ಫಿರೋಜ್‌ಪುರ: ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದಿಂದ 10 ಕೆಜಿ ಹೆರಾಯಿನ್ ಅನ್ನು ಬಿಎಸ್‌ಎಫ್ ಯೋಧರು ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ 29 ಬಿಎಸ್ಎಫ್ ಬೆಟಾಲಿಯನ್ ಮಮದೋಟ್ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಗಟ್ಟಿ ಹಯಾತ್ ಪಟ್ಟಣದ ಬಳಿ ಬಿಎಸ್ಎಫ್ ಚೆಕ್ ಪೋಸ್ಟ್ ಇದೆ. ದಟ್ಟವಾದ ಮಂಜಿನ ಲಾಭವನ್ನು ಪಡೆದ ಕಳ್ಳಸಾಗಣೆದಾರರು ಮಾದಕ ದ್ರವ್ಯವಾದ ಹೆರಾಯಿನ್ವುಳ್ಳ ಪೊಟ್ಟಣಗಳು ಭಾರತದ ಗಡಿಯೊಳಗೆ ಅಂದರೆ ಫಿರೋಜ್‌ಪುರ ವ್ಯಾಪ್ತಿಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಈ ವೇಳೆ ಎಚ್ಚೆತ್ತ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿ ಶೋಧ ಕಾರ್ಯ ಕೈಗೊಂಡಾಗ ಅಲ್ಲಿ 10 ಕೆಜಿ ಹೆರಾಯಿನ್ ಪತ್ತೆಯಾಗಿದೆ. ವಶಪಡಿಸಿಕೊಂಡ ಹೆರಾಯಿನ್ ಮೌಲ್ಯವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 50 ಕೋಟಿಗೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.