ಅಯೋಧ್ಯೆ(ಉತ್ತರ ಪ್ರದೇಶ): ಹೊಸ ವಿಶ್ವ ದಾಖಲೆ ಸೃಷ್ಟಿಸುವ ಉದ್ದೇಶದಿಂದ ಈ ವರ್ಷ ದೀಪೋತ್ಸವದ ಮುನ್ನಾ ದಿನದಂದು ಅಯೋಧ್ಯೆಯಲ್ಲಿ ಸುಮಾರು ಐದು ಲಕ್ಷದ ಐವತ್ತು ಸಾವಿರ ಮಣ್ಣಿನ ದೀಪಗಳು ಬೆಳಗಲಿವೆ.
ಕೋವಿಡ್ -19 ನಿಯಮಗಳು ಜಾರಿಯಲ್ಲಿರುವುದರಿದ ಈ ವರ್ಷದ ದೀಪೋತ್ಸವ ಆಚರಣೆಯಿಂದ ಸಾರ್ವಜನಿಕರನ್ನು ದೂರವಿರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, ವರ್ಚ್ಯುವಲ್ ಕಾರ್ಯಲಕ್ರಮದ ಮೂಲಕ ಜನರು ಭಾಗವಹಿಸಲು ಅವಕಾಶ ನೀಡಿದೆ.
ಅಧಿಕೃತ ಟೆಂಡರ್ ಬಿಡುಗಡೆಯಾಗಿದ್ದು, ಈ ವರ್ಷ ಅಯೋಧ್ಯೆ ದೀಪೋತ್ಸವ ನವೆಂಬರ್ 11ರಿಂದ ನವೆಂಬರ್ 13ರವರೆಗೆ ನಡೆಯಲಿದೆ. 2017ರಲ್ಲಿ ಈ ದೀಪೋತ್ಸವ ಆರಂಭವಾಗಿತ್ತು. ಸ್ಥಳೀಯ ನಿವಾಸಿಗಳು ಮತ್ತು ಸ್ವಯಂ ಸೇವಕರು, ಭಕ್ತರು ಒಗ್ಗೂಡಿ 1.50 ಲಕ್ಷ ಮಣ್ಣಿನ ದೀಪ ಬೆಳಗಲು ಸಿದ್ಧತೆ ನಡೆಸಿದ್ದಾರೆ.
ಕಳೆದ ವರ್ಷ ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕವ ವಿಶ್ವ ದಾಖಲೆ ಮಾಡಲಾಗಿತ್ತು. ಈ ವರ್ಷ ಕೂಡ ಅಯೋಧ್ಯೆಯಲ್ಲಿ 5.50 ಲಕ್ಷ ದೀಪಗಳನ್ನು ಬೆಳಗಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ, "ನವೆಂಬರ್ 13ರಂದು ರಾಮ್ ಕಥಾ ಪಾರ್ಕ್, ರಾಮ್ ಕಿ ಪೈಡಿ, ನಾಯಘಾಟ್, ಸರಯು ಆರತಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ರಾಮ್‌ಕಥಾ ಪಾರ್ಕ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶ್ರೀ ರಾಮ, ಸೀತಾ ಮಾತೆ, ಲಕ್ಷ್ಮಣರ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಈ ಸಮಯದಲ್ಲ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಸಲಾಗುತ್ತದೆ. ಸರಯೂ ಆರತಿ ನಂತರ ಭಜನಾ ಸಂಧ್ಯಾ ಸ್ಥಳದಲ್ಲಿ ರಾಮ್ ಲೀಲಾ ಆಯೋಜಿಸಲು ನಿರ್ಧರಿಸಲಾಗಿದೆ. ರಾಮ್ ಕಿ ಪೈಡಿಯಲ್ಲಿ ದೀಪದ ಅಲಂಕಾರ ಮಾಡಲಾಗುವುದು" ಎಂದಿದ್ದಾರೆ.
"ನಾವು ಕೋವಿಡ್ ಪ್ರೋಟೋಕಾಲ್ಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಿದ್ದೇವೆ. ಸರಯು ದಡಗಳಲ್ಲದೆ, ದೇವಾಲಯಗಳು ಮತ್ತು ಸ್ಮಾರಕಗಳು ಸಹ ಪ್ರಕಾಶಿಸಲ್ಪಡುತ್ತವೆ. ದೀಪಗಳ ಸಂಖ್ಯೆ 5.50 ಲಕ್ಷಕ್ಕಿಂತ ಹೆಚ್ಚಾಗಬಹುದು. ಈ ವರ್ಷ ದೀಪೋತ್ಸವವು ಅದ್ಭುತವಾಗಿರಲಿದ್ದು, ನಾವು ಹೊಸ ದಾಖಲೆ ಮಾಡುತ್ತೇವೆ "ಎಂದು ಹೇಳಿದ್ದಾರೆ.