ETV Bharat / bharat

ಜಾರ್ಖಂಡ್‌ಗೆ ಮತ್ತೆ ಹೇಮಂತ್​ ಸೊರೇನ್​ ಸಿಎಂ: ನ.28 ರಂದು ಪ್ರಮಾಣ ವಚನ ಸ್ವೀಕಾರ - ಜಾರ್ಖಂಡ್‌ ವಿಧಾನಸಭೆ ಚುನಾವಣೆ

ಜಾರ್ಖಂಡ್​​ನಲ್ಲಿ ಜೆಎಂಎಂ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಹೇಮಂತ್​ ಸೊರೆನ್​ ನವೆಂಬರ್​ 28 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಜಾರ್ಖಂಡ್‌ಗೆ ಮತ್ತೆ ಹೇಮಂತ್​ ಸೊರೇನ್​ ಸಿಎಂ
ಜಾರ್ಖಂಡ್‌ಗೆ ಮತ್ತೆ ಹೇಮಂತ್​ ಸೊರೇನ್​ ಸಿಎಂ (ETV Bharat)
author img

By PTI

Published : Nov 24, 2024, 11:06 PM IST

ರಾಂಚಿ (ಜಾರ್ಖಂಡ್​) : ಬಿಜೆಪಿಯ ತೀವ್ರ ಸವಾಲು ಮೆಟ್ಟಿನಿಂತು ಮತ್ತೆ ಅಧಿಕಾರದ ಗದ್ದುಗೆ ಏರಿರುವ ಜಾರ್ಖಂಡ್​ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್​ ಮೈತ್ರಿಯು ಸರ್ಕಾರ ರಚನೆಗೆ ಸಜ್ಜಾಗಿದೆ. ಹೇಮಂತ್ ಸೊರೆನ್ ಅವರನ್ನು ಜೆಎಂಎಂ ತನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಭಾನುವಾರ ಮಾಡಿಕೊಂಡಿದೆ.

ಸೊರೆನ್​ ಅವರು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಇಂದು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಜ್ಯಪಾಲರು ನವೆಂಬರ್​ 28 ರಂದು ಪ್ರಮಾಣ ಸ್ವೀಕಾರಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಸೊರೆನ್ ಅವರು ಜಾರ್ಖಂಡ್‌ನ 14 ನೇ ಮತ್ತು ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲರ ಭೇಟಿಗೂ ಮೊದಲು ಸೊರೆನ್​​ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಂತ್​ ಸೊರೆನ್​, "ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದೇವೆ. ಮೈತ್ರಿ ಪಕ್ಷದ ಶಾಸಕರ ಬೆಂಬಲ ಪತ್ರವನ್ನೂ ನೀಡಿದ್ದೇವೆ. ನವೆಂಬರ್ 28 ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ" ಎಂದು ತಿಳಿಸಿದರು.

ಕಾಂಗ್ರೆಸ್​ ಬೆಂಬಲ: ಇದಕ್ಕೂ ಮುನ್ನ ಹೇಮಂತ್ ಸೊರೆನ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮೈತ್ರಿಕೂಟದ ಮುಖಂಡರು ಮತ್ತು ಶಾಸಕರು ಅವರನ್ನು ಅವಿರೋಧವಾಗಿ ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದರು. ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್, ಪಕ್ಷದ ಹಿರಿಯ ನಾಯಕ ರಾಜೇಶ್ ಠಾಕೂರ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಹೇಮಂತ್ ಸೊರೆನ್ ನೇತೃತ್ವದ ಅವರ ಜೆಎಂಎಂ ಮತ್ತು ಕಾಂಗ್ರೆಸ್​ ಮೈತ್ರಿಯು ಜಾರ್ಖಂಡ್‌ನಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿತು. 81 ಸದಸ್ಯ ಬಲದ ವಿಧಾನಸಭೆಯಲ್ಲಿ 56 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 24 ಸೀಟು ಮಾತ್ರ ಗೆದ್ದಿದೆ. ಬಹುಮತಕ್ಕೆ ಬೇಕಾಗಿದ್ದ 41 ಸೀಟುಗಳು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್​​ ಸೊರೆನ್​ ಅವರು ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾಗಿದ್ದರು. ಇದರಿಂದ ಜನವರಿಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದರಿಂದ ಸುಮಾರು ಐದು ತಿಂಗಳ ನಂತರ ಜೂನ್ 28 ರಂದು ಜೈಲಿನಿಂದ ಹೊರಬಂದು ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಮಹಾಯುತಿ ಗೆಲುವಿನ ಸುನಾಮಿಯಲ್ಲಿ ಕೊಚ್ಚಿ ಹೋದ ವಿಪಕ್ಷ ನಾಯಕ ಸ್ಥಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.