ. ಅಜಿತ್‌ ಪವಾರ್ ಅವರೇ ಈ ಅವ್ಯವಹಾರಕ್ಕೆ ಕಾರಣ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದ ಎಸಿಬಿ ನಂತರ ಅಜಿತ್‌ ಪವಾರ್‌ ನೇರ ಹೊಣೆಗಾರರಲ್ಲ ಎಂಬರ್ಥದಲ್ಲಿ ಅಫಿಡವಿಟ್‌ ಸಲ್ಲಿಸುವ ಮೂಲಕ ನಿಲುವು ಬದಲಿಸಿದ್ದಕ್ಕೆ ಕಾರಣ ತಿಳಿಯಲಾರದ್ದೇನಲ್ಲ. ಅಗತ್ಯ ಬಿದ್ದಾಗ ತನ್ನ ಬಣ್ಣವನ್ನು ಹೇಗೆ ಎಸಿಬಿ ಬದಲಿಸಬಹುದು ಎಂಬುದನ್ನು ತಿಳಿದವರಿಗೆ ಅಫಿಡವಿಟ್‌ ಅದಕ್ಕೆ ಅನುಗುಣವಾಗಿ ಬದಲಿಸಲಾಗಿದೆ ಎಂಬುದನ್ನು ಅರಿಯುವುದು ಕಷ್ಟದ ಸಂಗತಿಯೇನಲ್ಲ.

ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ, ಐದು ವರ್ಷಗಳಿಗೆ ಒಮ್ಮೆ ಅಧಿಕಾರದ ಕುರ್ಚಿ ಬದಲಾಗುತ್ತದೆ. ಹೀಗೆ ಬದಲಾದಾಗ ಹೊಸ ಪಕ್ಷವೊಂದು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತದೆ. ಕೆಲವು ಬಾರಿ ಒಂದೇ ಪಕ್ಷದ ಇನ್ನೊಂದು ಪಂಗಡ ಬಂದು ಕುಳಿತುಕೊಳ್ಳುತ್ತದೆ. ಈ ಬದಲಾವಣೆಗೆ ಪೂರಕವಾಗಿ, ರಾಜಕಾರಣಿಗಳ ಇಷ್ಟ ಅನಿಷ್ಟಗಳಿಗೆ ತಕ್ಕಂತೆ ತಮ್ಮ ನಿಲುವನ್ನೂ ಬದಲಿಸಿಕೊಳ್ಳುವ ಕೌಶಲವನ್ನು ಎಲ್ಲ ಇಲಾಖೆಗಳೂ ಅಳವಡಿಸಿಕೊಂಡಿರುತ್ತವೆ. ಕೇವಲ ಹತ್ತು ದಿನಗಳ ಹಿಂದೆ ಅಜಿತ್‌ ಪವಾರ್‌ ತಮಗೆ ಸುತ್ತಿಕೊಂಡಿರುವ ಅವ್ಯವಹಾರಗಳ ಪ್ರಕರಣದಿಂದ ಹೊರಬರುತ್ತಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಫಡ್ನವಿಸ್‌ ಸರ್ಕಾರಕ್ಕೆ ಅವರು ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಈ ನೆರವನ್ನು ಅವರಿಗೆ ನೀಡಲಾಗಿದೆ ಎಂದು ಹೇಳಲಾಗಿತ್ತು.

ಆದರೆ, ಆಗ ಮಧ್ಯಪ್ರವೇಶಿಸಿದ ಎಸಿಬಿ ತಾವು ಕೇವಲ ಒಂಬತ್ತು ನೀರಾವರಿ ಇಲಾಖೆಗಳಿಗೆ ಸಂಬಂಧಿಸಿದ ಅವ್ಯವಹಾರ ಪ್ರಕರಣಗಳನ್ನು ಮುಚ್ಚುತ್ತಿದ್ದೇವೆ. ಇದಕ್ಕೂ ಅಜಿತ್‌ ಪವಾರ್ ಅವರಿಗೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟನೆ ನೀಡಿತು. ಹೀಗೆ ಹೇಳಿದ್ದ ಎಸಿಬಿಯೇ ಕಳೆದ ತಿಂಗಳು 27 ರಂದು ಅಫಿಡವಿಟ್‌ ಸಲ್ಲಿಸಿದ್ದರಲ್ಲಿ ನಿಲುವನ್ನೇ ಬದಲಿಸಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಕೆಲವು ನಿಯಮಗಳ ಪ್ರಕಾರ ಪ್ರಾಜೆಕ್ಟ್‌ಗಳಲ್ಲಿ ಅವ್ಯವಹಾರ ಮಾಡಿದ ಹೊಣೆಯನ್ನು ಅಜಿತ್‌ ಪವಾರ್‌ ಹೊಂದಿರುವುದಿಲ್ಲ ಎಂದಿದೆ.

