ETV Bharat / state

ನಮ್ಮದು ಜನಸಾಮಾನ್ಯರ, ರೈತ ಪರ ಸರ್ಕಾರ: ಸಚಿವ ಎನ್. ಚಲುವರಾಯಸ್ವಾಮಿ - RAITHA DASARA

ಕೃಷಿಯನ್ನು ಲಾಭದಾಯಕವಾಗಿಸುವುದೇ ರಾಜ್ಯ ಸರ್ಕಾರದ ಧ್ಯೇಯ. ಅದಕ್ಕಾಗಿ ಕೃಷಿ, ಪಶುಸಂಗೋಪನೆ, ತೋಟಗಾರಿಗೆ ಮತ್ತು ರೇಷ್ಮೆ ಒಟ್ಟುಗೂಡಿಸಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ರೈತ ದಸರಾ ಕಾರ್ಯಕ್ರಮ
ರೈತ ದಸರಾ ಕಾರ್ಯಕ್ರಮ (ETV Bharat)
author img

By ETV Bharat Karnataka Team

Published : Oct 5, 2024, 4:11 PM IST

Updated : Oct 5, 2024, 5:04 PM IST

ಮೈಸೂರು: ನಮ್ಮದು ಜನಸಾಮಾನ್ಯರ, ರೈತ ಪರ ಸರ್ಕಾರ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಗರದ ಜಿ.ಕೆ ಮೈದಾನದಲ್ಲಿ ಆಯೋಜಿಸಿರುವ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ. ಕೃಷಿಯನ್ನು ಲಾಭದಾಯಕವಾಗಿಸುವುದೇ ರಾಜ್ಯ ಸರ್ಕಾರದ ಧ್ಯೇಯ. ಅದಕ್ಕಾಗಿ ಕೃಷಿ , ಪಶುಸಂಗೋಪನೆ, ತೋಟಗಾರಿಗೆ ಮತ್ತು ರೇಷ್ಮೆ ಒಟ್ಟುಗೂಡಿಸಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೃಷಿಕರ ಆದಾಯ ವೃದ್ಧಿಯಾಗಬೇಕು. ವೈಜ್ಞಾನಿಕ ಬೆಲೆ ದೊರೆಯುವ ಜೊತೆಗೆ ಸರ್ವ ಋತು ವರಮಾನ ಬರುವಂತೆ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿಕರು ಸಮಗ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು. ಹೈನುಗಾರಿಕೆ, ಕುರಿ, ಕೋಳಿ, ಹಂದಿ, ಮೀನು, ಜೇನು ಸಾಕಾಣಿಕೆ ಬಗ್ಗೆಯೂ ಗಮನ ಹರಿಸಬೇಕು. ಆಗ ಮಾತ್ರ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂದು ಹೇಳಿದರು.

ಸಚಿವ ಎನ್. ಚಲುವರಾಯಸ್ವಾಮಿ (ETV Bharat)

ಕೃಷಿ ಇಲಾಖೆವತಿಯಿಂದ ಕಳೆದ ಸಾಲಿನಲ್ಲಿ 1,000 ಕೋಟಿ ರೂ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನ, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ಪಾದನೆ ವೃದ್ಧಿಸುವ ಮೂಲಕ ಹೆಚ್ಚಿನ ಲಾಭ ಗಳಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ವೆಂಕಟೇಶ್, ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕ ಹರೀಶ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೈತ ಸಾಧಕರನ್ನು ಸನ್ಮಾನಿಸಲಾಯಿತು.

ರೈತ ದಸರಾ ಕಾರ್ಯಕ್ರಮ
ರೈತ ದಸರಾ ಕಾರ್ಯಕ್ರಮ (ETV Bharat)

ನಾನು ಸಿಎಂ ರೇಸ್​ನಲ್ಲಿ ಇಲ್ಲ: ಮತ್ತೊಂದೆಡೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ನಾನು ಸಿಎಂ ರೇಸ್​ನಲ್ಲಿ ಇಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ಈಗಾಗಲೇ ಹೈಕಮಾಂಡ್, ಡಿಸಿಎಂ ಡಿ.ಕೆ. ಶಿವಕುಮಾರ್​ ಮತ್ತು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ರಾಜೀನಾಮೆ ಊಹಾಪೋಹದ ಮಾತು. ನಮ್ಮ ಸರ್ಕಾರ ಐದು ವರ್ಷ ಸುಭದ್ರ ಆಡಳಿತ ನೀಡುತ್ತದೆ. ಸಿದ್ದರಾಮಯ್ಯ , ಡಿ.ಕೆ. ಶಿವಕುಮಾರ್ ಜೋಡೆತ್ತಿನ ರೀತಿ ಸರ್ಕಾರ ನಡೆಸುತ್ತಾರೆ ಎಂದು ತಿಳಿಸಿದರು.

ಮುಡಾದಲ್ಲಿ‌ ಬಹಳಷ್ಟು ಹಗರಣಗಳ ಸೈಟ್​ಗಳು ಇದ್ದಾವೆ. ಈ ಕುರಿತು ಸಿಎಂ ಈಗಾಗಲೇ ಒಂದು ತನಿಖಾ ತಂಡ ರಚನೆ ಮಾಡಿದ್ದಾರೆ.‌ ತನಿಖೆ ಮಾಡಿ ಅಕ್ರಮ ನಿವೇಶನವನ್ನು ವಾಪಸ್​ ಪಡೆಯುತ್ತಾರೆ. ಸಿಎಂ ಪತ್ನಿ ಸೈಟ್ ಹಿಂದಿರುಗಿಸಿದ್ದಾರೆ‌, ಅದರೂ ಸಿಎಂಗೆ ಸಂಬಂಧಿಸಿದ ಪ್ರರಕಣದ ತನಿಖೆ‌ ಆಗುತ್ತಿದೆ ಎಂದರು.

ಮುಡಾದಲ್ಲಿ‌ ಅಕ್ರಮವಾಗಿ ಜಿ‌.ಟಿ. ದೇವೇಗೌಡ ಒಬ್ಬರ ಸೈಟ್ ಇಲ್ಲ, ಬೇಕಾದಷ್ಟು ಜನರ ಸೈಟ್ ಅಕ್ರಮವಾಗಿದೆ. ನಾನು ಹೆಸರು ಹೇಳಲು ಇಚ್ಛೆ ಪಡುವುದಿಲ್ಲ, ಯಾರ‍್ಯಾರು ಅಕ್ರಮವಾಗಿ ಸೈಟ್ ಪಡೆದುಕೊಂಡಿದ್ದಾರೆ ಅವರು‌ ವಾಪಸ್​ ನೀಡಿ‌‌ ಎಂದು‌ ಮನವಿ ಮಾಡುತ್ತೇನೆ. ಇಲ್ಲ ಎಂದರೆ ಕಾನೂನು ಪ್ರಕಾರ ವಾಪಸ್‌ ಪಡೆಯುಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು ದಸರಾ‌: ಪಾರಂಪರಿಕ ಉಡುಗೆಯಲ್ಲಿ 50 ಜೋಡಿಗಳಿಂದ ಟಾಂಗಾ ಸವಾರಿ - Tanga Raid In Mysuru Dasara

Last Updated : Oct 5, 2024, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.