ETV Bharat / bharat

ಸ್ನೇಹಿತನನ್ನು ನಂಬಿ ಹೋದ ಅಸ್ಸೋಂ ಮಹಿಳಾ ಬಾಕ್ಸರ್​ ವಿದೇಶದಲ್ಲಿ ಒತ್ತೆಯಾಳು: ಬಿಡಿಸಿಕೊಡಲು ಕುಟುಂಬದ ಮನವಿ

ಸ್ನೇಹಿತ ಎಂದು ನಂಬಿದ್ದ ವ್ಯಕ್ತಿಯೇ ಮೋಸ ಮಾಡಿದ ಘಟನೆಯಿದು. ವಿದೇಶ ಪ್ರವಾಸಕ್ಕೆ ತೆರಳಿದ ಮಹಿಳಾ ಬಾಕ್ಸರ್​ ಈಗ ಅಲ್ಲೇ ಸಿಕ್ಕಿಬಿದ್ದಿದ್ದಾಳೆ.

ಅಸ್ಸೋಂ ಮಹಿಳಾ ಬಾಕ್ಸರ್​ ವಿದೇಶದಲ್ಲಿ ಒತ್ತೆಯಾಳು

author img

By ETV Bharat Karnataka Team

Published : Nov 15, 2023, 7:38 PM IST

ಗುವಾಹಟಿ (ಅಸ್ಸೋಂ): ಕೆಲವೊಮ್ಮೆ ನಮ್ಮ ಆತ್ಮೀಯರೇ ನಮಗೆ ಮುಳ್ಳಾಗುತ್ತಾರೆ ಎಂಬುದಕ್ಕೆ ಈ ಘಟನೆ ನಿದರ್ಶನ. ವೃತ್ತಿಯಲ್ಲಿ ಬಾಕ್ಸರ್​ ಆಗಿರುವ ಅಸ್ಸೋಂ ಮಹಿಳೆಯನ್ನು ನೈಜೀರಿಯಾದಲ್ಲಿ ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ. ಗೆಳೆಯನನ್ನು ನಂಬಿ ಹೋದ ಆಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆಕೆಯನ್ನು ಬಿಡಿಸಿಕೊಂಡು ಬರಲು ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

ಅಸ್ಸೋಂನ ಪ್ರತಿಭಾವಂತ ಬಾಕ್ಸರ್​ ಆಗಿರುವ ಬೊರ್ನಾಲಿ ಬರುವಾ ಸೈಕಿಯಾ ನೈಜೀರಿಯಾದಲ್ಲಿ ಗೆಳೆಯನ ಕುತಂತ್ರಕ್ಕೆ ಸಿಲುಕಿದವರು. ಅಕ್ಟೋಬರ್​ 28 ರಂದು ಗೆಳೆಯನ ನಂಬಿ ನೈಜೀರಿಯಾಕ್ಕೆ ಪ್ರವಾಸ ಹೋದಾಗ ಅಲ್ಲೇ, ಒತ್ತೆಯಾಳಾಗಿದ್ದಾರೆ. ಪಾಸ್​ಪೋರ್ಟ್​, ವೀಸಾ ಇಲ್ಲದೇ ಅವರು ವಾಪಸ್​ ಬರಲು ಕಷ್ಟವಾಗಿದೆ.

ಪ್ರಕರಣದ ಹಿನ್ನೆಲೆ: ಬಾಕ್ಸರ್​ ಬೊರ್ನಾಲಿ ಬರುವಾ ಸೈಕಿಯಾ ಅವರಿಗೆ 6 ತಿಂಗಳ ಹಿಂದೆ ನೈಜೀರಿಯಾದ ಕಿಂಗ್​ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆದರೆ, ಬೊರ್ನಾಲಿ ಕುಟುಂಬದ ಜೊತೆಗೆ ಉತ್ತಮವಾಗಿ ನಡೆದುಕೊಂಡಿದ್ದ. ಈತನನ್ನು ಬಾಕ್ಸರ್​ ಮತ್ತು ಆಕೆಯ ಪತಿ ಒಳ್ಳೆಯ ಸ್ನೇಹಿತ ಎಂದೇ ಭಾವಿಸಿದ್ದರು. ಬಳಿಕ ಕಿಂಗ್​ ಪರಿಚಯದ ಆಧಾರದ ಮೇಲೆ ಬೊರ್ನಾಲಿ ಅವರು ನೈಜೀರಿಯಾಕ್ಕೆ ಪ್ರವಾಸ ತೆರಳಲು ನಿರ್ಧರಿಸಿದರು.

