ETV Bharat / bharat

ದೇಶದ ಶೇ.44ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್​ ಕೇಸ್: ಕರ್ನಾಟಕದ ಶಾಸಕರು ದೇಶದಲ್ಲೇ ಸಿರಿವಂತರು! - ಆಸ್ತಿ ವಿವರಗಳ ಬಗ್ಗೆ ಮಾಹಿತಿ

ಭಾರತದ ವಿವಿಧ ರಾಜ್ಯಗಳ ವಿಧಾನಸಭೆ ಶಾಸಕರ ಮೇಲಿನ ಕ್ರಿಮಿನಲ್​ ಪ್ರಕರಣಗಳು ಮತ್ತು ಆಸ್ತಿ ವಿವರಗಳ ಮಾಹಿತಿ ಇಲ್ಲಿದೆ.

44-per-cent-mlas-across-india-have-criminal-cases-adr-analysis-quoting-poll-affidavits
ದೇಶದ ಶೇ.44ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್​ ಪ್ರಕರಣ : ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಶತಕೋಟಿ ಶಾಸಕರು
author img

By

Published : Jul 16, 2023, 8:24 AM IST

ನವದೆಹಲಿ : ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಇತ್ತೀಚಿನ ವಿಶ್ಲೇಷಣೆಯು, ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಶಾಸಕರ ಮೇಲಿನ ಅಪರಾಧ​ ಪ್ರಕರಣಗಳು ಮತ್ತು ಆಸ್ತಿ ವಿವರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್​ಇಡಬ್ಲೂ) ನಡೆಸಿದ ಈ ವಿಶ್ಲೇಷಣೆಯು ದೇಶದ ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರಸ್ತುತ ಶಾಸಕರು ಸಲ್ಲಿಸಿದ್ದ ಪ್ರಮಾಣ ಪತ್ರಗಳನ್ನು ಆಧರಿಸಿದೆ.

ದೇಶದ ಶೇ 44 ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಕೇಸ್: ಭಾರತದ ಎಲ್ಲ 28 ರಾಜ್ಯಗಳ ವಿಧಾನಸಭಾ ಕ್ಷೇತ್ರಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4,033 ಶಾಸಕರ ಪೈಕಿ 4,001 ಶಾಸಕರ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಅಂಕಿ ಅಂಶಗಳನ್ನು ಶಾಸಕರ ಇತ್ತೀಚಿನ ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್​ನಿಂದ ಸಂಗ್ರಹಿಸಲಾಗಿದೆ. ಈ ಮಾಹಿತಿಯಂತೆ, ದೇಶದ ಎಲ್ಲ ರಾಜ್ಯ ವಿಧಾನಸಭಾ ಕ್ಷೇತ್ರಗಳ ಶೇ. 44ರಷ್ಟು ಶಾಸಕರು ತಮ್ಮ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 1,136 ಅಂದರೆ ಶೇ. 28ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಮಾಹಿತಿ ನೀಡಿದ್ದಾರೆ. ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಇತರ ಪ್ರಕರಣಗಳನ್ನು ಇವರು ಹೊಂದಿದ್ದಾರೆ.

