ETV Bharat / entertainment

ಮಕ್ಕಳಿಂದ ದೊಡ್ಡವರವರೆಗೂ ಫೇವರೆಟ್ ಪ್ಲೇಸ್​​: 'ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್​ ಅಡ್ವೆಂಚರ್ಸ್'ಗೆ ವರ್ಷದ ಸಂಭ್ರಮ - Jollywood Studios and Adventures - JOLLYWOOD STUDIOS AND ADVENTURES

'ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್​ ಅಡ್ವೆಂಚರ್ಸ್' ಒಂದು ವರ್ಷ ಪೂರೈಸಿದೆ.

'ಜಾಲಿವುಡ್ ಸ್ಟುಡಿಯೋ ಆ್ಯಂಡ್​ ಅಡ್ವೆಂಚರ್ಸ್' ಉದ್ಘಾಟಿಸಿದ್ದ ಶಿವಣ್ಣ, ಡಿಕೆಶಿ
'Jollywood Studios and Adventures' completes year (ETV Bharat)
author img

By ETV Bharat Karnataka Team

Published : Oct 5, 2024, 4:58 PM IST

ಅಡ್ವೆಂಚರ್ಸ್ ಹಾಗೂ ಎಂಟರ್ಟೈನ್ಮೆಂಟ್​ನಿಂದ ಕೂಡಿರುವ ಜಾಲಿವುಡ್ ಸ್ಟುಡಿಯೋಗೀಗ ಒಂದು ವರ್ಷದ ಸಂಭ್ರಮ. ಕಳೆದ ವರ್ಷ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಬಿಡಿದಿ ಸಮೀಪ ಇರುವ ಈ ಜಾಲಿವುಡ್ ಸ್ಟುಡಿಯೋ ಆ್ಯಂಡ್​ ಅಡ್ವೆಂಚರ್ಸ್ ಅನ್ನು ಬಹಳ ಅದ್ಧೂರಿಯಾಗಿ ಲೋಕಾರ್ಪಣೆಗೊಳಿಸಿದ್ದರು‌. ವಿನೂತನ ಕಾನ್ಸೆಪ್ಟ್ ಹೊಂದಿರುವ ಜಾಲಿವುಡ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಟ್ಟಿದೆ‌. ಈ ಹಿನ್ನೆಲೆ, ಜಾಲಿವುಡ್​ನಲ್ಲಿ ಮೊದಲ ವಾರ್ಷಿಕೋತ್ಸವ ಮತ್ತು ದಸರಾ ಸಂಭ್ರಮ ಅದ್ಧೂರಿಯಾಗಿ ನೆರವೇರಿತು.

ವೇಲ್ಸ್ ಗ್ರೂಪ್ ಆಫ್ ಕಂಪನಿ ಮಾಲೀಕತ್ವದ ಜಾಲಿವುಡ್ ಸ್ಟುಡಿಯೋ ತಮಿಳಿನಲ್ಲಿ 15 ಸಿನಿಮಾ ನಿರ್ಮಾಣ ಮಾಡಿದೆ. ಶಿಕ್ಷಣ ಮತ್ತು ಮನರಂಜನೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹಲವು ಕ್ಷೇತ್ರಗಳಲ್ಲಿ ‌ಗಮನ ಹರಿಸಿದೆ‌. ಡಾ. ಐಸಿರಿ ಕೆ ಗಣೇಶ್ ಅವರ ಸಾರಥ್ಯದಲ್ಲಿ ಜಾಲಿವುಡ್ ಸ್ಟುಡಿಯೋವನ್ನು ಮುನ್ನಡೆಸಲಾಗುತ್ತಿದೆ.

'Jollywood Studios and Adventures' completes year
'ಜಾಲಿವುಡ್ ಸ್ಟುಡಿಯೋ ಆ್ಯಂಡ್​ ಅಡ್ವೆಂಚರ್ಸ್'ಗೆ ವರ್ಷದ ಸಂಭ್ರಮ (ETV Bharat)

