ಶೋಪಿಯಾನ್: ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾಗಿರುವ ಘಟನೆ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ಸಂಜೆಯಿಂದಲೂ ಗುಂಡಿನ ಚಕಮುಖಿ ನಡೆಯುತ್ತಲೇ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಿನ್ನೆ ಸಂಜೆ ಶೋಪಿಯಾನ್ ಜಿಲ್ಲೆಯ ಆವ್ನೀರ್ ಗ್ರಾಮದಲ್ಲಿ ಕೆಲವು ಉಗ್ರರು ಅಡಗಿರುವ ಶಂಕೆಯಿಂದ ಸೇನಾ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಈಗ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನ ಭಾರತೀಯ ಸೇನೆ ಹೊಡೆದುರುಳಿಸಿದೆ. ಗುಂಡಿಗೆ ಬಲಿಯಾಗಿರುವ ಉಗ್ರರನ್ನು ಸಯರ್ ಅಹಮದ್ ಮತ್ತು ಶಕಿರ್ ಅಹಮದ್ ಎಂದು ಗುರುತಿಸಲಾಗಿದೆ. ಸದ್ಯ ಭಾರತೀಯ ಸೇನೆಯಿಂದ ಕಾರ್ಯಾಚರಣೆ ಮುಂದುವರೆದಿದೆ.