ರಾಜ್ಯವಾರು ನೋಡುವುದಾದರೆ, ಕೇರಳದಲ್ಲಿನ 135 ಶಾಸಕರ ಪೈಕಿ 95 ಶಾಸಕರು ಅಂದರೆ ಶೇ.70 ರಷ್ಟು ಶಾಸಕರು ಕ್ರಿಮಿನಲ್​ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಬಿಹಾರದಲ್ಲಿ 242 ಶಾಸಕರಲ್ಲಿ 161 ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಅಂದರೆ ಶೇ. 67ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್​ ಪ್ರಕರಣಗಳಿವೆ. ದೆಹಲಿಯಲ್ಲಿ 70 ಶಾಸಕರಲ್ಲಿ 44 ಶಾಸಕರ ವಿರುದ್ಧ ಕ್ರಿಮಿನಲ್​ ಪ್ರಕರಣಗಳಿವೆ, ಅಂದರೆ ಶೇ. 63ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್​ ಪ್ರಕರಣಗಳಿವೆ. ಮಹಾರಾಷ್ಟ್ರದ 284 ಶಾಸಕರ ಪೈಕಿ 175 ಶಾಸಕರ ವಿರುದ್ಧ ಕ್ರಿಮಿನಲ್​ ಪ್ರಕರಣ ಇದೆ. ಅಂದರೆ ಶೇ. 62ರಷ್ಟು ಶಾಸಕರು ಕ್ರಿಮಿನಲ್​ ಪ್ರಕರಣ ಹೊಂದಿದ್ದಾರೆ. ತೆಲಂಗಾಣದಲ್ಲಿ 118 ಶಾಸಕರ ಪೈಕಿ 72 ಶಾಸಕರ ವಿರುದ್ಧ ಕ್ರಿಮಿನಲ್​ ಪ್ರಕರಣಗಳಿವೆ. ಅಂದರೆ ಶೇ. 61ರಷ್ಟು ಶಾಸಕರು ಕ್ರಿಮಿನಲ್​ ಪ್ರಕರಣ ಹೊಂದಿದ್ದಾರೆ. ತಮಿಳುನಾಡಿನಲ್ಲಿ 224 ಶಾಸಕರ ಪೈಕಿ 134 (ಶೇ.60) ಶಾಸಕರು ಕ್ರಿಮಿನಲ್​ ಪ್ರಕರಣ ಹೊಂದಿದ್ದಾರೆ.

ವಿವಿಧ ಗಂಭೀರ ಪ್ರಕರಣಗಳನ್ನು ಘೋಷಿಸಿಕೊಂಡಿರುವ ಶಾಸಕರ ಪಟ್ಟಿಯನ್ನು ನೋಡುವುದಾದರೆ, ದೆಹಲಿಯಲ್ಲಿ 70 ಶಾಸಕರಲ್ಲಿ 37 (ಶೇ. 53) ಶಾಸಕರು ಗಂಭೀರ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಬಿಹಾರದಲ್ಲಿ 242 ಶಾಸಕರ ಪೈಕಿ 122 (ಶೇ. 50) ಶಾಸಕರು, ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 114 (ಶೇ. 40) ಶಾಸಕರು, ಜಾರ್ಖಂಡ್​ನಲ್ಲಿ 79 ಶಾಸಕರಲ್ಲಿ 31(ಶೇ.39) ಶಾಸಕರು, ತೆಲಂಗಾಣದಲ್ಲಿ 118 ಶಾಸಕರಲ್ಲಿ 46 (ಶೇ. 39) ಶಾಸಕರು ಮತ್ತು ಉತ್ತರ ಪ್ರದೇಶದಲ್ಲಿ 403 ಶಾಸಕರಲ್ಲಿ 155 (ಶೇ.38) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ತಿಳಿಸಿದ್ದಾರೆ.

ಮಹಿಳೆಯರ ವಿರುದ್ಧ ಶಾಸಕರ ದೌರ್ಜನ್ಯ ಪ್ರಕರಣಗಳು: ಶಾಸಕರು ಮಹಿಳೆಯರ ವಿರುದ್ಧ ನಡೆಸಿರುವ ದೌರ್ಜನ್ಯ ಪ್ರಕರಣಗಳನ್ನೂ ಇದು ಒಳಗೊಂಡಿದೆ. ಒಟ್ಟು 114 ಶಾಸಕರು ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇದರಲ್ಲಿ 14 ಶಾಸಕರು ನಿರ್ದಿಷ್ಟವಾಗಿ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು (ಐಪಿಸಿ ಸೆಕ್ಷನ್-376) ಘೋಷಿಸಿದ್ದಾರೆ ಎಂಬ ಅಂಶ ವರದಿಯಲ್ಲಿದೆ.

ದೇಶದ ಶಾಸಕರ ಸರಾಸರಿ ಆಸ್ತಿ ಮೌಲ್ಯ ₹13.63 ಕೋಟಿ: ಕ್ರಿಮಿನಲ್​ ದಾಖಲೆಗಳ ಹೊರತಾಗಿ, ಶಾಸಕರ ಆಸ್ತಿಗಳ ವಿವರವನ್ನು ಎಡಿಆರ್​ ವಿಶ್ಲೇಷಿಸಿದೆ. ಎಲ್ಲ ರಾಜ್ಯಗಳ ಶಾಸಕರ ಸರಾಸರಿ ಆಸ್ತಿ ಮೌಲ್ಯ 13.63 ಕೋಟಿ ಇದೆ. ಇದರಲ್ಲೂ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಾಸಕರು 16.36 ಕೋಟಿ ಸರಾಸರಿ ಆಸ್ತಿ ಹೊಂದಿದ್ದು, ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದ ಶಾಸಕರು 11.45 ಕೋಟಿ ರೂ ಸರಾಸರಿ ಆಸ್ತಿ ಹೊಂದಿದ್ದಾರೆ.

