ಕರ್ನಾಟಕ

karnataka

ETV Bharat / snippets

ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿಗೆ ಯಾವುದೇ ಸಮಸ್ಯೆ ಇಲ್ಲ: ಮುದ್ರಾಂಕ ಇಲಾಖೆ

SUB REGISTRAR OFFICE
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Oct 23, 2024, 8:14 AM IST

ಬೆಂಗಳೂರು: ರಿಜಿಸ್ಟ್ರೇಷನ್ ಕಾಯ್ದೆ 1908ರ ನಿಯಮ 22(B) ತಿದ್ದುಪಡಿ ವಿರೋಧಿಸಿ ಉಪನೋಂದಣಾಧಿಕಾರಿಗಳು ನೋಂದಣಿ ಸ್ಥಗಿತಗೊಳಿಸಿರುವುದಾಗಿ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕೆ ಸಂಬಂಧಿಸಿದಂತೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಅ.21ರಂದು ರಿಜಿಸ್ಟ್ರೇಷನ್ ಕಾಯ್ದೆ 1908ರ ನಿಯಮ 22(B) ತಿದ್ದುಪಡಿ ವಿರೋಧಿಸಿ ಐದಾರು ಉಪನೋಂದಣಾಧಿಕಾರಿಗಳು ನೋಂದಣಿ ಕೆಲಕಾಲ ಸ್ಥಗಿತಗೊಳಿಸಿದ್ದು, ಕಂಡು ಬಂದಿರುತ್ತದೆ. ಆದರೆ, ನಂತರ ಉಪನೋಂದಣಾಧಿಕಾರಿಗಳೊಂದಿಗೆ ಚರ್ಚಿಸಿ ನೋಂದಣಿ ಕಾರ್ಯ ಎಂದಿನಂತೆಯೇ ಮುಂದುವರೆಸಲು ಕ್ರಮವಹಿಸಲಾಗಿದೆ.

ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ. ಯಾರೇ ನೋಂದಣಿ ಮಾಡಿಸಿಕೊಳ್ಳಬೇಕಾದವರು ನೋಂದಣಿ ಮಾಡಿಸಬಹುದಾಗಿರುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ದಯಾನಂದ ಕೆ.ಎ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಬಿಬಿಎಂಪಿ ವ್ಯಾಪ್ತಿಯಲ್ಲೂ ಇ - ಖಾತೆ ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ - e account Property registration

ABOUT THE AUTHOR

...view details