ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಮತ್ತು ಅವರು ಹುತಾತ್ಮರಾಗಿ ಈ ವರ್ಷಕ್ಕೆ 70 ವರ್ಷ ಆಗಲಿವೆ. ಇಂತಹ ಸನ್ನಿವೇಶದಲ್ಲಿ ಅವರು ಸಾವಿನ ಬಗ್ಗೆ ಹೊಂದಿದ್ದ ಅಭಿಪ್ರಾಯಗಳನ್ನು ಚರ್ಚಿಸುವುದು ಸೂಕ್ತವಾಗಿದೆ. ಗಾಂಧೀಜಿಯವರು ಸಾವಿನ ಕುರಿತು ಬರೆದದ್ದಾಗಲಿ ಅಥವಾ ಮಾತನಾಡದ ಬಗ್ಗೆ ಯಾವುದೇ ಆಯಾಮಗಳಿಲ್ಲ. ಆದರೆ, ಮೃತ್ಯುವಿನ ಕುರಿತು ಅವರು ಬಹಳ ಸಹವಿಸ್ತಾರವಾಗಿ ಚರ್ಚಿಸಿದ್ದಾರೆ. ತಮ್ಮ ರಾಜಕೀಯ ಜೀವನದ ಆರಂಭಿಕ ದಿನದಿಂದಲೂ ನಿರ್ಭಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ನಿರ್ಭಯತೆಯೇ ಅವರನ್ನು ಎಲ್ಲ ರೀತಿಯ ಭೀತಿಗಳಿಂದ ಮುಕ್ತಗೊಳಿಸಿತ್ತು. ಸಾವಿನ ಭಯದಿಂದ ಸಹ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಲು ಅದು ಅವರಿಗೆ ನೆರವಾಗಿತ್ತು.
ಸಾವಿಗೆ ಸಂಬಂಧಿಸಿದಂತೆ 'ದಕ್ಷಿಣ ಆಫ್ರಿಕಾದ ಸತ್ಯಾಗ್ರಹ' ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಸರ್ವಶಕ್ತನ ಮೇಲೆ ಅಚಲವಾದ ನಂಬಿಕೆ ಹೊಂದಿರಬೇಕು. ಜನನ ಮತ್ತು ಮರಣದ ನಡುವಿನ ಅಂತರ- ಸಂಬಂಧವನ್ನು ವಿವರಿಸುತ್ತಾ... ಸಾವನ್ನು ಎದುರಿಸುವಾಗ 'ಜೀವನದಿಂದ ಬೇರ್ಪಟ್ಟ ನಂತರ ಒಬ್ಬ ಸ್ನೇಹಿತನನ್ನು ನೋಡುತ್ತಿದ್ದಾನೆ' ಎಂಬ ಸಂತೋಷವಿರಬೇಕು ಎಂದಿದ್ದರು.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಸಾವು 'ದೀರ್ಘಕಾಲ ಬೇರ್ಪಟ್ಟ ಸ್ನೇಹಿತ'ನೆಂದು ಒಪ್ಪಿಕೊಂಡಿದ್ದರು ಎಂಬುದು ಇದರಿಂದ ಸಾಬೀತಾಗುತ್ತದೆ. 1926ರ ಡಿಸೆಂಬರ್ 30ರಂದು ಯಂಗ್ ಇಂಡಿಯಾದಲ್ಲಿ 'ಸಾವು ಕೇವಲ ಸ್ನೇಹಿತನಲ್ಲ, ಪ್ರೀತಿಯ ಒಡನಾಡಿ' ಎಂದು ಬರೆದಿದ್ದಾರೆ. ಆದರಿಂದ ಅವರಿಗೆ ಸಾವು ಭಯಾನಕ ಘಟನೆಯಾಗಿರಲಿಲ್ಲ. 'ಯಾವುದೇ ಸಮಯದಲ್ಲಿ ಬಂದೆರಗುವ ಸಾವು ಒಂದು ಅದೃಷ್ಟ' ಎಂದೇ ಹೇಳುತ್ತಿದ್ದರು. ಆದರೆ, ಈ ಅದೃಷ್ಟವು ತನ್ನ ಸತ್ಯದ ಗುರಿಯನ್ನು ಸಾಧಿಸಲು ಸಾಯುವ ಯೋಧನಿಗೆ ಎರಡು ಪಟ್ಟು ಹೆಚ್ಚಿನದು. ಇಲ್ಲಿ ಸತ್ಯದ ಮಾನ್ಯತೆ ನಿರ್ಭಯತೆಯೊಂದಿಗೆ ಬೇರೆತುಕೊಳ್ಳುತ್ತದೆ. ಇವುಗಳನ್ನು ಯಾವುದೇ ರೀತಿಯಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ ಆಗಿತ್ತು. ಗಾಂಧೀಜಿಯವರು ತಮ್ಮ ಸತ್ಯತೆಯನ್ನು ಉಳಿಸಿಕೊಳ್ಳುಲು ತಮ್ಮ ಪ್ರಾಣವನ್ನಾರೂ ತ್ಯಾಗಮಾಡಲು ಸಿದ್ಧರಾಗಿದ್ದರು.