ಮುಕ್ತಾಯಗೊಳಿಸಿದ ಪ್ರಕರಣಗಳ ಸಂಖ್ಯೆ ಒಂಬತ್ತಾಗಿರಲಿ ಅಥವಾ ಹತ್ತೊಂಬತ್ತಾಗಿರಲಿ, ಅಜಿತ್‌ ಪವಾರ್ ಅವರನ್ನು ಎಲ್ಲ ಪ್ರಕರಣಗಳಿಂದಲು ಮುಕ್ತವಾಗಿಸುವುದಕ್ಕಾಗಿ ಎಸಿಬಿ ಹಗಲು ರಾತ್ರಿ ಅತ್ಯಂತ ಉತ್ಸಾಹದಿಂದ ಶ್ರಮಿಸುತ್ತಿದೆ ಎಂಬುದು ಸಾಬೀತಾಗಿದೆ. ಇದೆಲ್ಲವೂ ನಡೆದಿದ್ದು, ಕೇವಲ ಅವರು ಫಡ್ನವಿಸ್‌ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಕಾರಣಕ್ಕೆ ಎಂಬುದು ಹೊಸ ಸಂಗತಿಯೇನಲ್ಲ. ಅವರು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಒಪ್ಪಂದ ಮಾತುಕತೆಯನ್ನು ಮುರಿದು ಫಡ್ನವಿಸ್‌ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. 2012 ರ ಸೆಪ್ಟೆಂಬರ್‌ನಲ್ಲಿ ಮಾಧ್ಯಮಗಳು ಬಹಿರಂಗಗೊಳಿಸಿದ ಪ್ರಕಾರ ಅಜಿತ್‌ ಪವಾರ್‌ ನೀರಾವರಿ ಸಚಿವರಾದಾಗ ಕೇವಲ 3 ತಿಂಗಳಲ್ಲಿ 32 ಯೋಜನೆಗಳಿಗೆ ಮಂಜೂರಿ ನೀಡಲಾಗಿತ್ತು. ನೀರಾವರಿ ಇಲಾಖೆಯು ವೆಚ್ಚ ಹೆಚ್ಚಳವಾಗುತ್ತಿದೆ ಎಂದು ಆಕ್ಷೇಪಣೆ ಸಲ್ಲಿಸಿದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳದೇ ಈ ಆದೇಶ ಹೊರಡಿಸಲಾಗಿತ್ತು.

1200 ದೊಡ್ಡ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳನ್ನು ಜಾರಿ ಮಾಡಲು ಅಂದಾಜು 70,000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ನೀರಾವರಿ ಯೋಜನೆಗಳನ್ನು ಪಡೆದ ಪ್ರದೇಶದಲ್ಲಿ ಪ್ರಗತಿಯ ದರ ಕೇವಲ ಒಂದು ಶೇಕಡಾ ಎಂದರೆ ನೀವು ನಂಬಬೇಕು! ನೀರಾವರಿ ಅಭಿವೃದ್ಧಿ ಕಾರ್ಪೊರೇಶನ್‌ನ ಒಂದೇ ಒಂದು ತುಂಡು ಶಿಫಾರಸು ಕೂಡ ಇಲ್ಲದೇ ಕೇವಲ ಎಂಟೇ ಎಂಟು ತಿಂಗಳುಗಳಲ್ಲಿ 20 ಸಾವಿರ ಕೋಟಿ ರೂ. ಮೊತ್ತದ ಭಾರಿ ಯೋಜನೆಗಳಿಗೆ ಅಜಿತ್‌ ಪವಾರ್‌ ಅನುಮೋದನೆ ನೀಡಿದ್ದಾರೆ. ಇದೇ ನೀರಾವರಿ ಅವ್ಯವಹಾರ ಬೆಳಕಿಗೆ ಬಂದಾಗ 2012 ರಲ್ಲಿ ಇವರನ್ನು ಹುದ್ದೆಯಿಂದ ಕೆಳಗೆ ಇಳಿಸಲಾಗಿತ್ತು. ಆಗ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಸರ್ಕಾರವು ರೂಪಿಸಿದ ವಿಶೇಷ ತನಿಖಾ ತಂಡಕ್ಕೆ ಇದೇ ಫಡ್ನವಿಸ್‌ ಸುಮಾರು 14 ಸಾವಿರ ಪುಟಗಳ ಭಾರಿ ದಾಖಲೆಗಳನ್ನೇ ಒದಗಿಸಿದ್ದರು. ಆಗ ಫಡ್ನವಿಸ್‌ ವಿಪಕ್ಷ ನಾಯಕರಾಗಿದ್ದರು.

