ETV Bharat / bharat

Crime: ತಮ್ಮ ಮಾಡಿದ ತಪ್ಪಿಗೆ ಅಕ್ಕನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ.. ಇಬ್ಬರು ಆರೋಪಿಗಳು ಅರೆಸ್ಟ್​ - ಬೆತ್ತಲುಗೊಳಿಸಿ ಪೆಟ್ರೋಲ್​ ಸುರಿದರು

ಮಗಳನ್ನು ಯುವಕನೊಬ್ಬ ಪಟಾಯಿಸಿದ ಎಂಬ ಕಾರಣಕ್ಕಾಗಿ ಆತನ ಅಕ್ಕನನ್ನು ಬೀದಿಯಲ್ಲಿ ಬೆತ್ತಲುಗೊಳಿಸಿ, ದಾರುಣವಾಗಿ ಹಲ್ಲೆ ಮಾಡಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಪೈಶಾಚಿಕ ಕೃತ್ಯ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ತಮ್ಮನಿಗಾಗಿ ಅಕ್ಕನ ಮೇಲೆ ಹಲ್ಲೆ
ತಮ್ಮನಿಗಾಗಿ ಅಕ್ಕನ ಮೇಲೆ ಹಲ್ಲೆ
author img

By

Published : Aug 16, 2023, 12:33 PM IST

ಪ್ರಕಾಶಂ (ಆಂಧ್ರಪ್ರದೇಶ) : ಪ್ರೀತಿಯ ಹೆಸರಿನಲ್ಲಿ ತನ್ನ ಮಗಳನ್ನು ಯುವಕನೊಬ್ಬ ಕರೆದೊಯ್ದ ಎಂಬ ಕೋಪದಲ್ಲಿ ಕುಟುಂಬವೊಂದು ಆ ಯುವಕನ ಸಹೋದರಿಯನ್ನು ಹಗ್ಗದಿಂದ ಕಟ್ಟಿಹಾಕಿ ಮನಬಂದಂತೆ ಥಳಿಸಿ, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಭೀಕರ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಯ ವಿವರ: ವಿಧವೆಯಾಗಿದ್ದ ಮಗಳನ್ನು ಗ್ರಾಮದ ಯುವಕ ಪ್ರೀತಿಸುತ್ತಿದ್ದ. ಕೆಲ ದಿನಗಳ ಬಳಿಕ ಇಬ್ಬರೂ ಗೌಪ್ಯವಾಗಿ ವಿವಾಹವಾಗಿದ್ದರು. ಇದರಿಂದ ಯುವತಿಯ ಕುಟುಂಬಸ್ಥರು ಅವಮಾನಕ್ಕೀಡಾಗಿದ್ದರು. ಇದರಿಂದ ಕೋಪಗೊಂಡಿದ್ದ ಅವರು ಭಾನುವಾರ ರಾತ್ರಿ ಆ ಯುವಕನ ಅಕ್ಕನ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾರೆ. ರಾತ್ರಿ ವೇಳೆ ಹೊರಬಂದಿದ್ದಾಗ ಮಹಿಳೆಯನ್ನು ಬೀದಿಯಲ್ಲಿ ಎಳೆದಾಡಿ ಹಗ್ಗದಿಂದ ಕಟ್ಟಿ ಹಾಕಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.

ಬೆತ್ತಲುಗೊಳಿಸಿ ಪೆಟ್ರೋಲ್​ ಸುರಿದರು: ಕಣ್ಣಿಗೆ ಮೆಣಸಿನಕಾಯಿ ಪುಡಿ ಎಸೆದು, ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಆಕೆಯನ್ನು ಬೀದಿಯಲ್ಲಿ ದರದರನೇ ಎಳೆದೊಯ್ಯಲಾಗಿದೆ. ಬಳಿಕ ಮನೆಯೊಂದರಲ್ಲಿ ಬೆತ್ತಲುಗೊಳಿಸಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಬಂದ ಆರಕ್ಷಕರು ಮನೆಯಲ್ಲಿ ಕೂಡಿಹಾಕಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ವಿವಸ್ತ್ರಗೊಳಿಸಿ ಹಗ್ಗದಿಂದ ಕಟ್ಟಿಹಾಕಿದ್ದ ಮನೆಯನ್ನು ಭೇದಿಸಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆರೋಪಿಗಳಾದ ಬ್ರಹ್ಮಾರೆಡ್ಡಿ ಮತ್ತು ಆತನ ಪತ್ನಿ ಪುಲ್ಲಮ್ಮ ಎಂಬುವರನ್ನು ಬಂಧಿಸಿದ್ದಾರೆ. ಜಿಲ್ಲಾ ಎಸ್​ಪಿ ಆದೇಶದಂತೆ ಹಲ್ಲೆ ಮಾಡಿದವರ ವಿರುದ್ಧ ಎಸ್​ಸಿ ಮತ್ತು ಎಸ್​​ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಮೊದಲೂ ಹಲ್ಲೆ ಮಾಡಿದ್ದರು: ಯುವಕ ಮಾಡಿದ ತಪ್ಪಿಗಾಗಿ ಆತನ ಅಕ್ಕನ ಮೇಲಕೆ ಯುವತಿಯ ಕುಟುಂಬ ಇದಕ್ಕೂ ಮೊದಲು ಒಂದು ಬಾರಿ ಹಲ್ಲೆ ಮಾಡಿತ್ತು. ಆಗ ನೀಡಿದ ದೂರಿನ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಲಾಗಿತ್ತು. ಇದಾದ ಬಳಿಕವೂ ದ್ವೇಷ ಮುಂದುವರಿಸಿದ್ದ ಹಲ್ಲೆಕೋರ ದಂಪತಿ ಇದೀಗ ಹತ್ಯೆಗೆ ಯತ್ನಿಸಿ ಜೈಲು ಕಂಬಿ ಎಣಿಸುವಂತಾಗಿದೆ.

ಗುಂಡೇಟಿಗೆ ಬಾಲಕಿ ಸಾವು: ಇತ್ತ ಕಾಕಿನಾಡ ಜಿಲ್ಲೆಯ ಗ್ರಾಮವೊಂದರಲ್ಲಿ ಆಕಸ್ಮಿಕವಾಗಿ ಹಾರಿ ಬಂದ ಗುಂಡೊಂದು ತಾಕಿ ಆಟವಾಡುತ್ತಿದ್ದ ಬಾಲಕಿ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ನಡೆದಿದೆ. ನೆರೆ ಮನೆಯ ವ್ಯಕ್ತಿಯೊಬ್ಬ ಹಂದಿಗಳ ಬೇಟೆಯಾಡಲು ನಾಡಬಂದೂಕಿಗೆ ಗುಂಡುಗಳನ್ನು ತುಂಬುತ್ತಿದ್ದಾಗ ಆಕಸ್ಮಾತ್ತಾಗಿ ಗುಂಡು ಹಾರಿದೆ. ಅದು ಅಂಗಳದಲ್ಲಿ ಆಡುತ್ತಿದ್ದ ಬಾಲಕಿಯ ಬೆನ್ನು ಸೀಳಿ ಎದೆಗೆ ನಾಟಿದೆ. ಇದರಿಂದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಇದನ್ನೂ ಓದಿ: Gun exploded: ಬಂದೂಕಿಗೆ ತುಂಬುವಾಗ ಸಿಡಿದು ಎದೆ ಸೀಳಿದ ಗುಂಡು.. ಆಟವಾಡುತ್ತಿದ್ದಾಗ 4ರ ಬಾಲೆ ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.