Samsung Foldable Smartphone Unveiled: Samsung ತನ್ನ Z Fold 6ನ ಸುಧಾರಿತ ರೂಪಾಂತರವನ್ನು ಪರಿಚಯಿಸಿದೆ. Galaxy Z ಫೋಲ್ಡ್ ವಿಶೇಷ ಆವೃತ್ತಿಯಾಗಿದ್ದು, ಇದು ಸುಲಭವಾಗಿ ಫೋಲ್ಡಿಂಗ್ ಮಾಡಬಹುದಾದ ಫೋನ್ ಆಗಿದೆ. Galaxy Z ಫೋಲ್ಡ್ ವಿಶೇಷ ಆವೃತ್ತಿಯು Galaxy Z Fold 6 ಹೋಲುತ್ತದೆ. ಇತ್ತೀಚಿನ ಸಣ್ಣಪುಟ್ಟ ಅಪ್ಡೇಟ್ನೊಂದಿಗೆ ಈ ಫೋನ್ ಸ್ವಲ್ಪ ಹಗುರವಾಗಿದೆ ಮತ್ತು ಸ್ಲಿಮ್ ಆಗಿದೆ. ಒಟ್ಟಾರೆ ಈ ಫೋನ್ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಇದರ ಬೆಲೆ ಎಷ್ಟು: ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದೆ. Samsung ತನ್ನ ಲಭ್ಯತೆಯನ್ನು ಚೀನಾಕ್ಕೆ ವಿಸ್ತರಿಸಬಹುದು. ಈ ಸಾಧನವು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಬರದಿರಬಹುದು. ಇದರ ಬೆಲೆ ಭಾರತದ ರೂಪಾಯಿಗಳಲ್ಲಿ ಹೇಳೋದಾದರೆ ಸುಮಾರು ರೂ 1,70,207 ಇರಬಹುದು ಎಂದು ಅಂದಾಜಿಸಲಾಗಿದೆ. ಇದು Galaxy Z Fold 6 ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ.
ಈ ಮಡಚಬಹುದಾದ ಫೋನ್ನ ವೈಶಿಷ್ಟ್ಯಗಳು ಹೀಗಿವೆ: ಇದು 200MP ವೈಡ್-ಆಂಗಲ್ ಕ್ಯಾಮೆರಾ, 6.5-ಇಂಚಿನ ಕವರ್ ಡಿಸ್ಪ್ಲೇ ಮತ್ತು 8.0-ಇಂಚಿನ ಫೋಲ್ಡಬಲ್ ಡಿಸ್ಪ್ಲೇ ಒಳಗೊಂಡಂತೆ ಸ್ವಲ್ಪ ಹೆಚ್ಚು ಪ್ಯಾಕ್ ಮಾಡುತ್ತದೆ. Galaxy Z ಫೋಲ್ಡ್ ವಿಶೇಷ ಆವೃತ್ತಿಯನ್ನು ಅತಿದೊಡ್ಡ ಫೋಲ್ಡಿಂಗ್ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಆಗಿದೆ. ರೆಂಡರ್‌ಗಳ ಪ್ರಕಾರ, ಈ ಫೋನ್ ಫೋಲ್ಡ್ ಮಾಡಿದಾಗ ಸ್ವಲ್ಪ ಕಡಿಮೆ ಗೋಚರ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದು ಇನ್ನೂ 16GB RAM ಮತ್ತು 512 GB ಸ್ಟೋರೇಜ್ ಹೊಂದಿದೆ. ಅದೇ Snapdragon 8 Gen 3 SoC ಪ್ರೋಸೆಸರ್ ಆಧರಿಸಿದೆ. ಆದರೂ, ಅಂಡರ್-ಡಿಸ್ಪ್ಲೇ ಕ್ಯಾಮೆರಾ, S-ಪೆನ್‌ಗೆ ಬೆಂಬಲದಂತಹ ಕೆಲವು ವಿಷಯಗಳಲ್ಲಿ ಇದು ಕಳೆದುಕೊಳ್ಳುತ್ತದೆ ಮತ್ತು ಬ್ಲ್ಯಾಕ್ ಶಾಡೋದಲ್ಲಿ ಮಾತ್ರ ಲಭ್ಯವಿದೆ.
Samsung Galaxy Z Fold ವಿಶೇಷ ಆವೃತ್ತಿಯು ದಕ್ಷಿಣ ಕೊರಿಯಾದಲ್ಲಿ ಅಕ್ಟೋಬರ್ 25 ರಿಂದ ಮಾರಾಟವಾಗಲಿದೆ. ಅಕ್ಟೋಬರ್ 31ರ ಮೊದಲು ಈ ಮೊಬೈಲ್ ಖರೀದಿದಾರರು Galaxy Ring, Galaxy Watch Ultra, Galaxy Buds3 Pro ಮತ್ತು Galaxy Tab S10 Ultra ಉತ್ಪನ್ನಗಳಲ್ಲಿ ಕೆಲವು ರಿಯಾಯಿತಿ ಕೂಪನ್‌ಗಳನ್ನು ಪಡೆಯಬಹುದಾಗಿದೆ.
ಓದಿ: ಮದರ್ಬೋರ್ಡ್ ವೈಫಲ್ಯ, ಗ್ರೀನ್ ಲೈನ್ಸ್ ಸಮಸ್ಯೆ, ಉಚಿತ ಪರಿಹಾರಕ್ಕೆ ಮುಂದಾದ OnePlus!