ETV Bharat / snippets

ಹಾಸನದಲ್ಲಿ 3 ಮಂದಿ ಬಾಂಗ್ಲಾ ಪ್ರಜೆಗಳ ಬಂಧನ

Three illegal Bangladeshi immigrants arrested in Hassan
ಬಂಧಿತ ಬಾಂಗ್ಲಾ ಪ್ರಜೆಗಳು (ETV Bharat)
author img

By ETV Bharat Karnataka Team

Published : Oct 23, 2024, 7:58 AM IST

ಹಾಸನ: ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ನಗರದಲ್ಲಿ ವಾಸವಿದ್ದ ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಕಲ್ ಹೊಕ್ಕು ಬಂಧಿತ ಬಾಂಗ್ಲಾ ಪ್ರಜೆಗಳು. ನಗರದ ಗದ್ದೆಹಳ್ಳ ಸಮೀಪದ ನಾಲ್ಕನೇ ಅಡ್ಡ ರಸ್ತೆಯಲ್ಲಿರುವ ಜುಬೇರ್ ಎಂಬುವವರ ಮನೆಯಲ್ಲಿ ವಾಸವಿದ್ದ ಈ ಮೂವರು ಜುಬೇರ್ ಅವರ ಮನೆ ಕಟ್ಟಡ ಕಾಮಗಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದಿದ್ದ ನುಸುಳುಕೋರರು, ಅಲ್ಲಿನ ನಿವಾಸಿಗಳು ಎಂಬಂತೆ ಮೂವರೂ ನಕಲಿ ಆಧಾರ್ ಕಾರ್ಡ್ ಹೊಂದಿದ್ದಾರೆ. ಮೂವರ ವಿರುದ್ಧವೂ ಪೆನ್ನನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನುಸುಳುಕೋರರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ಆರೋಪ: ಪಾಕ್ ಪ್ರಜೆ ಸೇರಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.