ಗಾಂಧೀಜಿಯವರ ಕಾರ್ಯತಂತ್ರದ ಬಗ್ಗೆ ಅವರ ನಿಕಟವರ್ತಿಯಾಗಿದ್ದ ಆಚಾರ್ಯ ಜೆ. ಬಿ. ಕೃಪಲಾನಿ ಅವರು, 'ಹುತಾತ್ಮರಾಗುವ ಅವಕಾಶಗಳು ವಿರಳವಾಗಿದೆಯೆಂದು ಗಾಂಧೀಜಿಗೆ ತಿಳಿದಾಗಲೆಲ್ಲಾ ಅವರು ಹೊಸ- ಹೊಸ ಮಾರ್ಗಗಳನ್ನು ಅನ್ವೇಷಿಸುವಲ್ಲಿ ನಿರತರಾಗಿರುತ್ತಿದ್ದರು' ಎಂದು ಬರೆಯುತ್ತಾರೆ. 1948ರ ಜನವರಿ 30ಕ್ಕೂ ಮೊದಲು ಅವರನ್ನು ಹತ್ಯೆ ಮಾಡಲು ಹಲವು ಪ್ರಯತ್ನಗಳು ನಡೆದಿದ್ದವು. ದಕ್ಷಿಣ ಆಫ್ರಿಕಾದಲ್ಲಿ ಸಹ ಅವರನ್ನು ಹತ್ಯೆಗೈಯ್ಯುವ ಪ್ರಯತ್ನಗಳು ನಡೆದಿದ್ದು, ಅವರನ್ನು ಬ್ರಿಟಿಷ್ ಸ್ನೇಹಿತರು ರಕ್ಷಿಸಿದರು. ಭಾರತದಲ್ಲಿ 1934ರ ನಂತರ ಅವರ ಜೀವ ಅಪಾಯಕ್ಕೆ ಸಿಲುಕಿತ್ತು. ಅವರ ಹತ್ಯೆಯಾಗುವ ಸ್ವಲ್ಪ ಸಮಯಕ್ಕೂ ಮೊದಲೇ ಭಾರತಕ್ಕೆ ಮಾತ್ರವಲ್ಲದೇ ಅವರ ಜೀವನಕ್ಕೂ ಇದು ಅಗತ್ಯವಾಗಿದೆ ಎಂಬ ನಿಲುವನ್ನು ತಳೆದಿದ್ದರು.
1944ರ ಬಳಿಕ ಹಲವು ಜೀವ ಬೆದರಿಕೆಗಳನ್ನು ಎದುರಿಸಿದ್ದರೂ ಯಾವುದೇ ರೀತಿಯ ವೈಯಕ್ತಿಕ ಭದ್ರತೆಯ ಬಗ್ಗೆ ಚಿಂತಿಸಲಿಲ್ಲ. ಗಾಂಧೀಜಿಯವರು ಬಹಳ ಹಿಂದೆಯೇ ಸಾವಿನ ಭಯದಿಂದ ಹೊರಬಂದಿದ್ದರು. ಈ ನಿರ್ಭಯತೆಯ ಧೈರ್ಯ, ಜನಪ್ರಿಯವಲ್ಲದ ಸಮಸ್ಯೆಗಳೊಂದಿಗೆ ಅವರನ್ನು ವಿಲೀನಗೊಳಿಸಿತ್ತು. ಮತ್ತು ಅದರೊಂದಿಗೆಯೇ ಸಾಗಿದರು. ಅದು ಹರಿಜನ ಯಾತ್ರೆಯೇ ಆಗಿರಲಿ ಅಥವಾ 1946ರ ನಂತರದ ಕೋಮುವಾದ ವಿರುದ್ಧದ ಹೋರಾಟವೇ ಆಗಿರಲಿ ಗಾಂಧೀಜಿಯವರು ಏಕಾಂಗಿಯಾಗಿ ಹೆಜ್ಜೆಹಾಕಲು ಒಂದು ಕ್ಷಣವೂ ಹಿಂಜರಿಯಲಿಲ್ಲ. ಹಿಂದೂಗಳ ಹತ್ಯೆ ತಡೆಯಲು ಪಶ್ಚಿಮ ಬಂಗಾಳದ ನೌಕಾಲಿ ಗ್ರಾಮಕ್ಕೆ ಸಣ್ಣ ಗುಂಪಿನೊಂದಿಗೆ ತೆರಳಿದ ಗಾಂಧೀಜಿ, ಅಲ್ಲಿ ಹೆಚ್ಚು ಜನಪ್ರಿಯ ನಾಯಕರಾಗಿರಲಿಲ್ಲ. ಇದರ ಹೊರತಾಗಿಯೂ ಜನರ ಮೇಲೆ ಅವನ ನೈತಿಕ ಪ್ರಭಾವವು ಬೀರಿ ಅವರ ಮಾತನ್ನು ಅಲ್ಲಿ ನೆರಿದಿದ್ದವರು ನಿರಾಕರಿಸಲಿಲ್ಲ. ನಿರ್ಭಯತೆಯೇ ಗಾಂಧೀಜಿಯನ್ನು ಮಹಾತ್ಮರನ್ನಾಗಿ ಮಾಡಿತು. ಜೀವನ ಮತ್ತು ಮರಣ ಶಾಶ್ವತವಾದ ಸತ್ಯವೆಂದು ಒಪ್ಪಿಕೊಂಡು ಎಲ್ಲ ರೀತಿಯ ಭಯಗಳಿಂದ ಮುಕ್ತರಾಗಿದ್ದರು.
- ಸೌರಭ್ ಬಾಜ್ಪೈ (ದೆಹಲಿ ವಿಶ್ವವಿದ್ಯಾನಿಲಯದ ಸಹಾಯಕ ಉಪನ್ಯಾಸಕರು)