ETV Bharat / bharat

ಸಿಜೆಐ ವಿರುದ್ಧದ ಟೀಕೆ ವಿಚಾರ: ಪ್ರಕಾಶಕ ಬದ್ರಿ ಶೇಷಾದ್ರಿಗೆ ಜಾಮೀನು - ಬದ್ರಿ ಶೇಷಾದ್ರಿ

Badri Seshadri granted bail: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ನಿಂದಿಸಿದ ಆರೋಪದಡಿ ಬಂಧಿತರಾಗಿದ್ದ ಪ್ರಕಾಶಕ ಬದ್ರಿ ಶೇಷಾದ್ರಿ ಅವರಿಗೆ ಪೆರಂಬಲೂರು ಜಿಲ್ಲಾ ಕೆಳ ನ್ಯಾಯಾಲಯ ಜಾಮೀನು ನೀಡಿದೆ.

Badri Seshadri granted bail
ಪ್ರಕಾಶಕ ಬದ್ರಿ ಶೇಷಾದ್ರಿಗೆ ಜಾಮೀನು
author img

By

Published : Aug 2, 2023, 8:55 AM IST

ಚೆನ್ನೈ(ತಮಿಳುನಾಡು): ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಬಂಧಿತರಾಗಿದ್ದ ಪ್ರಕಾಶಕ ಮತ್ತು ಬಲಪಂಥೀಯ ವ್ಯಾಖ್ಯಾನಕಾರ ಬದ್ರಿ ಶೇಷಾದ್ರಿ ಅವರಿಗೆ ಪೆರಂಬಲೂರು ಜಿಲ್ಲೆಯ ಕುನ್ನಂನಲ್ಲಿರುವ ಜಿಲ್ಲಾ ಮುನ್ಸಿಫ್ ಕಮ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಶೇಷಾದ್ರಿ ಅವರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೋರಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ವಜಾಗೊಳಿಸಿದ ಜಿಲ್ಲಾ ಮುನ್ಸಿಫ್ ಕಮ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್. ಕವಿತಾ ಅವರು ಪ್ರಕಾಶಕರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ವಕೀಲ ಕವಿಯರಸು ನೀಡಿದ ದೂರಿನ ಮೇರೆಗೆ ಕಾ ಬದ್ರಿ ಶೇಷಾದ್ರಿ ಅವರನ್ನು ಕುನ್ನಂ ಪೊಲೀಸರು ಜು.29 ರಂದು ಚೆನ್ನೈನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದರು.

ಕುನ್ನಂ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ (ಸೆಕ್ಷನ್ 153 ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು, 153-ಎ-ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು 505-ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾದ ಹೇಳಿಕೆಗಳು) ಬಂಧಿಸಿತ್ತು. ಬಂಧನದ ನಂತರ ಅವರನ್ನು ತಿರುಚ್ಚಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಸದ್ಯ ಜಾಮೀನು ಮಂಜೂರು ಮಾಡಿದ ನ್ಯಾಯಾಲಯವು 15 ದಿನಗಳ ಕಾಲ ತಿರುಚ್ಚಿಯಲ್ಲೇ ಇರಲು ಮತ್ತು ಶ್ರೀರಂಗಂ ಪೊಲೀಸ್ ಠಾಣೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಸಹಿ ಮಾಡುವಂತೆ ಸೂಚಿಸಿದೆ.

ಶೇಷಾದ್ರಿ ಅವರನ್ನು ಬೆಂಬಲಿಸಲು ಬಿಜೆಪಿ ಕಾರ್ಯಕರ್ತರು ಚೆನ್ನೈನಿಂದ ಸುಮಾರು 285 ಕಿ.ಮೀ ದೂರದಲ್ಲಿರುವ ಕುನ್ನಂನಲ್ಲಿರುವ ನ್ಯಾಯಾಲಯದಲ್ಲಿ ಜಮಾಯಿಸಿದ್ದರು. ಇದಕ್ಕೂ ಮೊದಲು ಬದ್ರಿ ಶೇಷಾದ್ರಿ ಅವರ ಬಂಧನವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ನಿರೀಕ್ಷೆಯಂತೆ ಬಿಜೆಪಿ ಡಿಎಂಕೆ ಸರ್ಕಾರವನ್ನು ಟೀಕಿಸಿತ್ತು.

ಪ್ರಚೋದನಾಕಾರಿ ಟೀಕೆ: ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಮಣಿಪುರದ ಪರಿಸ್ಥಿತಿಯ ಕುರಿತು ಮಾತನಾಡಿದ್ದರು.’’ಸಿಜೆಐ ವಿರುದ್ಧ ಪ್ರಚೋದನಾಕಾರಿ ಟೀಕೆ ಮಾಡಿದ್ದರು. ಚಂದ್ರಚೂಡ್ ಅವರಿಗೆ ಬಂದೂಕನ್ನು ನೀಡಬೇಕು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಅಲ್ಲಿಗೆ ಹೋಗುವಂತೆ ಕೇಳಬೇಕು. ನ್ಯಾಯಾಂಗವು ಆಡಳಿತದ ಕ್ಷೇತ್ರಕ್ಕೆ ಕಾಲಿಡಬಹುದೇ?. ಸಹಜ ಸ್ಥಿತಿಗೆ ಮರಳಲು ಸರ್ಕಾರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿತು ಎಂಬುದರಲ್ಲಿ ಏನಾದರೂ ತಪ್ಪಾಗಿದೆಯೇ?. ಇದು ಗುಡ್ಡಗಾಡು ಪ್ರದೇಶ ಮತ್ತು ಸಂಕೀರ್ಣ ಪರಿಸ್ಥಿತಿ ಹೊಂದಿರುವ ರಾಜ್ಯ. ಅವರು ಜಗಳವಾಡುತ್ತಾರೆ‘‘. ಎಂದು ಮಣಿಪುರ ಹಿಂಸಾಚಾರಕ್ಕೆ ಕೇಂದ್ರ ಮತ್ತು ರಾಜ್ಯವನ್ನು ಹೊಣೆಗಾರರನ್ನಾಗಿ ಮಾಡುವುದರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೇಂದ್ರ ಕಾರಾಗೃಹಕ್ಕೆ ಖ್ಯಾತ ಸಾಹಿತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.