ಕರ್ನಾಟಕದ ಶಾಸಕರು ದೇಶದಲ್ಲೇ ಸಿರಿವಂತರು: ವಿವಿಧ ರಾಜ್ಯಗಳ ಶಾಸಕರ ಸರಾಸರಿ ಆಸ್ತಿ ವಿವರಗಳನ್ನು ನೋಡುವುದಾದರೆ, ಕರ್ನಾಟಕದ ಒಟ್ಟು 223 ಶಾಸಕರು 64.39 ಕೋಟಿ ರೂಪಾಯಿ ಸರಾಸರಿ ಆಸ್ತಿ ಹೊಂದಿದ್ದಾರೆ. ಈ ಮೂಲಕ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಆಂಧ್ರಪ್ರದೇಶದ ಒಟ್ಟು 174 ಶಾಸಕರು 28.24 ಕೋಟಿ ಸರಾಸರಿ ಆಸ್ತಿ ಮೌಲ್ಯ ಹೊಂದಿದ್ದು, ಮಹಾರಾಷ್ಟ್ರದ 284 ಶಾಸಕರು 23.51 ಕೋಟಿ ಮೌಲ್ಯದ ಸರಾಸರಿ ಆಸ್ತಿಯೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ.

ಇದರ ಜೊತೆಗೆ, ತ್ರಿಪುರಾದ 59 ಶಾಸಕರು 1.54 ಕೋಟಿ ಸರಾಸರಿ ಆಸ್ತಿಯನ್ನು ಹೊಂದಿದ್ದು, ಪಶ್ಚಿಮ ಬಂಗಾಳದ 293 ಶಾಸಕರು 2.80 ಕೋಟಿ ಮತ್ತು ಕೇರಳದ 135 ಶಾಸಕರು ರೂ 3.15 ಕೋಟಿ ರೂ ಸರಾಸರಿ ಆಸ್ತಿ ಮೌಲ್ಯ ಹೊಂದಿದ್ದಾರೆ. ಇವು ಅತ್ಯಂತ ಕಡಿಮೆ ಸರಾಸರಿ ಆಸ್ತಿ ಹೊಂದಿರುವ ರಾಜ್ಯಗಳಾಗಿವೆ.

ಒಟ್ಟು 4,001 ಶಾಸಕರಲ್ಲಿ 88 (ಶೇ. 2) ಶಾಸಕರು ಶತಕೋಟ್ಯಧಿಪತಿಗಳಾಗಿದ್ದು, 100 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಕರ್ನಾಟಕದ 223 ಶಾಸಕರ ಪೈಕಿ 32 (ಶೇ.14) ಮಂದಿಗೆ ಶತಕೋಟಿಗೂ ಅಧಿಕ ಆಸ್ತಿ ಇದೆ. ಅರುಣಾಚಲ ಪ್ರದೇಶದ 59 ಶಾಸಕರಲ್ಲಿ 4 (ಶೇ. 7) ಮಂದಿ ಶತಕೋಟಿ ಶಾಸಕರಿದ್ದಾರೆ. ಆಂಧ್ರಪ್ರದೇಶದ 174 ಶಾಸಕರ ಪೈಕಿ 10 (ಶೇ. 6) ಮಂದಿ ಶಾಸಕರಿದ್ದಾರೆ. ಅಲ್ಲದೆ ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲೂ 100 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಶಾಸಕರಿದ್ದಾರೆ.

ಇದನ್ನೂ ಓದಿ : 1,510 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂ.ಟಿ.ಬಿ.ನಾಗರಾಜ್; 3 ವರ್ಷದಲ್ಲಿ ₹286 ಕೋಟಿ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.