ಹೈದರಾಬಾದ್: 2019 ರ ಜನವರಿ 17 ರಂದು ಹಫೀಜ್ಪೇಟೆ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಬಿ ನಗರ ನ್ಯಾಯಾಲಯವು ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ತಲಾ 20 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶೇಕ್ ಶೌಕತ್ (35), ಮೊಹಮ್ಮದ್ ಖಾಲಿದ್ (22), ಮೊಹಮ್ಮದ್ ಅಫ್ರೋಜ್ (20), ಅಬ್ದುಲ್ ಸಲ್ಮಾನ್ ಖಾನ್ (20), ಶೇಕ್ ಸಲ್ಮಾನ್ (22) ಮತ್ತು ಮುಜಾಹಿದ್ ಖಾನ್ (20) ಅಪರಾಧಿಗಳಾಗಿದ್ದಾರೆ.
ದುಷ್ಕೃತ್ಯದ ವೇಳೆ ಸಂತ್ರಸ್ತೆ ಜತೆಗಿದ್ದ ಸ್ನೇಹಿತರೊಬ್ಬರು ಘಟನೆಯ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅವರು ತನ್ನ ಸ್ನೇಹಿತೆಯ ಮೇಲಿನ ಅತ್ಯಾಚಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನ್ಯಾಯಾಲಯವು, ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ ಮೂವರ ಸಾವು.. ನಾಲ್ಕು ಮದ್ಯದಂಗಡಿಗಳಿಗೆ ಬೀಗ
ಈ ತೀರ್ಪಿನ ಬಗ್ಗೆ ಸೈಬರಾಬಾದ್ ಸಿ ಪಿ ಸಜ್ಜನರ್ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮಾದಾಪುರ ಡಿಸಿಪಿ ವೆಂಕಟೇಶ್ವರಲು, ಎಸಿಪಿ ರವಿಕುಮಾರ್ ಮತ್ತು ಕೃಷ್ಣ ಪ್ರಸಾದ್ ಅವರನ್ನು ಶ್ಲಾಘಿಸಿದ್ದಾರೆ.