ಕಾರ್ಪೊರೇಶನ್‌ ಕಾರ್ಯಕಾರಿ ಸಮಿತಿಯ ಸದಸ್ಯರ ಜೊತೆ ಶಾಮೀಲಾಗಿ ಗುತ್ತಿಗೆದಾರರಿಂದ ಅವರು ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಮಾಧವ್‌ ಚಿತಾಲೆ ನೇತೃತ್ವದ ತನಿಖಾ ಸಮಿತಿಯು ಈ ಕುರಿತ ಸಮಗ್ರ ವರದಿಯನ್ನೂ ನೀಡಿತ್ತು. ಆದರೆ ನಂತರ ಸರ್ಕಾರವು ಅಜಿತ್‌ ಪವಾರ್‌ಗೆ ಕ್ಲೀನ್‌ ಚಿಟ್‌ ನೀಡಿತು. 2014 ರಲ್ಲಿ ಫಡ್ನವಿಸ್‌ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಪ್ರಕರಣವನ್ನು ಎಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಸತತ ನಾಲ್ಕು ವರ್ಷಗಳವರೆಗೂ ನಡೆಯಿತು. ಅಜಿತ್‌ ಪವಾರ್‌ ಈ ಒಟ್ಟು ಅವ್ಯವಹಾರಗಳಿಗೆ ಕಾರಣ ಎಂದೂ ಅದು ಹೇಳಿತು. ಆದರೆ ಅದೇ ಸಂಸ್ಥೆ ತನ್ನ ನಿಲುವನ್ನು ಬದಲಿಸಿ ನಿಂತಿದೆ.

ಪುಣೆಯ ಒಬ್ಬ ಗುತ್ತಿಗೆದಾರರು ಈ ಹಿಂದೆಯೇ ಲಿಖಿತ ಸ್ಟೇಟ್‌ಮೆಂಟ್ ಅನ್ನೇ ನೀಡಿದ್ದಾರೆ. ಸರ್ಕಾರದ ಪ್ರತಿ ಹಂತದಲ್ಲೂ ಕಮಿಷನ್‌ ಪಾವತಿ ಮಾಡಬೇಕಾಗಿತ್ತು. ನೀರಾವರಿ ಇಲಾಖೆಯ ಹಲವು ಹಂತಗಳಲ್ಲಿರುವ ಅಧಿಕಾರಿಗಳಿಗೆ ಈ ಕಮಿಷನ್‌ ಪಾವತಿಯಾಗುತ್ತಿತ್ತು ಎಂದು 2014ರಲ್ಲಿ ಅವರು ಹೇಳಿದ್ದರು. ಎಕ್ಸೆಕ್ಯೂಟಿವ್ ಇಂಜಿನಿಯರುಗಳು, ಸೂಪರಿಂಟೆಂಡಿಂಗ್‌ ಇಂಜಿನಿಯರುಗಳು, ಡೈರೆಕ್ಟರುಗಳು, ಸೆಕ್ರೆಟರಿ ಮತ್ತು ಚೇರ್ಮನ್‌ಗೆ ಕಮಿಷನ್‌ ನೀಡಲಾಗುತ್ತಿತ್ತು. ಒಟ್ಟು ಪ್ರಾಜೆಕ್ಟ್‌ನ ವೆಚ್ಚದಲ್ಲಿ ಶೇ. 22 ರ ವರೆಗೂ ಈ ಕಮಿಷನ್‌ ಇರುತ್ತಿತ್ತು ಎಂದು ಅವರು ಹೇಳಿದ್ದರು.

ಅವ್ಯವಹಾರ ಹಾಗೂ ಭ್ರಷ್ಟಾಚಾರದ ಕುರಿತು ಎಷ್ಟೇ ಬೊಬ್ಬೆ ಹಾಕಿದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಸಂಸ್ಥೆಗಳು ತಮ್ಮ ರಾಜಕೀಯ ನಾಯಕರ ನಿಲುವುಗಳಿಗೆ ತಲೆ ಅಲ್ಲಾಡಿಸುತ್ತಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇ.ಡಿ), ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇತ್ಯಾದಿ ಸಂಸ್ಥೆಗಳು ಅಧಿಕಾರದಲ್ಲಿರುವ ನಾಯಕರ ನಿಲುವುಗಳಿಗೆ ಪೂರಕವಾಗಿದ್ದುಕೊಂಡು, ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ ಮತ್ತು ಸಾರ್ವಜನಿಕರು ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ.

- ಪರ್ವತಮ್ ಮೂರ್ತಿ

Please Publish it & provide Link
Last Updated : Dec 21, 2019, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.