ಅದರಂತೆ ಅಕ್ಟೋಬರ್​ 28 ರಂದು ಪ್ರವಾಸಿ ವೀಸಾದ ಮೇಲೆ ತೆರಳಿದ್ದರು. ಬೊರ್ನಾಲಿ ಅವರು ನೈಜೀರಿಯಾದ ಲಾಗೋಸ್‌ಗೆ ಬಂದಿಳಿದಾಗ ಇಡೀ ಕತೆಯೇ ಬದಲಾಗಿದೆ. ಆಕೆ ಕಿಂಗ್​ ಬಳಿ ಹೋದಾಗ ಆತನ ಮೋಸದಾಟಕ್ಕೆ ಸಿಲುಕಿದ್ದಾಳೆ. ನಂಬಿಕಸ್ಥ ಗೆಳೆಯ ಎಂದುಕೊಂಡಿದ್ದ ಕಿಂಗ್​ ತನ್ನ ನಿಜಬಣ್ಣವನ್ನು ಪ್ರದರ್ಶಿಸಿದ್ದಾನೆ. ಆಕೆಯ ಪಾಸ್‌ಪೋರ್ಟ್, ವೀಸಾ, ಜೊತೆಗಿದ್ದ ಒಂದಷ್ಟು ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದಾನೆ. ಬಳಿಕ ಆಕೆಯನ್ನು ಒಂದೆಡೆ ಕೂಡಿ ಹಾಕಿದ್ದಾನೆ.

ವಾಟ್ಸ್​​ಆ್ಯಪ್​ ಮೂಲಕ ಮಾಹಿತಿ: ಬೋರ್ನಾಲಿ ನೈಜೀರಿಯಾಕ್ಕೆ ತೆರಳಿದ ತಕ್ಷಣವೇ ಕುಟುಂಬದಿಂದ ಸಂಪರ್ಕ ಕಳೆದುಕೊಂಡಿದ್ದಾಳೆ. ಮೂರು ದಿನಗಳಾದರೂ ಯಾವುದೇ ಕರೆ ಬಾರದ ಕಾರಣ ಅನುಮಾನ ಬಂದಿದೆ. ಇತ್ತ ಪರಿಚಿತ ಕಿಂಗ್​ಗೂ ಕರೆ ಮಾಡಲಾಗಿದೆ. ಆತನ ಸಂಪರ್ಕವೂ ಸಾಧ್ಯವಾಗಿಲ್ಲ. ಈಚೆಗೆ ಬೊರ್ನಾಲಿ ಅವರು, ಹೇಗೋ ಮಾಡಿ ಕುಟುಂಬದವರಿಗೆ ವಾಟ್ಸ್‌ಆ್ಯಪ್ ಮೂಲಕ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ.

14 ದಿನಗಳವರೆಗೆ ನೈಜೀರಿಯಾಕ್ಕೆ ತೆರಳಿದ್ದ ಬೊರ್ನಾಲಿಯ ಕಡೆಗೂ ಕುಟುಂಬದ ಸಂಪರ್ಕಕ್ಕೆ ಬಂದಿದ್ದಾಳೆ. ಆಕೆಯ ಪತಿ ನಯನ್ ಸೈಕಿಯಾ ಅವರು ತಕ್ಷಣವೇ ಪೊಲೀಸರ ನೆರವು ಕೋರಿದೆ. ಆಕೆಯ ಪುತ್ರ ಮತ್ತು ಪುತ್ರಿ ನವೆಂಬರ್ 13 ರಂದು ದಿಸ್​ಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮತ್ತೊಂದೆಡೆ, ಪತಿ ನಯನ್ ದೆಹಲಿ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ನವೆಂಬರ್ 13 ರಂದು ನೈಜೀರಿಯಾದಿಂದ ಹಿಂತಿರುಗಲು ಬೋರ್ನಾಲಿ ಅವರಿಗೆ ವಿಮಾನ ಟಿಕೆಟ್ ಕಾಯ್ದಿರಿಸಲಾಗಿತ್ತು. ಆದರೆ, ಕಿಂಗ್ ಮತ್ತು ಡೇನಿಯಲ್ ಎಂಬ ಇಬ್ಬರು ನೈಜೀರಿಯಾದ 'ಕಿರಾತಕ ಸ್ನೇಹಿತರಿಂದ' ಆಕೆ ವಿದೇಶದಲ್ಲಿ ಸಿಕ್ಕಿಬಿದ್ದಿದ್ದಾಳೆ.

ಇದನ್ನೂ ಓದಿ: ನಂಜನಗೂಡು-ಕಡಕೋಳ ರೈಲ್ವೆ ಮಾರ್ಗದಲ್ಲಿ ವಿಧ್ವಂಸಕ ಕೃತ್ಯದ ಯತ್ನ ವಿಫಲಗೊಳಿಸಿದ ಲೋಕೋ ಪೈಲಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.