ETV Bharat / bharat

101ವರ್ಷ ವಯಸ್ಸಿನ ವೃದ್ಧೆ ಎದುರು ಸೋತ ಕೊರೊನಾ: ಅಜ್ಜಿಯ ಆತ್ಮವಿಶ್ವಾಸ ಕೊಂಡಾಡಿದ ವೈದ್ಯರು

author img

By

Published : Sep 3, 2020, 5:59 PM IST

ಪಶ್ಚಿಮ ಬಂಗಾಳದ ಅಲಿಪುರ್ದಾರ್ ಮೂಲದ 101ರ ಹರೆಯದ ವೃದ್ಧೆ ಕೊರೊನಾ ಹೋರಾಟದಲ್ಲಿ ಗೆದ್ದು ಬಂದಿದ್ದಾರೆ.

101-year-old woman of Alipurduar wins COVID Battle
ಕೋವಿಡ್​ ಗೆದ್ದ 101ರ ವೃದ್ಧೆ

ಅಲಿಪುರ್ದಾರ್(ಪಶ್ಚಿಮ ಬಂಗಾಳ): ಕೆಲವರು ಕೋವಿಡ್​ ಬಂದಿತೆಂದು, ಇನ್ನೂ ಕೆಲವರು ಸೋಂಕು ತಗಲುವ ಭೀತಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವೃದ್ಧೆ ಮಹಾಮಾರಿಯನ್ನು ಗೆದ್ದು ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಕೋವಿಡ್​ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವ ಪಶ್ಚಿಮ ಬಂಗಾಳದ ಅಲಿಪುರ್ದಾರ್ ಮೂಲದ 101ರ ಹರೆಯದ ವೃದ್ಧೆಗೆ ವೈದ್ಯರು ಹೃದಯಪೂರ್ವಕ ಬೀಳ್ಕೊಡುಗೆ ನೀಡಿದ್ದಾರೆ. ಇವರ ಆತ್ಮವಿಶ್ವಾಸವೇ ಆರೋಗ್ಯದ ಅಗ್ನಿ ಪರೀಕ್ಷೆಯಲ್ಲಿ ಜಯ ಗಳಿಸಲು ಸಾಧ್ಯವಾಗಿಸಿತು ಎಂದು ಹಾಡಿ ಹೊಗಳಿದ್ದಾರೆ.

ಆಗಸ್ಟ್ 17 ರಂದು ಉಸಿರಾಟದ ಸಮಸ್ಯೆಯೆಂದು ಅಲಿಪುರ್ದಾರ್ ಜಿಲ್ಲಾಸ್ಪತ್ರೆಗೆ ದಾಖಲಾದ ಅಜ್ಜಿಗೆ ವೈರಸ್​ ಅಂಟಿರುವುದು ದೃಢವಾಗಿತ್ತು. ಬಳಿಕ ಅವರನ್ನು ಕೋವಿಡ್​ ಆಸ್ಪತ್ರೆಗೆ ದಾಖಲಿಸಿ ಸಿಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲೆರಡು ದಿನ ಇವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. 3ನೇ ದಿನದ ಬಳಿಕ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದರು. ಇದೀಗ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.