ETV Bharat / bharat

'BJP ಅಧಿಕಾರಕ್ಕೆ ತರುವುದೇ ಗುರಿ': ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಅಣ್ಣಾಮಲೈ ಪ್ರತಿಜ್ಞೆ

ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಣ್ಣಾಮಲೈ ನಾಳೆ ಅಧಿಕಾರ ಸ್ವೀಕಾರ ಮಾಡಲಿದ್ದು, ಅದಕ್ಕೂ ಮುಂಚಿತವಾಗಿ ಬೃತಹ್​ ರೋಡ್ ಶೋ ನಡೆಸುತ್ತಿದ್ದಾರೆ.

author img

By

Published : Jul 15, 2021, 2:53 AM IST

Annamalai
Annamalai

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸೋತ ಅಣ್ಣಾಮಲೈಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಮಹತ್ವದ ಹುದ್ದೆ ನೀಡಿದ್ದು, ಈಗಾಗಲೇ ಅವರನ್ನ ತಮಿಳುನಾಡಿನ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಮಾಜಿ ಪೊಲೀಸ್​ ಅಧಿಕಾರಿ ಕೊಯಮತ್ತೂರಿನಿಂದ ಚೆನ್ನೈಗೆ ಮೂರು ದಿನಗಳ ಪ್ರಯಾಣ ಹಮ್ಮಿಕೊಂಡಿದ್ದಾರೆ. ಕಾಲ್ನಡಿಗೆ ಮೂಲಕ ಪ್ರವಾಸ ಕೈಗೊಂಡಿರುವ ಅಣ್ಣಾಮಲೈ ವಿವಿಧ ಸ್ಥಳಗಳಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

Annamalai
ದೇವರ ದರ್ಶನ ಪಡೆದ ಅಣ್ಣಾಮಲೈ

ನಿನ್ನೆಯಿಂದಲೇ ರೋಡ್​ ಶೋ ಆರಂಭಗೊಂಡಿದ್ದು, ಈ ವೇಳೆ ಮಾತನಾಡಿರುವ ಅವರು 2026ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುವುದೇ ನಮ್ಮ ಗುರಿ ಎಂದಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಆಡಳಿತ ನಡೆಸಬೇಕು ಎಂಬುದು ಪ್ರಧಾನಿ ಮೋದಿಯವರ ಕನಸು. ಅದನ್ನ ಯಶಸ್ವಿಗೊಳಿಸುವ ಉದ್ದೇಶದಿಂದ ನಾನು ಕಾರ್ಯಪ್ರವೃತ್ತನಾಗಲಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಚುನಾವಣೆಯಲ್ಲಿ ಸೋತ ಅಣ್ಣಾಮಲೈಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ ಹೈಕಮಾಂಡ್​

ಜುಲೈ 8ರಂದು ಇವರನ್ನ ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು, ಶುಕ್ರವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನ ಅರವಕುರುಚಿ ಕ್ಷೇತ್ರದಿಂದ ಅಣ್ಣಾ ಮಲೈ ಸ್ಪರ್ಧೆ ಮಾಡಿದ್ದರು. ಆದರೆ ಎದುರಾಳಿ ಅಭ್ಯರ್ಥಿ ವಿರುದ್ಧ 68 ಸಾವಿರ ಮತ ಪಡೆದು ಸೋಲು ಕಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.