ETV Bharat / lifestyle

ಗರಿ ಗರಿ "ಮಸಾಲೆ ವಡೆ" ತಯಾರಿಸಿ; ಈ ರೀತಿ ಮಾಡಿದರೆ ತುಂಬಾ ರುಚಿ!

ಎಡೆಬಿಡದೆ ಸುರಿಯುತ್ತಿರುವ ಮಳೆ, ಕುಟುಂಬಸ್ಥರೆಲ್ಲ ಮನೆಯಲ್ಲೇ ಠಿಕಾಣಿ.. ಸಂಜೆ ವೇಳೆಗೆ ಟೀ ಜೊತೆ ಜೊತೆ ಏನಾದರೂ ಸ್ನ್ಯಾಕ್ಸ್​ ಬೇಕೆಂಬ ಬಯಕೆ ಇದ್ದೇ ಇರುತ್ತೆ. ಅದಕ್ಕಾಗಿ ನಿಮಗೆ ಮಸಾಲೆ ವಡೆ ರೆಸಿಪಿ ನಿಮಗಾಗಿ ಇಲ್ಲಿದೆ.

Masala Vada
ಮಸಾಲೆ ವಡೆ (ETV Bharat)
author img

By ETV Bharat Lifestyle Team

Published : Oct 21, 2024, 6:02 PM IST

How to Make Masala Vada: ಸಂಜೆ ಟೀ ಸಮಯದಲ್ಲಿ ಸಮೋಸ, ಪಕೋಡ, ಮೆಣಸಿನಕಾಯಿ ಬಜ್ಜಿ ತಿನ್ನಲು ಅನೇಕರು ಇಷ್ಟಪಡುತ್ತಾರೆ. ನೀವು ಸ್ವಲ್ಪ ಮಸಾಲೆಯುಕ್ತ ತಿಂಡಿ ಜೊತೆ ಬಿಸಿ ಬಿಸಿ ಟೀ/ಕಾಫಿ ಕುಡಿದರೆ ಆ ಫೀಲಿಂಗೇ ಬೇರೆ. ಆದರೆ, ಈ ಮಸಾಲೆ ವಡೆಗಳನ್ನು ನಾವು ಹೇಳಿದಂತೆ ಮಾಡಿದರೆ.. ರಸ್ತೆ ಬದಿಯ ಗಾಡಿಯಲ್ಲಿ ಸಿಗುವಷ್ಟು ರುಚಿಯನ್ನು ಸವಿಯಬಹುದು. ಮಕ್ಕಳು ಕೂಡ ಅವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಎಲ್ಲರಿಗೂ ಇಷ್ಟವಾದ ಗರಿಗರಿ ಮತ್ತು ರುಚಿಕರವಾದ ಮಸಾಲೆ ವಡೆಗಳನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ನಾವ್​ ತಿಳಿಸುತ್ತೇವೆ..

ಬೇಕಾಗುವ ಪದಾರ್ಥಗಳು:

  • ಹಸಿಕಡ್ಲೆ ಹಿಟ್ಟು - ಒಂದು ಕಪ್
  • ಶೇಂಗಾ ಕಾಳು - ಕಾಲು(1/4) ಕಪ್
  • ಈರುಳ್ಳಿ - ಅರ್ಧ ಕಪ್
  • ಉಪ್ಪು - ರುಚಿಗೆ ತಕ್ಕಷ್ಟು
  • ಸ್ವಲ್ಪ ದಾಲ್ಚಿನ್ನಿ
  • ಲವಂಗ-4
  • ಅರಿಶಿನ - ಚಿಟಿಕೆ
  • ಕೊತ್ತಂಬರಿ ಸೊಪ್ಪು - ಟೇಬಲ್​ ಸ್ಪೂನ್
  • ಜೀರಿಗೆ - 1 ಟೀಸ್ಪೂನ್​
  • ಮೆಣಸಿನಕಾಯಿ - 3
  • ಕರಿಮೆಣಸು - 2
  • ಕೊತ್ತಂಬರಿ ಪುಡಿ - ಸ್ವಲ್ಪ
  • ಕರಿಬೇವಿನ ಎಲೆಗಳು
  • ಒಂದು ತುಂಡು ಶುಂಠಿ
  • ಬೆಳ್ಳುಳ್ಳಿ ಎಸಳು - 8
  • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ;

