ಆಂಧ್ರಪ್ರದೇಶ (ಕರ್ನೂಲ್): ಜಿಲ್ಲೆಯ ಅಲ್ಲಗಡ್ಡ ಪ್ರದೇಶದಲ್ಲಿ 4 ವರ್ಷದ ಬಾಲಕನ ಮೇಲೆ ನಾಯಿಗಳು ಭೀಕರ ದಾಳಿ ನಡೆಸಿದ ಪರಿಣಾಮ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬಾಲಕ ನರಸಿಂಹನನ್ನು ಏಕಕಾಲದಲ್ಲಿ 8 ನಾಯಿಗಳು ಹಲ್ಲೆ ಮಾಡಿವೆ. ಬಾಲಕನಿಗೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಬಾಲಕನ ರಕ್ಷಣೆಗೂ ಯಾರೂ ಬಂದಿಲ್ಲ. ಪರಿಣಾಮ ರಸ್ತೆಗೆ ಎಳೆದೊಯ್ದು ನಾಯಿಗಳು ಬಾಲಕನನ್ನ ಕಚ್ಚಿ ಸಾಯಿಸಿವೆ.
ಇಡೀ ಘಟನೆ ಹತ್ತಿರದ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆಯ ನಂತರವೂ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳದಿರುವುದಕ್ಕೆ ಪ್ರದೇಶದ ಜನರು ಆಕ್ರೋಶಿತರಾಗಿದ್ದಾರೆ.