thumbnail

ಕಲಬುರಗಿ: ತಪೋವನ ಶಾಖಾ ಮಠದಲ್ಲಿ ಅದ್ಧೂರಿಯಾಗಿ ಜರುಗಿದ ರೊಟ್ಟಿ, ಭಜ್ಜಿ ಪಲ್ಯ ಜಾತ್ರೆ

By ETV Bharat Karnataka Team

Published : 2 hours ago

ಕಲಬುರಗಿ: ರಾಶಿ ರಾಶಿಗಟ್ಟಲೆ ರೊಟ್ಟಿ, ನಾನಾ ತರಕಾರಿಗಳಿಂದ ತಯಾರಿಸಿದ ಭಜ್ಜಿ ಪಲ್ಲೆ. ಭಕ್ತಿಭಾವದಿಂದ ಸವಿದ ಭಕ್ತರು. ಇದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶಾಖಾಪುರದಲ್ಲಿ ಕಂಡು ಬಂದ ದೃಶ್ಯ. 

ನಿನ್ನೆ ಗ್ರಾಮದ ವಿಶ್ವರಾಧ್ಯ ತಪೋವನ ಶಾಖಾ ಮಠದ ರೊಟ್ಟಿ ಜಾತ್ರೆಯ ಭವ್ಯವಾಗಿ ನೆರವೇರಿತು. ಕೋಮು ಸೌಹಾರ್ದತೆ ಸಾರುವ ವಿಶ್ವರಾಧ್ಯ ತಪೋವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಲಿಂಗೈಕ್ಯ ಶ್ರೀ ಸಿದ್ದರಾಮ ಶಿವಯೋಗಿಗಳ 74ನೇ ಪುಣ್ಯಸ್ಮರಣೆ ನಿಮಿತ್ತ ಭಕ್ತಿ, ಭಾವ ವೈಭವದಿಂದ ರೊಟ್ಟಿ ಜಾತ್ರೆ ನಡೆಯಿತು.

ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಹೂವುಗಳಿಂದ ಶೃಂಗರಿಸಿ, ವಿಶೇಷ ಪೂಜೆ ಕೈಯಂಕಾರ್ಯಗಳನ್ನು ಕೈಗೊಳ್ಳಲಾಯಿತು. ವಿಶ್ವರಾಧ್ಯರ ಪಲ್ಲಕಿ ಉತ್ಸವ ಮೆರವಣಿಗೆ ಬಾಜಾ ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ನೆರವೇರಿತು. 

ರೊಟ್ಟಿ, ಭಜ್ಜಿ ಪಲ್ಯ ಜಾತ್ರೆಯಲ್ಲಿ ಕಲಬುರಗಿ ಸೇರಿ ಅಕ್ಕ ಪಕ್ಕದ ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ಧಾರ್ಮಿಕ ಸಭೆ ನಡೆದಿದ್ದು ನಾಡಿನ‌ ಅನೇಕ ಹರಗುರು ಚರಮೂರ್ತಿಗಳು, ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಸೇರಿದಂತೆ ರಾಜಕೀಯ ಗಣ್ಯರು, ಅಪಾರ ಪ್ರಮಾಣದಲ್ಲಿ ಭಕ್ತಗಣ ಪಾಲ್ಗೊಂಡಿತ್ತು.

ಇದನ್ನೂ ಓದಿ: ದೆಹಲಿಗೂ ಚೆನ್ನಮ್ಮನ ಇತಿಹಾಸ ಕೊಂಡೊಯ್ಯಬೇಕಿದೆ: 200ನೇ ಕಿತ್ತೂರು ವಿಜಯೋತ್ಸವದಲ್ಲಿ ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.