ETV Bharat / technology

ಆಂಡ್ರಾಯ್ಡ್​ನಿಂದ ಬೇರ್ಪಟ್ಟು, ಹೊಸ ಆಪರೇಟಿಂಗ್​ ಸಿಸ್ಟಮ್​ ಪರಿಚಯಿಸಿದ Huawei! - HARMONYOS NEXT

HarmonyOS Next: Huawei ಕಂಪನಿ ಗೂಗಲ್​ ಆಂಡ್ರಾಯ್ಡ್​ನಿಂದ ದೂರವಾಗುವ ಅಧಿಕೃತ ಘೋಷಣೆ ಜೊತೆ ಚೀನಾದಲ್ಲಿ ಹೊಸ ಆಪರೇಟಿಂಗ್​ ಸಿಸ್ಟಮ್​ವೊಂದನ್ನು ಪರಿಚಯಿಸಿದೆ.

HUAWEI  HARMONYOS  HUAWEI OS  ANDROID
ಹೊಸ ಆಪರೇಟಿಂಗ್​ ಸಿಸ್ಟಮ್​ ಪರಿಚಯಿಸಿದ Huawei (Huawei)
author img

By ETV Bharat Tech Team

Published : Oct 24, 2024, 8:32 AM IST

HarmonyOS Next: ಗೂಗಲ್​ ಆಂಡ್ರಾಯ್ಡ್​ನಿಂದ ನಾವು ಅಧಿಕಾರ ರೂಪದಿಂದ ದೂರ ಹೋಗುತ್ತಿದ್ದೇವೆ ಎಂದು Huawei ಅಧಿಕೃತವಾಗಿ ಹೇಳಿದೆ. ಏಕೆಂದರೆ ಕಂಪನಿ ತನ್ನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್​ HarmonyOS Next ಅನ್ನು ಚೀನಾದಲ್ಲಿ ಘೋಷಿಸಿದೆ. ಕಂಪನಿ ಈ ಆಪರೇಟಿಂಗ್​ ಸಿಸ್ಟಮ್​ ಆಂಡ್ರಾಯ್ಡ್ ಓಪನ್​ ಸೋರ್ಸ್​ ಪ್ರೊಜೆಕ್ಟ್​ನಿಂದ​ (AOSP) ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ. ಕರ್ನಲ್​ ಮತ್ತು ಸಿಸ್ಟಮ್​ ಆರ್ಕಿಟೆಕ್ಚರ್​ನಲ್ಲಿ ನಿರ್ಮಿಸಲಾಗಿದ್ದು, ಹೊಸ HarmonyOS Next ಆಪರೇಟಿಂಗ್​ ಸಿಸ್ಟಮ್​ Huaweiನ ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​ ಮತ್ತು ಸ್ಮಾರ್ಟ್​ವಾಚ್​ಗಳಿಗೆ ಶಕ್ತಿ ನೀಡುವುದು.

HarmonyOS Next ಆಪರೇಟಿಂಗ್​ ಸಿಸ್ಟಮ್​ನ ಬೀಟಾ ಪರೀಕ್ಷೆಯನ್ನು Huawei ಕಂಪನಿ ಚೀನಾದಲ್ಲಿ ಕಿರಿನ್​ ಮತ್ತು ಕುನ್ಪೆಂಗ್​ ಚಿಪ್​ಗಳಿಂದ ನಡೆಸಲ್ಪಡುವ ಸಾಧನಗಳಿಗೆ ಪ್ರಾರಂಭಿಸಿದೆ. ಹೋಮ್​ ಮತ್ತು ಲಾಕ್​ ಸ್ಕ್ರೀನ್​ ಕಸ್ಟಮೈಸೇಶನ್​ ಆಪ್ಷನ್​ಗಳು, ವೇಗವಾದ ಅನಿಮೇಷನ್​ಗಳು, ಆ್ಯಪ್​ ಲಾಂಚ್​ ಸ್ಪೀಡ್​, ಎಐ ವೈಶಿಷ್ಟ್ಯಗಳು ಸೇರಿದಂತೆ ಇನ್ನಿತರ ಫೀಚರ್​ಗಳ ಜೊತೆ ಬರಲಿದೆ.

ಪ್ರಮುಖ ಚೀನಿ ಶಾಪಿಂಗ್​, ಪೇಮೆಂಟ್​ ಮತ್ತು ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ಸೇವೆಗಳನ್ನು ಬಳಸಲು HarmonyOS Nextನಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೊಸ ಆಪರೇಟಿಂಗ್​ ಸಿಸ್ಟಮ್​ಗಾಗಿ ಸ್ಥಳೀಯ ಆ್ಯಪ್​ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು Huawei ಕಂಪನಿ AliPay, JD.com, Taobao, Douyin ಮತ್ತು Xiaohongshuಗೆ ಮಾಹಿತಿ ಹಂಚಿಕೊಂಡಿದೆ. HarmonyOS Next ಸುಮಾರು 15 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್​ಗಳನ್ನು ಹೊಂದಿದೆ. ಹೆಚ್ಚಿನವು ಆದಷ್ಟು ಬೇಗ ಬರಲಿವೆ ಎಂದು ಕಂಪನಿ ಹೇಳಿದೆ.