ಜಾಲಿವುಡ್ ಸ್ಥಳೀಯ ಮುಖ್ಯಸ್ಥ ಬಷೀರ್ ಅಹಮದ್ ಮಾತನಾಡಿ, ಕಳೆದ ವರ್ಷದಿಂದ ಈವರೆಗೆ ಜನರು ನೀಡುತ್ತಿರುವ ಸಹಕಾರ, ಪ್ರೋತ್ಸಾಹ ಅಪಾರ. ಈವರೆಗೆ 10 ಲಕ್ಷ ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ. ಮಾಧ್ಯಮದ ಸಹಕಾರ ಇಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಜಾಲಿವುಡ್ ಒಂದು ವರ್ಷ ಪೂರ್ಣಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ರಮಣ್ ಕುಮಾರ್ ಮಾತನಾಡಿ, ಬೆಂಗಳೂರು ಸುತ್ತ ಮುತ್ತಲ ಶಾಲೆಯ 2 ರಿಂದ 2.5 ಲಕ್ಷ ವಿದ್ಯಾರ್ಥಿಗಳು ಬಂದಿದ್ದು, ಹಾಲಿಡೇ ತಾಣವಾಗಿ ಸಂತೋಷ, ಉಲ್ಲಾಸ, ಉತ್ಸಾಹ ಪಡೆಯುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಂದ ಸಹ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ತಿಳಿಸಿದರು.

ಜಾಲಿವುಡ್ ಸ್ಟುಡಿಯೋದ ಪ್ರಮೋಷನಲ್ ಪಾರ್ಟ್​​ನರ್ ಆಗಿರುವ ನಿರ್ದೇಶಕ ನವರಸನ್ ಮಾತನಾಡಿ, ಜಾಲಿವುಡ್ ಯಶಸ್ವಿಯಾಗಿ ನಡೆಯುತ್ತಿದೆ. ಐಸಿರಿ ಗಣೇಶ್ ಅವರು ನಮ್ಮನ್ನು ನಂಬಿದ್ದಾರೆ. ಹೀಗಾಗಿ ಅವರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ಕೊಡಿ ಎನ್ನುತ್ತಿದ್ದಾರೆ. ಶೇಕಡ 85ರಷ್ಟು ಕನ್ನಡಿಗರು ಇಲ್ಲಿ ಕೆಲಸ ಮಾಡುತ್ತಿದ್ದಾರೆ‌. ಇದಕ್ಕೆಲ್ಲಾ ಐಸಿರಿ ಗಣೇಶ್ ಅವರ ಸಹಕಾರವೇ ಕಾರಣ ಎಂದು ತಿಳಿಸಿದರು.

ಇದನ್ನೂ ಓದಿ: ''ನನ್ನ ಮೊದಲ ಅಡ್ವೆಂಚರ್‌ ಕಥೆಯ ಸಿನಿಮಾವಿದು'': ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ - Paru Parvathy movie

ಒಂದು ವರ್ಷದಿಂದ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿರಲಿಲ್ಲ‌. ಮುಂದಿನ ದಿನಗಳಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಿನಿಮಾ ಹಾಗೂ ಕಿರುತೆರೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಚಿತ್ರೀಕರಣಕ್ಕಾಗಿ ಮೆಟ್ರೋ ರೈಲು ಸೇರಿದಂತೆ ಎರಡು ಹೊಸ ಯೋಜನೆ ಸದ್ಯದಲ್ಲೇ ಶುರು ಮಾಡಲು ಮಾತುಕತೆ ಆಗುತ್ತಿದೆ ಅಂತಾ ನಿರ್ದೇಶಕ ನವರಸನ್ ತಿಳಿಸಿದರು.

ಇದನ್ನೂ ಓದಿ: ಲಾಯರ್​ ಜಗದೀಶ್​​​ಗೆ ಕಾದಿದೆಯಾ ಕಿಚ್ಚನ ಕ್ಲಾಸ್​? ಸುದೀಪ್​ ಪಂಚಾಯ್ತಿಯಲ್ಲಿ ಯಾವ ವಿಷಯ ಚರ್ಚೆಯಾಗಬೇಕು? - Bigg Boss Kannada first elimination

ಇದರ ಜೊತೆಗೆ ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಟಿಕೆಟ್​ ಬೆಲೆ ಸಾಮಾನ್ಯ ‌ದಿನಗಳಲ್ಲಿ 999 ಮತ್ತು ವಾರಾಂತ್ಯದಲ್ಲಿ 1,199 ಇರಲಿದೆ. ಜಾಲಿವುಡ್ ಸಂಸ್ಥೆ ವತಿಯಿಂದ ಪ್ರತೀ ವರ್ಷ ಪ್ರಶಸ್ತಿ ನೀಡುವ ಉದ್ದೇಶವಿದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಲೋಪ ದೋಷ ಆಗದಂತೆ ನೋಡಿಕೊಳ್ಳಲಾಗಿದೆ. ಆವರಣದಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇದೆ ಎಂದು ನವರಸನ್ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.