  • ಮೊದಲು ಒಂದು ಬಟ್ಟಲಿನಲ್ಲಿ ಕಡ್ಲಿಬೇಳೆ ಮತ್ತು ಸೊಪ್ಪನ್ನು ತೆಗೆದುಕೊಳ್ಳಿ
  • ಇದನ್ನು ಸ್ವಚ್ಛವಾಗಿ ತೊಳೆದು ಒಂದರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ಮಸಾಲೆ ವಡೆಯಲ್ಲಿ ಶೇಂಗಾ ಸೇರಿಸುವುದರಿಂದ ವಡೆಗಳ ರುಚಿ ಹೆಚ್ಚಾಗುತ್ತದೆ.
  • ನಂತರ ಕೊತ್ತಂಬರಿ ಸೊಪ್ಪು, ದಾಲ್ಚಿನ್ನಿ, ಲವಂಗ, ಜೀರಿಗೆ, ಶುಂಠಿ ತುಂಡು, ಬೆಳ್ಳುಳ್ಳಿ ಎಸಳು, ಹಸಿರು ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಅವುಗಳನ್ನು ರುಬ್ಬಿಕೊಳ್ಳಿ.
  • ಅದರಲ್ಲಿ ನೆನೆಸಿದ ಹಸಿಕಡ್ಲಿ ಬೇಳೆಯನ್ನು ಹಾಕಿ. ಈ ಮಿಶ್ರಣವನ್ನು ರುಬ್ಬಿಕೊಳ್ಳಿ ಮತ್ತು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  • ರುಬ್ಬುವಾಗ ನೀರು ಹಾಕಬೇಡಿ. (ವಡೆ ಹಿಟ್ಟು ಸ್ವಲ್ಪ ಗಟ್ಟಿಯಾಗಿದ್ದರೆ ಮಾತ್ರ ಮಸಾಲ ವಡೆಗಳು ಗರಿಗರಿ ಮತ್ತು ರುಚಿಯಾಗಿರುತ್ತವೆ)
  • ಈಗ ಹಿಟ್ಟಿಗೆ ಹೆಚ್ಚಿದ ಈರುಳ್ಳಿ ತುಂಡುಗಳು, ಅರಿಶಿನ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಿಟ್ಟನ್ನು ಚೆನ್ನಾಗಿ ಕಲಸಿ
  • ಈಗ ಡೀಪ್ ಫ್ರೈ ಮಾಡಲು ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ, ಅದರಲ್ಲಿ ಎಣ್ಣೆಯನ್ನು ಸುರಿದು ಬಿಸಿ ಮಾಡಿ
  • ಎಣ್ಣೆ ಬಿಸಿಯಾದ ನಂತರ ಕೈಗೆ ಎಣ್ಣೆ ಹಚ್ಚಿ ಪನಿಯಾಣಗಳನ್ನು ಹುರಿದು ಎಣ್ಣೆಗೆ ಹಾಕಿ
  • ಒಂದು ನಿಮಿಷದ ನಂತರ, ತಿರುಗಿಸಿ ಮತ್ತು ಎರಡೂ ಬದಿಗಳಲ್ಲಿ ಚೆನ್ನಾಗಿ ಬೇಯಿಸಿ
  • ತುಂಬಾ ರುಚಿ ಮತ್ತು ಗರಿಗರಿಯಾದ ಮಸಾಲೆ ವಡೆಗಳು ಈಗ ಸಿದ್ಧವಾಗುತ್ತವೆ.

ನೀವು ಇಷ್ಟಪಟ್ಟರೆ, ಈ ಲಘು ಪಾಕವಿಧಾನವನ್ನು ಪ್ರಯತ್ನಿಸಿ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಸವಿಯಿರಿ.

ಇದನ್ನೂ ಓದಿ - ಸ್ಪಂಜಿನಂತೆ ಮೃದುವಾದ ಇಡ್ಲಿಯನ್ನು ಮನೆಯಲ್ಲೇ ತಯಾರಿಸಿ; ಈ ಟಿಪ್ಸ್​ ಪಾಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.