ಮಧ್ಯಪ್ರದೇಶ: ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವ ವೈದ್ಯೆಯೊಬ್ಬರು ದೇಹಕ್ಕೆ ಶಂಕಾಸ್ಪದ ರಾಸಾಯನಿಕ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ವಾಲಿಯರ್ ಮೂಲದ ಸ್ನಾತಕೋತ್ತರ ಪದವಿ ಪಡೆದ ಆಕಾಂಕ್ಷಾ ಮಹೇಶ್ವರಿ ಮೃತ ವೈದ್ಯೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿ ಬರೆದ ಡೆಟ್ನೋಟ್ ಪತ್ತೆಯಾಗಿದ್ದು, 'ನಾನು ಅಷ್ಟೊಂದು ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. 'ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ಇತರೆ ವೈದ್ಯರು ಮತ್ತು ಆಕಾಂಕ್ಷಾ ಸಹೋದ್ಯೋಗಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯಿಂದ ಆಕೆಯ ಸ್ನೇಹಿತರು ಮತ್ತು ಕುಟುಂಬಸ್ಥರು ಆಘಾತಗೊಳಗಾಗಿದ್ದಾರೆ. ಶವ ಪರೀಕ್ಷೆಯ ವರದಿ ಬರುವವರೆಗೂ ಪ್ರಕರಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ; ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ವಶಕ್ಕೆ ಪಡೆದ ಪೊಲೀಸರು
ಮೂಲಗಳ ಪ್ರಕಾರ, ಮಧ್ಯಪ್ರದೇಶದ ಅತಿದೊಡ್ಡ ಸರ್ಕಾರಿ ವೈದ್ಯಕೀಯ ಕಾಲೇಜು ಗಾಂಧಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಹಾಸ್ಟೆಲ್ ಕೋಣೆಯಲ್ಲಿ ಬುಧವಾರ ಸಂಜೆ 7:30 ರ ಸುಮಾರಿಗೆ ವೈದ್ಯೆ ಶವವಾಗಿ ಪತ್ತೆಯಾಗಿದ್ದಾರೆ. ಬೆಳಗ್ಗೆ ಕರ್ತವ್ಯಕ್ಕೆ ತೆರಳಿದ್ದು, ಅನಾರೋಗ್ಯದ ಕಾರಣ ನೀಡಿ ಬೇಗನೇ ತಮ್ಮ ಹಾಸ್ಟೆಲ್ ರೂಮ್ಗೆ ಮರಳಿದ್ದರು. ಸಂಜೆ ಕೆಲಸ ಮುಗಿದ ನಂತರ ಹಾಸ್ಟೆಲ್ ರೂಮ್ಗೆ ಬಂದ ಇತರೆ ಕೆಲವು ವೈದ್ಯರು, ಆಕಾಂಕ್ಷಾ ಅವರ ಕೊಠಡಿಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಜಿಎಂಸಿ ಮುಖ್ಯಸ್ಥರು ಮತ್ತು ಹಿರಿಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:
ತಂದೆಗೆ ಭಾವನಾತ್ಮಕ ಪತ್ರ ಬರೆದು ನವ ವಿವಾಹಿತೆ ವೈದ್ಯೆ ಆತ್ಮಹತ್ಯೆ: ಸುಸೈಡ್ ಕಾರಣ ಇನ್ನೂ ನಿಗೂಢ!
ರೈಲಿಗೆ ತಲೆ ಕೊಟ್ಟು ಯುವ ವೈದ್ಯ ಸಾವು ಪ್ರಕರಣ: ಸಾವಿನ ಹಿಂದೆ ಅಡಗಿತ್ತು ಹನಿಟ್ರ್ಯಾಪ್!