ETV Bharat / bharat

ಅಣ್ಣನ ಹಾದಿಯಲ್ಲೇ ತಂಗಿಯ ಹೆಜ್ಜೆ... ಹೊಸ ಪಕ್ಷ ಸ್ಥಾಪಿಸಿದ ಜಗನ್​ ಸಹೋದರಿ

ಜಗನ್​ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ತೆಲಂಗಾಣದಲ್ಲಿ ಹೊಸ ಪಕ್ಷ ಘೋಷಣೆ ಮಾಡಿದ್ದು, ತಂದೆಯ ಹಾದಿಯಲ್ಲೇ ಸಾಗುವುದಾಗಿ ಶಪಥ ಮಾಡಿದ್ದಾರೆ.

author img

By

Published : Jul 8, 2021, 10:25 PM IST

Updated : Jul 8, 2021, 10:50 PM IST

CM Jagan sister Sharmila
CM Jagan sister Sharmila

ಹೈದರಾಬಾದ್​: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಅಣ್ಣನ ಹಾದಿಯಲ್ಲೇ ಹಜ್ಜೆ ಇಟ್ಟಿದ್ದು, ಇದೀಗ ತಂದೆಯ ಜನ್ಮದಿನದಂದೇ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್​​ ರಾಜಶೇಖರ್​ ರೆಡ್ಡಿ ಅವರ ಮಗಳಾಗಿರುವ ಶರ್ಮಿಳಾ ಇಂದು ಹೊಸ ಪಕ್ಷ ಘೋಷಣೆ ಮಾಡಿದ್ದು, ಅದಕ್ಕೆ 'ವೈಎಸ್​ಆರ್​ ತೆಲಂಗಾಣ ಪಾರ್ಟಿ' ಎಂದು ಹೆಸರಿಟ್ಟಿದ್ದಾರೆ. ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದರು.

ಹೊಸ ಪಕ್ಷ ಘೋಷಿಸಿದ ಸಿಎಂ ಜಗನ್​ ಸಹೋದರಿ ಶರ್ಮಿಳಾ

ಕಳೆದ ಏಪ್ರಿಲ್ ತಿಂಗಳಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಹೇಳಿಕೊಂಡಿದ್ದ ಶರ್ಮಿಳಾ, ತಂದೆ ವೈಎಸ್​​ಆರ್​​ ಅವರ ಹಾದಿಯಲ್ಲಿ ಸಾಗಲು ಬಯಸುತ್ತೇನೆ ಎಂದು ಹೇಳಿದ್ದರು. 2023ರಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುವ ಉದ್ದೇಶದಿಂದ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಆದರೆ ಪಕ್ಷದ ಕಾರ್ಯಕ್ರಮದ ವೇಳೆ ಅಣ್ಣ ಜಗನ್​ ಮೋಹನ್​ ರೆಡ್ಡಿ ಭಾಗಿಯಾಗಿರಲಿಲ್ಲ. ಈ ಹಿಂದಿನಿಂದಲೂ ಇದಕ್ಕೆ ಆಂಧ್ರ ಸಿಎಂ ವಿರೋಧಿಸಿದ್ದರು.

  • Andhra Pradesh Chief Minister Jaganmohan Reddy's sister YS Sharmila launches her party 'YSR Telangana Party' on the occasion of her late father YS Rajasekhara Reddy's birth anniversary. pic.twitter.com/xdr5GjUSqw

    — ANI (@ANI) July 8, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಮದುವೆಯಾಗದಿದ್ದಕ್ಕೆ ಖಿನ್ನತೆ: ಆತ್ಮಹತ್ಯೆಗೆ ಶರಣಾದ ಮಹಿಳಾ ಸಬ್​​ಇನ್ಸ್​ಪೆಕ್ಟರ್​

ಈ ವೇಳೆ ಮಾತನಾಡಿರುವ ಶರ್ಮಿಳಾ, ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ಓರ್ವ ಸುಳ್ಳುಗಾರನಾಗಿದ್ದು, ನೀಡಿರುವ ಯಾವುದೇ ಭರವಸೆ ಈಡೇರಿಕೆ ಮಾಡಿಲ್ಲ. ಅವರ ಆಡಳಿತದಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ.ತೆಲಂಗಾಣದಲ್ಲಿ ಸದ್ಯ ಮುಖ್ಯಮಂತ್ರಿ ಕೆಸಿಆರ್ ನೇತೃತ್ವದ ಟಿಆರ್​ಎಸ್​(ತೆಲಂಗಾಣ ರಾಷ್ಟ್ರೀಯ ಸಮಿತಿ) ಹಾಗೂ ಬಿಜೆಪಿ ಪ್ರಮುಖ ಪಕ್ಷಗಳಾಗಿವೆ.

Last Updated : Jul 8, 2021, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.