ETV Bharat / sports

ಮೊದಲ ಟೆಸ್ಟ್​ನಲ್ಲಿ ಶೂನ್ಯಕ್ಕೆ ಔಟ್​, ನಂತರ ಮ್ಯಾಚ್​ನಲ್ಲಿ ಅತಿ ಹೆಚ್ಚು ರನ್ ​ಗಳಿಸಿ ವಿಶ್ವದಾಖಲೆ ನಿರ್ಮಿಸಿದ ಬ್ಯಾಟರ್​! - Cricketer Scored Most Runs in Test

ಪಾದಾರ್ಪಣೆ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಬ್ಯಾಟರ್​ ನಂತರದ ಪಂದ್ಯಗಳಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆ ಬ್ಯಾಟರ್​ ಯಾರು ಅನ್ನೋದರ ಮಾಹಿತಿಯನ್ನು ಈ ಸುದ್ದಿಯಲ್ಲಿ ತಿಳಿಯಿರಿ.

ಗ್ರಾಹಂ ಗೂಚ್
ಗ್ರಾಹಂ ಗೂಚ್ (AFP Photos)
author img

By ETV Bharat Sports Team

Published : Oct 5, 2024, 4:51 PM IST

ಹೈದರಾಬಾದ್: ಟೆಸ್ಟ್​ ಕ್ರಿಕೆಟ್ ಎಂಬುದು ಆಟಗಾರನ ಕೌಶಲ ಮತ್ತ ತಾಳ್ಮೆಯನ್ನು ಪರೀಕ್ಷಿಸುವ ಸ್ವರೂಪವಾಗಿದೆ. 5 ದಿನಗಳ ಕಾಲ ನಡೆಯುವ ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗುತ್ತವೆ ಮತ್ತು ಮುರಿಯಲ್ಪಡುತ್ತವೆ. ಆದ್ರೆ ಇಲ್ಲೊಬ್ಬ ಬ್ಯಾಟರ್​ ಪಾದಾರ್ಪಣೆ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ನಂತರದ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದು, ಅದನ್ನು ಮುರಿಯಲು ಇಂದಿಗೂ ಯಾವೊಬ್ಬ ಬ್ಯಾಟರ್​ಗೆ ಸಾಧ್ಯವಾಗಿಲ್ಲ. ಆ ದಾಖಲೆ ಯಾವುದು ಮತ್ತು ಯಾವ ಬ್ಯಾಟರ್​ ಇದನ್ನು ನಿರ್ಮಿಸಿದ್ದು ಅನ್ನೋದನ್ನು ಈ ಸುದ್ದಿಯಲ್ಲಿ ತಿಳಿಯೋಣ.

ಅನೇಕ ದಿಗ್ಗಜ ಆಟಗಾರರು ಕಳೆಪೆ ಪ್ರದರ್ಶನದೊಂದಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಿ ನಂತರ ವಿಶ್ವ ಕ್ರಿಕೆಟ್ ಅನ್ನು ಆಳಿದರು. ಅಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಇಂಗ್ಲೆಂಡ್‌ನ ಗ್ರಹಾಂ ಗೂಚ್ ಕೂಡ ಒಬ್ಬರಾಗಿದ್ದಾರೆ. ಇವರು ತಮ್ಮ ಪಾದಾರ್ಪಣೆಯ ಪಂದ್ಯದಲ್ಲಿ ಶೂನ್ಯಕ್ಕೆ ಔಟ್​ ಆಗಿದ್ದ ನಂತರ ಪಂದ್ಯವೊಂದರಲ್ಲಿ ಬರೋಬ್ಬರಿ 456ರನ್​ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಟೆಸ್ಟ್​ನಲ್ಲಿ ಆಟಗಾರನೊಬ್ಬ ದಾಖಲಿಸಿದ ಅತಿ ಹೆಚ್ಚು ರನ್​ ಇದಾಗಿದ್ದು, ಈ ದಾಖಲೆ ಮುರಿಯಲು ಇಂದಿಗೂ ಯಾವೊಬ್ಬ ಬ್ಯಾಟರ್​ನಿಂದ ಸಾಧ್ಯವಾಗಿಲ್ಲ.

ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕಾಗಿ ಆಡುವ ಮೊದಲು, ಗೂಚ್ ಎಸೆಕ್ಸ್‌ ತಂಡದಲ್ಲಿ ಆಡಿದ್ದರು. ಬಳಿಕ 1975ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಸೇರಿಕೊಂಡರು ಮತ್ತು ಬರ್ಮಿಂಗ್​ಹ್ಯಾಮ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಗೂಚ್ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿ ಕಳಪೆ ದಾಖಲೆ ಬರೆದಿದ್ದರು. ಮೊದಲ ಪಂದ್ಯದಲ್ಲೇ ಕೆಟ್ಟ ದಾಖಲೆ ಬರೆದ ಈ ಕ್ರಿಕೆಟಿಗ ನಂತರ ಯಾರು ಊಹಿಸಿದಂತ ಪ್ರದರ್ಶನ ತೋರಿ ವಿಶ್ವದಾಖಲೆಗಳನ್ನು ನಿರ್ಮಿಸಿದ್ದರು.

ಲಾರ್ಡ್ಸ್‌ ಮೈದಾನದಲ್ಲಿ ತ್ರಿಶತಕ ಸಿಡಿಸಿ ವಿಶ್ವದ ಮೊದಲ ಕ್ರಿಕೆಟಿಗರಾಗಿ ದಾಖಲೆ ಬರೆದರು. 1990ರಲ್ಲಿ ಲಾರ್ಡ್ಸ್ ನಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್​ನಲ್ಲಿ 333 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಗೂಚ್ ಅದೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲೂ ಶತಕದೊಂದಿಗೆ 123 ರನ್ ಗಳಿಸಿ ಔಟಾಗಿದ್ದರು. ಭಾರತ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಗೂಚ್ ಒಟ್ಟು 752 ರನ್ ಗಳಿಸಿದ್ದರು. ಇದು 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬ್ಯಾಟ್ಸ್‌ಮನ್ ಮಾಡಿದ ಗರಿಷ್ಠ ಸ್ಕೋರ್ ಆಗಿತ್ತು.

ಇದನ್ನೂ ಓದಿ: ಸಂಡೇ ಡಬಲ್​ ಧಮಾಕ!: ಎಂಟು ಗಂಟೆಗಳಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿರುವ ಟೀಮ್​ ಇಂಡಿಯಾ; ಎಲ್ಲಿ, ಯಾರ ಜೊತೆ? - T20 Cricket

ETV Bharat Logo

Copyright © 2024 Ushodaya Enterprises Pvt. Ltd., All Rights Reserved.