ETV Bharat / bharat

50 ಲಕ್ಷ ಲಂಚ ತೆಗೆದುಕೊಳ್ಳುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ  ಕಾನ್‌ಸ್ಟೇಬಲ್

ಅಹಮದಾಬಾದ್ ಗ್ರಾಮೀಣ ಎಲ್‌ಸಿಬಿ ಮತ್ತು ಆನಂದ್ ಜಿಲ್ಲೆಯ ಎಲ್‌ಸಿಬಿ ತಂಡದ ಜಂಟಿ ಕಾರ್ಯಾಚರಣೆ ವೇಳೆ 50 ಲಕ್ಷ ರೂ.ಲಂಚ ಪಡೆಯುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್​ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

Police station
ಪೊಲೀಸ್​ ಠಾಣೆ
author img

By

Published : Jan 1, 2021, 9:26 AM IST

ಖಂಭತ್: ಖಂಭಾತ್ ಪೊಲೀಸ್ ಠಾಣೆಯ ಆರ್‌ಆರ್ ಸೆಲ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್​ಸ್ಟೇಬಲ್​ ಪ್ರಕಾಶ್ ಸಿಂಗ್ ರೌಲ್ ಎಂಬುವವರು ಎಸಿಬಿ ಆನಂದ್ ಅವರಿಂದ 50 ಲಕ್ಷ ರೂ.ಗಳ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಅಹಮದಾಬಾದ್ ಗ್ರಾಮೀಣ ಎಲ್‌ಸಿಬಿ ಮತ್ತು ಆನಂದ್ ಜಿಲ್ಲೆಯ ಎಲ್‌ಸಿಬಿ ತಂಡದ ಜಂಟಿ ಕಾರ್ಯಾಚರಣೆ ವೇಳೆ ಪೊಲೀಸ್​ ಕಾನ್​ಸ್ಟೇಬಲ್​ ಸಿಕ್ಕಿಬಿದ್ದಿರುವುದಾಗಿ ಮೂಲಗಳು ತಿಳಿಸಿದೆ.

ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಪೊಲೀಸ್ ದಾಳಿ ನಡೆಸಿ ಕಾನ್‌ಸ್ಟೇಬಲ್ ವಶಕ್ಕೆ ಪಡೆದಿದ್ದಾರೆ. ಈತ​ ಖಂಭಟ್ ರಸಗೊಬ್ಬರ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.

ಲಂಚಕ್ಕಾಗಿ ಆರೋಪಿ ಪ್ರಕಾಶ್​ ಒತ್ತಾಯಿಸುತ್ತಿದ್ದ ಎಂಬ ದೂರಿನ ಆಧಾರದ ಮೇಲೆ ಅಹಮದಾಬಾದ್ ಗ್ರಾಮೀಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಆನಂದ್ ಜಿಲ್ಲೆಯ ಸ್ಥಳೀಯ ಅಪರಾಧ ಶಾಖಾ ಕಚೇರಿ (ಎಲ್‌ಸಿಬಿ) ಈ ಕಾರ್ಯಾಚರಣೆ ನಡೆಸಿದೆ.

ಪ್ರಕಾಶ್ ವಿದ್ಯಾನಗರ ರಸ್ತೆಯ ರೆಸ್ಟೋರೆಂಟ್‌ನಲ್ಲಿ 50 ಲಕ್ಷ ರೂ.ಗಳ ಲಂಚ ಸ್ವೀಕರಿಸುತ್ತಿರುವ ಮಾಹಿತಿ ಮೇರೆಗೆ ಎಸಿಬಿ ಬಲೆ ಬೀಸಿತ್ತು. ಇದೀಗ ಪ್ರಕಾಶ್ ಸಿಂಗ್ ರಾವಲ್ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.