HarmonyOS Next ಅನ್ನು ಸಪೋರ್ಟ್​ ಮಾಡುವ ಸಾಧನಗಳು:

ಸ್ಮಾರ್ಟ್​ಫೋನ್​ಗಳು : Huawei Mate 60, Huawei Mate 60 Pro, Huawei Mate 60 Pro+, Huawei Mate 60 RS ಅಲ್ಟಿಮೇಟ್​ ಡಿಸೈನ್​, Huawei Mate X5, Huawei Mate X5 Tibet version, Huawei Pura 70, Huawei Pura 70 Pro, Huawei Pura 70 Pro+, Huawei Pura 70 Ultra, Huawei Pocket 2, Huawei Pocket 2 ಆರ್ಟ್​ ಕಸ್ಟಮೈಸ್​ ವರ್ಸನ್​.

ಟ್ಯಾಬ್ಲೆಟ್​ಗಳು: Huawei MatePad Pro 13.2 ಇಂಚು​, Huawei MatePad Pro 13.2 ಇಂಚು​ ಕ್ಲಾಸಿಕ್​ ವರ್ಸನ್​, Huawei Mate 60 Pro+, Huawei MatePad Pro 11 ಇಂಚು​ 2024.

ಸ್ಮಾರ್ಟ್​ವಾಚ್​ಗಳು: Huawei WATCH Ultimate, Huawei WATCH Ultimate Design Extraordinary Master.

Huawei ಕಂಪನಿ ತನ್ನ ಹೊಸ ಒಎಸ್​ನಲ್ಲಿ ಕಸ್ಟಮೈಸ್​ ಆಗಿ ಮಾಡಬಹುದಾದ ಹೋಮ್​ ಮತ್ತು ಲಾಕ್​ ಸ್ಕ್ರೀನ್​ ಅನ್ನು ಪ್ರಸ್ತುತ ಪಡಿಸುತ್ತಿದೆ. ಇದರಲ್ಲಿ ಡಿಸೈನ್​ ಅಂಶಗಳನ್ನು Harmony OSನಿಂದ ಪಡೆಯಲಾಗಿದೆ. ಇದು ಸುಲಭವಾದ ಸಂವಹನಕ್ಕಾಗಿ ಫಿಜಿಕಲ್​ ಲೈಟಿಂಗ್​ ಎಂಜಿನ್​ ಮತ್ತು ವಾಲ್​ಪೇಪರ್​ ಫೀಚರ್​ ಹೊಂದಿದೆ.

ಈ ಆಪರೇಟಿಂಗ್​ ಸಿಸ್ಟಮ್​ ಪಂಗು ಎಲ್​ಎಲ್​ಎಮ್​ನಿಂದ ಅಭಿವೃದ್ಧಿಗೊಂಡ ಸೆಲಿಯಾ ಎಐ ಏಜೆಂಟ್​ ಬಳಸಿಕೊಂಡು ಎಐ ಇಂಟಿಗ್ರೇಟ್​ ಮಾಡುತ್ತದೆ. ಪರಿಣಾಮ ವೈಯಕ್ತಿಕ ವಿಷಯ ಮತ್ತು ಸ್ಮಾರ್ಟ್​ ಸರ್ವಿಸ್​ ನೀಡುತ್ತದೆ. ಈ ಸಿಸ್ಟಮ್​ ಶೇಕಡಾ 30ರಷ್ಟು ನಿರ್ಗಳತೆಯನ್ನು ಹೆಚ್ಚಿಸುತ್ತದೆ ಮತ್ತು 1.5GB ಸಿಸ್ಟಮ್​ ಮೆಮೊರಿಯನ್ನು ವಿವರಿಸುತ್ತದೆ. ಅಷ್ಟೇ ಅಲ್ಲ ಸ್ಟಾರ್ ಶೀಲ್ಡ್ ಆರ್ಕಿಟೆಕ್ಚರ್‌ ಜೊತೆ ಬಲವಾದ ಭದ್ರತೆ ಪ್ರದರ್ಶಿಸುತ್ತದೆ.

ಓದಿ: ಅದ್ಭುತ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್​ ​- ಇನ್ಮುಂದೆ ಕಾಂಟ್ಯಾಕ್ಟ್​ ಮ್ಯಾನೇಜ್ಮೆಂಟ್​ ಸುಲಭ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.