ಶಿವಮೊಗ್ಗ:ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ (ಶಿಮೂಲ್) ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆದಿದ್ದು, ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಅಯ್ಕೆಯಾಗಿದೆ. ಅಧ್ಯಕ್ಷರಾಗಿ ಸಾಗರ ವಿಭಾಗದಿಂದ ವಿದ್ಯಾಧರ ಹಾಗೂ ಉಪಾಧ್ಯಕ್ಷರಾಗಿ ದಾವಣಗೆರೆ ಜಿಲ್ಲೆಯ ಚೇತನ್ ಎಸ್ ನಾಡಿಗೇರ್ ಆಯ್ಕೆಯಾಗಿದ್ದಾರೆ.
ಶಿಮೂಲ್ ಹಾಲು ಒಕ್ಕೂಟವು 14 ಜನ ನಿರ್ದೆಶಕರನ್ನು ಒಳಗೊಂಡಿದ್ದು, ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿದ್ಯಾಧರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಚೇತನ ನಾಡಿಗೇರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಇಬ್ಬರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.