ETV Bharat / bharat

ಸಿಮ್ಲಿಪಾಲ್ ಸೇರಿ 395 ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚಿನ ಹಾವಳಿ - ಸಿಮ್ಲಿಪಾಲ್ ಕಾಳ್ಗಿಚ್ಚು

ಗುರುವಾರ ಸುಮಾರು 154 ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇನ್ನೂ ಹಲವೆಡೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಈವರೆಗೆ ಕಾಳ್ಗಿಚ್ಚು ಕಾಣಿಸಿಕೊಂಡು 10 ದಿನಗಳು ಕಳೆದಿದ್ದು, ಅಗ್ನಿ ಶಾಮಕ ದಳ, ಇತರೇ ಪಡೆಗಳು ಬೆಂಕಿ ನಂದಿಸಲು ಹರಸಾಹಸ ನಡೆಸುತ್ತಿವೆ.

395 Forests Burning In Odisha Since Past 3 Days
ಸಿಮ್ಲಿಪಾಲ್ ಸೇರಿ 395 ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚಿನ ಹಾವಳಿ
author img

By

Published : Mar 5, 2021, 12:07 AM IST

ಭುವನೇಶ್ವರ್, ಒಡಿಶಾ: ಕೇವಲ ಮೂರು ದಿನಗಳಲ್ಲಿ ಮಯೂರ್​ಭಂಜ್ ಜಿಲ್ಲೆಯ ಸಿಮ್ಲಿಪಾಲ್ ವನ್ಯಜೀವಿ ಸಂರಕ್ಷಣಾ ತಾಣ ಸೇರಿದಂತೆ ಸುಮಾರು 395 ಅರಣ್ಯ ಪ್ರದೇಶಗಳನ್ನು ಕಾಳ್ಗಿಚ್ಚು ಆವರಿಸಿದೆ ಎಂದು ಫಾರೆಸ್ಟ್ ಸರ್ವೇ ಆಫ್ ಇಂಡಿಯಾ(ಎಫ್​ಎಸ್​ಐ) ಮಾಹಿತಿ ನೀಡಿದೆ.

ಮೂರು ದಿನಗಳಿಂದ ಸಿಮ್ಲಿಪಾಲ್ ಸೇರಿದಂತೆ ಹಲವೆಡೆ ಕಾಳ್ಗಿಚ್ಚಿನ ಹಾವಳಿ ಮಿತಿ ಮೀರುತ್ತಿದ್ದು, ವನ್ಯ ಜೀವಿಗಳು, ವೃಕ್ಷಗಳು, ಔಷಧೀಯ ಸಸಿಗಳು ಸೇರಿದಂತೆ ಕಾಡಿನ ಅತ್ಯಮೂಲ್ಯ ಸಂಪತ್ತು ನಾಶವಾಗಿದೆ ಎಂದು ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಈಟಿವಿ ಭಾರತ್​ಗೆ ದಕ್ಷಿಣ ಏಷ್ಯಾದ ಡಿಜಿಟಲ್​ ಮೀಡಿಯಾ ಪ್ರಶಸ್ತಿ

ಗುರುವಾರ ಸುಮಾರು 154 ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇನ್ನೂ ಹಲವೆಡೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಈವರೆಗೆ ಕಾಳ್ಗಿಚ್ಚು ಕಾಣಿಸಿಕೊಂಡು 10 ದಿನಗಳು ಕಳೆದಿದ್ದು, ಅಗ್ನಿ ಶಾಮಕ ದಳ, ಇತರೇ ಪಡೆಗಳು ಬೆಂಕಿ ನಂದಿಸಲು ಹರಸಾಹಸ ನಡೆಸುತ್ತಿವೆ.

ಸಿಮ್ಲಿಪಾಲ್ ಅಭಯಾರಣ್ಯದ ಕೇಂದ್ರ ಮತ್ತು ಬಫರ್ ಪ್ರದೇಶಗಳಿಗೆ ಬೆಂಕಿ ಹರಡುವುದನ್ನು ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಬೆಂಕಿ ನಂದಿಸುವ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಉದ್ಯಾನದ ಪ್ರಮುಖ ಪ್ರದೇಶಗಳು ಸುರಕ್ಷಿತವಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.