ETV Bharat / snippets

ಬನ್ನೇರುಘಟ್ಟ ಉದ್ಯಾನವನದ ಆನೆ ಕಾವಾಡಿಗ ಕೆರೆಯಲ್ಲಿ ಮುಳುಗಿ ಸಾವು

elephant kavadi
ಸೀಗೆಕಟ್ಟೆ ಕೆರೆ, ಆನೆ ಕಾವಾಡಿ ಗೋಪಾಲ್ (ETV Bharat)
author img

By ETV Bharat Karnataka Team

Published : 11 hours ago

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ಕಾವಾಡಿ ಗೋಪಾಲ್ ಎಂಬವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆನೆ ಪಾಲನಾ ಕೇಂದ್ರ ಪ್ರದೇಶದ ಸೀಗೆಕಟ್ಟೆ ಕೆರೆಯಲ್ಲಿ 10 ವರ್ಷದ ಸಂಪತ್ ಎಂಬ ಆನೆಯನ್ನು ಸ್ವಚ್ಛಗೊಳಿಸುವ ವೇಳೆ ಘಟನೆ ನಡೆದಿದೆ.

ಆನೆಯ ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ಕೆರೆಯ ಆಳದಲ್ಲಿ ಮುಳುಗಿ ಕಾವಾಡಿಗ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿಯೇ ಇದ್ದ ಇತರೆ ಸಿಬ್ಬಂದಿ ಅವರನ್ನು ರಕ್ಷಿಸಿಸಲು ಪ್ರಯತ್ನಿಸಿದರೂ, ಸಫಲವಾಗಿಲ್ಲ. ತಕ್ಷಣಕ್ಕೆ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸೇವೆಗಳಿಗೆ ಮಾಹಿತಿ ನೀಡಲಾಗಿತ್ತು. ಎರಡು ಗಂಟೆಗಳ ಹುಡುಕಾಟದ ಬಳಿಕ ತುರ್ತು ಸೇವಾ ಸಿಬ್ಬಂದಿ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಪತ್ತೆ; ಕೊಲೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.