ETV Bharat / bharat

ಬ್ರೆಜಿಲ್​ಗೆ ರವಾನೆಯಾಗಲಿದೆ ಭಾರತ್​ ಬಯೋಟೆಕ್​ನ ಕೋವ್ಯಾಕ್ಸಿನ್​ ಲಸಿಕೆ! - ಬ್ರೆಜಿಲ್​ಗೆ ಭಾರತ್​ ಬಯೋಟೆಕ್ ಲಸಿಕೆ

ಭಾರತ್​ ಬಯೋಟೆಕ್​ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್​ ಇದೀಗ ಬ್ರೆಜಿಲ್​ಗೆ ರವಾನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆದಿದೆ.

Bharat Biotech
Bharat Biotech
author img

By

Published : Jan 12, 2021, 9:45 PM IST

ಹೈದರಾಬಾದ್​: ಭಾರತ್​ ಬಯೋಟೆಕ್​ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್​ ಇದೀಗ ಬ್ರೆಜಿಲ್​ಗೆ ರವಾನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಕಂಪನಿ ಮಾಹಿತಿ ನೀಡಿದೆ.

ಭಾರತೀಯ ಔಷಧ ಸಂಸ್ಥೆ ಭಾರತ್​ ಬಯೋಟೆಕ್​ ಬ್ರೆಜಿಲ್​ಗೆ ಕೋವ್ಯಾಕ್ಸಿನ್​ ಪೂರೈಕೆ ಮಾಡಲು ಪ್ರೆಸಿಸಾ ಮೆಡಿಕಮೆಂಟೋಸ್​ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಲಸಿಕೆ ರಫ್ತು ಸಾಧ್ಯತೆಗಳ ಕುರಿತು ಚರ್ಚಿಸಲು ಪ್ರೆಸಿಸಾ ತಂಡ ಹೈದರಾಬಾದ್​ಗೆ ಭೇಟಿ ನೀಡಿದೆ ಎಂದು ತಿಳಿದು ಬಂದಿದೆ.

ಓದಿ: ಕೋವಿಶೀಲ್ಡ್​ ಬೆನ್ನಲ್ಲೇ ಭಾರತ್​ ಬಯೋಟೆಕ್​​ನ 'ಕೋವ್ಯಾಕ್ಸಿನ್'​ ಸಾಗಾಣೆಗೆ ಸಿದ್ಧ!

ಜನವರಿ 7, 8ರಂದು ತಂಡ ಭಾರತ್​ ಬಯೋಟೆಕ್​ ಮುಖ್ಯಸ್ಥ ಡಾ. ಕೃಷ್ಣ ಎಲ್ಲ ಅವರನ್ನ ಭೇಟಿ ಮಾಡಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಭಾರತದ ಬ್ರೆಜಿಲ್​ ರಾಯಭಾರಿ ಆಂಡ್ರೆ ಅರಾನ್ಹಾ ಕೂಡ ಭಾಗಿಯಾಗಿದ್ದರು. ಭೇಟಿ ನಂತರ ಮಾತನಾಡಿರುವ ಪ್ರೆಸಿಸಾ ಮೆಡಿಕಮೆಂಟೋಸ್​ನ ಡೈರೆಕ್ಟರ್​ ಇಮ್ಯಾನುಯೆಲಾ, ನಾವು ಹೆಚ್ಚು ತಾಂತ್ರಿಕ, ವೈಜ್ಞಾನಿಕ ಮತ್ತು ನೈರ್ಮಲ್ಯ ನಿಯಂತ್ರಣ ಮಟ್ಟ ಗುರುತಿಸಿದ್ದೇವೆ. ಕ್ಲಿನಿಕಲ್​ ಪ್ರಯೋಗಗಳಲ್ಲಿ ಅತ್ಯುತ್ತಮ ಫಲಿತಾಂಶ ಇದೆ. ಭಾರತ್ ಬಯೋಟೆಕ್​ ನಮ್ಮ ನಿರೀಕ್ಷೆಗಳನ್ನು ಮೀರಿದೆ ಎಂದು ತಿಳಿಸಿದ್ದಾರೆ.

ಕೊವ್ಯಾಕ್ಸಿನ್​ ಮೂರನೇ ಹಂತದ ಮಾನವ ಕ್ಲಿನಿಕಲ್​ ಪ್ರಯೋಗ ನವೆಂಬರ್​ ಮಧ್ಯಭಾಗದಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಭಾರತದಾದ್ಯಂತ ಸುಮಾರು 26 ಸಾವಿರ ಸ್ವಯಂ ಸೇವಕರ ಮೇಲೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.